Dr Rajkumar: ಕರುನಾಡ ಮುತ್ತುರತ್ನ ಡಾ. ರಾಜ್‌ಕುಮಾರ್ ಅದೊಂದೇ ಕಾರಣಕ್ಕೆ ರಾಜಕೀಯಕ್ಕೆ ಬರಲಿಲ್ಲವಂತೆ !

Dr Rajkumar Birth Anniversary: ನಟ ಸಾರ್ವಭೌಮ ಡಾ. ರಾಜ್‌ಕುಮಾರ್ ರವರು ಸಿನಿಮಾದಲ್ಲಿ ಮನೋರಂಜನೆ ಜೊತೆಗೆ ಸಾಮಾಜಿಕ ಸಂದೇಶವನ್ನು ಸಾರುತ್ತಿದ್ದರು. ಅವರು ತಮ್ಮ ಚಿತ್ರಗಳಲ್ಲಿ ಹೆಸರಿಗಷ್ಟೇ ನಾಯಕರೇನಿಸಿಕೊಳ್ಳದೇ ನಿಜ ಜೀವನದಲ್ಲೂ ಹಾಗೆ ಕಾಪಾಡಿಕೊಳ್ಳುತ್ತಿದ್ದರು.

Written by - Zee Kannada News Desk | Last Updated : Apr 24, 2023, 11:00 AM IST
  • ಕನ್ನಡ ಚಿತ್ರರಂಗದ ಧ್ರುವತಾರೆ ಡಾ. ರಾಜ್‌ಕುಮಾರ್
  • ಇಂದಿರಾ ವಿರುದ್ಧ ಖ್ಯಾತ ವರನಟ ಕಣಕ್ಕೆ ಇಳಿಸುವ ಯೋಚನೆ ಹೊಂದಿದ ರಾಜಕೀಯ ನಾಯಕರು
  • ರಾಜಕೀಯಕ್ಕೆ ಏಕೆ ಸೇರಿಲ್ಲ ಎಂಬುವುದನ್ನು ಕೊನೆಗೂ ರೀವಿಲ್‌ ಮಾಡಿದ ಅಣ್ಣಾವ್ರು
 Dr Rajkumar: ಕರುನಾಡ ಮುತ್ತುರತ್ನ ಡಾ. ರಾಜ್‌ಕುಮಾರ್ ಅದೊಂದೇ ಕಾರಣಕ್ಕೆ ರಾಜಕೀಯಕ್ಕೆ ಬರಲಿಲ್ಲವಂತೆ ! title=

ಬೆಂಗಳೂರು: ನಟಸಾರ್ವಭೌಮ ಡಾ. ರಾಜ್‌ಕುಮಾರ್ ಇವರು ಜನಿಸಿದ್ದು ಏಪ್ರಿಲ್ 24, 1929ರಲ್ಲಿ. ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ. ಸುಮಾರು ಐದು ದಶಕ ಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ, 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಕರುನಾಡ ಮುತ್ತುರತ್ನ ಎಂದು ಡಾ. ರಾಜ್‌ಕುಮಾರ್ ರವರನ್ನು ಸುಮ್ಮನೆ ಕರೆಯುದಿಲ್ಲ.. ಅದಕ್ಕೂ ಹಲವು ಕಾರಣಗಳಿವೆ. ಅವರನ್ನು ಹತ್ತಿರದಿಂದ ಬಲ್ಲವವರಿಗೆ ಮಾತ್ರ ತಿಳಿದಿರುತ್ತದೆ ರಾಜಣ್ಣ ಏನೆಂದು. 

ಇದನ್ನೂ ಓದಿ: Yash - Hardik Pandya: ರಾಕಿ ಭಾಯ್‌ ಜೊತೆ ಭರ್ಜರಿ ಸ್ಟೆಪ್ಸ್‌ ಹಾಕಿದ ಹಾರ್ದಿಕ್‌ ಪಾಂಡ್ಯ... ಫ್ಯಾನ್ಸ್‌ ಫುಲ್‌ ಫಿದಾ!

ಅವರು ತಮ್ಮ ಸಿನಿಮಾದಲ್ಲಿ ಮನೋರಂಜನೆ ಜೊತೆಗೆ ಸಾಮಾಜಿಕ ಸಂದೇಶವನ್ನು ಸಾರುತ್ತಿದ್ದರು. ಅವರು ತಮ್ಮ ಚಿತ್ರಗಳಲ್ಲಿ ಹೆಸರಿಗಷ್ಟೇ ನಾಯಕರೇನಿಸಿಕೊಳ್ಳದೇ ನಿಜ ಜೀವನದಲ್ಲೂ ಹಾಗೆ ಕಾಪಾಡಿಕೊಳ್ಳುತ್ತಿದ್ದರು. ಸಿನಿಮಾದಲ್ಲಿ ಧೂಮಪಾನ ಮಾಡುವ ದೃಶ್ಯವನ್ನು ಅಭಿಮಾನಿಗಳು ಅದನ್ನೇ ಪಾಲಿಸುವರೆಂದು ಅಂಥಹ ದೃಶ್ಯಗಳನ್ನು ಕೈ ಬಿಡುತ್ತಿದ್ದರಂತೆ. ಹೀಗಾಗಿ ಸಮಾಜಕ್ಕೆ ಉತ್ತಮ ಸಂದೇಶವಿರದ  ಸಿನಿಮಾಗಳನ್ನೇ ಓಪ್ಪುತ್ತಿರಲಿಲ್ಲವಂತೆ..! ಇದು ಸಿನಿಮಾ ಜೀವನವಾದರೇ, ರಾಜಣ್ಣ ಜೀವನವೂ ಅಷ್ಟೇ ಮಾದರಿಯಾಗಿತ್ತು. ಆದಾಗ್ಯೂ  ವರನಟನ ಕಾಲದಲ್ಲೂ  ರಾಜಕೀಯ  ಚುನಾವಚಣೆ ಸದ್ದು ಜೋರೆ ಇತ್ತು.  

ಅಂದು ರಾಜಣ್ಣನಿಗೆ ರಾಜಕೀಯ ಪ್ರವೇಶಿಸುವ ಅವಕಾಶ ತುಂಬಾನೇ ಒಲಿದಿತ್ತಂತೆ!. ಆದರೆ ಅಣ್ಣಾವ್ರು ಮಾತ್ರ ಅದರ ಬಗ್ಗೆ ತುಂಬಾ ಗಂಭಿರ ಚಿಂತನೆ ನಡೆಸಿ ಒಂದು ನಿರ್ಧಾರ ತೆಗೆದುಕೊಂಡರು. 

ಇದನ್ನೂ ಓದಿ: Shiva Shetty: ಕಟೀಲು ದೇವಾಸ್ಥಾನಕ್ಕೆ ಶಿಲ್ಪಾ ಶೆಟ್ಟಿ ಭೇಟಿ, ಹರಕೆ ಸಲ್ಲಿಸಿದ ತೀರಿಸಿದ ಕರುನಾಡ ಕುವರಿ

1978ರಲ್ಲಿ ನಡೆದ ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಯಲ್ಲಿ ಇಂದಿರಾ ಗಾಂಧಿ ಸ್ಪರ್ಧೆ ಮಾಡಿದ್ದರು. ಇಂದಿರಾ ವಿರುದ್ಧ ಖ್ಯಾತ ನಾಯಕರನ್ನು ಕಣಕ್ಕೆ ಇಳಿಸಬೇಕೆಂಬುವುದು ಇತರ ಪಕ್ಷಗಳ ಆಲೋಚನೆ ಆಗಿತ್ತು. ಇಂದಿರಾ ಗಾಂಧಿಯನ್ನು ಸೋಲಿಸಲು ಸರಿಯಾದ ವ್ಯಕ್ತಿ ಯಾರೆಂದು ರಾಜಕೀಯ ನಾಯಕರು ಚಿಂತಿಸುತ್ತಿರುವಾಗ ಬಲಿಶಾಲಿ ನಾಯಕಯೆಂದು  ಡಾ. ರಾಜ್‌ಕುಮಾರ್ ಗುರುತಿಸಿದರು.. 

ಸಿನಿಮಾಗಳ ಮೂಲಕ ಖ್ಯಾತಿ ಪಡೆದ ರಾಜ್​ಕುಮಾರ್ ಅವರು ಚಿತ್ರರಂಗದಲ್ಲಿ ಉತ್ತುಂಗದಲ್ಲಿದ್ದರು. ವರನಟ ಎಂದರೇ ಅಭಿಮಾನಿಗಳಿಗೆ ಒಂದು ಕ್ರೇಜ್‌ ಇತ್ತು. ಅದನ್ನೇ ಬಂಡವಾಳ ಮಾಡಿಕೊಂಡ ಕೆಲ ರಾಜಕೀಯ ನಾಯಕರು ಅಣ್ಣಾವ್ರುನ್ನು  ಚುನಾವಣೆಗೆ ಇಳಿಸುವ ಪ್ರಯತ್ನ ಮಾಡಿದರು.  ಅವರನ್ನು ಮನ ಒಲಿಸಲು ರಾಜಕೀಯ ನಾಯಕರು ಎಲ್ಲಿಲ್ಲದ ಕಸರತ್ತು ನಡೆಸಿದರು. 

 ರಾಜಕೀಯಕ್ಕೆ ಏಕೆ ಸೇರಿಲ್ಲ ಎಂಬುದನ್ನು ಅವರು ಎಲ್ಲಿಯೂ ರೀವಿಲ್‌ ಮಾಡಿರಲಿಲ್ಲ. ಆದರೆ 2005ರ ಸಮಯದಲ್ಲಿ ರಾಜ್​ಕುಮಾರ್ ಆಸ್ಪತ್ರೆಗೆ ಸೇರಿದಾಗ  ರಾಜಕೀಯ ನಿಲುವಿನ ಬಗ್ಗೆ ರಾಘವೇಂದ್ರ ರಾಜ್​ಕುಮಾರ್ ಬಳಿ ಸತ್ಯ ತೆರೆದಿಟ್ಟರು. 

ಇದನ್ನೂ ಓದಿ: ದೊಡ್ಮನೆ ಕುಡಿಗೆ ಬರ್ತ್‌ಡೇ ಸಂಭ್ರಮ..! ʼಯುವʼ ಬಗ್ಗೆ ಅಪ್ಪು ಫ್ಯಾನ್ಸ್‌ ಕನಸ್ಸು ಏನ್‌ ಗೊತ್ತಾ..?

1978ರ ಚುನಾವಣೆ ನಡೆದು ಐದು ವರ್ಷಗಳ ಬಳಿಕ ಅವರು ಗೋಕಾಕ್ ಚಳವಳಿಗೆ ಸೇರಲು ನನ್ನನ್ನು ಕೇಳಿದರು. ನಾನು ಖುಷಿಯಿಂದ ಪಾಲ್ಗೊಂಡೆ. ಅಲ್ಲಿ ನನ್ನ ಭಾಗವಹಿಸುವಿಕೆ ಅಗತ್ಯವಾಗಿತ್ತು. ಆದರೆ ಆ ಚುನಾವಣೆಗೆ ನನ್ನ ಅವಶ್ಯಕತೆ ಇರಲಿಲ್ಲ. ಅಲ್ಲಿ ನಾನು ಯಾರನ್ನೋ ಸೋಲಿಸಬೇಕಾಗಿತ್ತು.

‘ಒಳ್ಳೆಯ ಉದ್ದೇಶದಿಂದ ನನ್ನನ್ನು ಸ್ಪರ್ಧಿಸುವಂತೆ ಕೇಳಿದ್ದರೆ ನಾನು ಆ ಬಗ್ಗೆ ಯೋಚಿಸಬಹುದಿತ್ತು. ಆದರೆ ಅವರು ನನ್ನನ್ನು ಅಸ್ತ್ರವಾಗಿ ಬಳಸುವ ಆಲೋಚನೆಯಲ್ಲಿದ್ದರು. ಹೀಗಾಗಿ ನಾನು ರಾಜಕೀಯ ಸೇರಲು ಹಿಂಜರಿದೆ. ರಾಜಕೀಯ ಲಾಭಕ್ಕಾಗಿ ಅಭಿಮಾನಿಗಳನ್ನು ದೂರ ಮಾಡಿಕೊಳ್ಳಲು ಅವರು ಸಿದ್ಧರಿರಲಿಲ್ಲ. ರಾಜಕೀಯಕ್ಕೆ ಇಳಿಯದೇ ಜನರ ಸೇವೆ  ಮಾಡುವೆಂದು ಸಿನಿಮಾ ಜೊತೆಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News