ಸಿನಿ ಕರಿಯರ್‌ಗೆ ಬ್ರೇಕ್..?‌ ವೃತ್ತಿ ಜೀವನದಲ್ಲಿ ಅನಿರಿಕ್ಷೀತ ನಿರ್ಧಾರ ತೆಗೆದುಕೊಂಡ ಖ್ಯಾತ ನಟಿ!!

Bollywood Actress: 50 ಪ್ಲಸ್ ಆಗಿರುವ ಟಬು ಅನಿರೀಕ್ಷಿತ ನಿರ್ಧಾರ ತೆಗೆದುಕೊಂಡಿದ್ದಾರೆ. ಇನ್ನು ಮುಂದೆ ಬೆಳ್ಳಿತೆರೆಯಲ್ಲಿ ಅಂತಹ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎನ್ನುವ ಹಲವಾರು ಕಾಮೆಂಟ್‌ಗಳನ್ನು ನಟಿ ಮಾಡಿದ್ದಾರೆ..   

Written by - Savita M B | Last Updated : Jul 21, 2024, 06:41 PM IST
  • ನಾಯಕಿ ಟಬು ಮೂರು ದಶಕಗಳಿಂದ ಚಿತ್ರರಂಗದಲ್ಲಿ ನಟಿಯಾಗಿ ಮುಂದುವರೆದಿದ್ದಾರೆ.
  • ಟಬು ಇತ್ತೀಚಿನ ಸಿನಿಮಾ ಔರಾನ್ ಮೇ ಕಹಾನ್ ದಮ್ ಥಾ.
ಸಿನಿ ಕರಿಯರ್‌ಗೆ ಬ್ರೇಕ್..?‌ ವೃತ್ತಿ ಜೀವನದಲ್ಲಿ ಅನಿರಿಕ್ಷೀತ ನಿರ್ಧಾರ ತೆಗೆದುಕೊಂಡ ಖ್ಯಾತ ನಟಿ!! title=

Actress Tabu: ನಾಯಕಿ ಟಬು ಮೂರು ದಶಕಗಳಿಂದ ಚಿತ್ರರಂಗದಲ್ಲಿ ನಟಿಯಾಗಿ ಮುಂದುವರೆದಿದ್ದಾರೆ. 1991 ರಲ್ಲಿ ಬಿಡುಗಡೆಯಾದ ಕೂಲಿ ನಂಬರ್ ಒನ್ ಅವರು ನಾಯಕಿಯಾಗಿ ನಟಿಸಿದ ಮೊದಲ ಚಿತ್ರ. 

ಈ ಸಿನಿಮಾ ಹಿಟ್ ಆದ್ರೂ ಟಬುಗೆ ಸುಮಾರು ನಾಲ್ಕು ವರ್ಷಗಳ ಗ್ಯಾಪ್ ಸಿಕ್ಕಿತು... ನಂತರ ಹಿಂದಿಯಲ್ಲಿ ಆಫರ್‌ಗಳು ಬಂದವು. ಸತತ ಹಿಂದಿ ಚಿತ್ರಗಳನ್ನು ಮಾಡಿದ ನಂತರ, ಟಬು ನಾಗಾರ್ಜುನ ನಟನೆಯ ಸಿನಿಮಾದಲ್ಲಿ ವಿಸ್ತೃತ ಅತಿಥಿ ಪಾತ್ರದಲ್ಲಿ ಸ್ಪೇಷಲ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ತೆಲುಗಿನಲ್ಲಿ ಹಿಟ್ ಚಿತ್ರಗಳಿದ್ದರೂ ಟಬು ಹೆಚ್ಚು ಆದ್ಯತೆ ನೀಡಿದ್ದು ಬಾಲಿವುಡ್ ಗೆ. 

ಸದ್ಯ ಅವರು ತಮ್ಮ ವಯಸ್ಸಿಗೆ ತಕ್ಕ ಪಾತ್ರಗಳನ್ನು ಮಾಡುತ್ತಿದ್ದಾರೆ. ನೆಗೆಟಿವ್ ಶೇಡ್ ಪಾತ್ರಗಳನ್ನು ಮಾಡುವುದು ಕೂಡ ವಿಶೇಷ. ಅಂಧಾಧುನ್ ನಲ್ಲಿ ಟಬು ಸಂಪೂರ್ಣ ನೆಗೆಟಿವ್ ರೋಲ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಹಿಂದೆ ಟಬು ಆ ಮಟ್ಟದ ವಿಲನ್‌ ಪಾತ್ರ ಮಾಡಿ ಮಿಂಚಿರಲಿಲ್ಲ.. ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆ ಟಬು ಪಾತ್ರವೂ ಜನಜನಿತವಾಯಿತು. 

ಇದನ್ನೂ ಓದಿ-ಅಂತೂ ಇಂತೂ ಕೂಡಿಬಂತು ಮದುವೆ ಭಾಗ್ಯ: ಕೊನೆಗೂ ಮದುವೆಯಾಗುತ್ತಿದ್ದಾರೆ ಆಂಕರ್‌ ಅನುಶ್ರೀ...!? ಕರುನಾಡ ಚೆಲುವೆಯ ಹುಡುಗ ಯಾರು?

ಟಬು ಇತ್ತೀಚಿನ ಚಲನಚಿತ್ರ ಔರಾನ್ ಮೇ ಕಹಾನ್ ದಮ್ ಥಾ. ಅಜಯ್ ದೇವ್ ಗನ್ ನಾಯಕನಾಗಿ ನಟಿಸಿದ್ದಾರೆ. ಟಬು ಮತ್ತು ಸಾಯಿ ಮಂಜ್ರೇಕರ್ ನಾಯಕಿಯರಾಗಿ ನಟಿಸಿದ್ದಾರೆ. ಔರಾನ್ ಮೇ ಕಹಾನ್ ದಮ್ ಥಾ ಆಗಸ್ಟ್ 2 ರಂದು ಬಿಡುಗಡೆಯಾಗಲಿದೆ. ಇತ್ತೀಚಿನ ಸಂದರ್ಶನದಲ್ಲಿ, ಟಬು ಕೆಲವು ಪ್ರಮುಖ ಕಾಮೆಂಟ್ಗಳನ್ನು ಮಾಡಿದ್ದಾರೆ. 

ಔರಾನ್ ಮೇ ಕಹಾನ್ ದಮ್ ಥಾ ಚಿತ್ರದಲ್ಲಿ ಯಶೋದಾ ಪಾತ್ರದಲ್ಲಿ ಟಬು ಕಾಣಿಸಿಕೊಳ್ಳಲಿದ್ದಾರೆ. ಮಧ್ಯವಯಸ್ಸಿನ ಯಶೋದಾ ಪಾತ್ರದಲ್ಲಿ ಸಾಯಿ ಮಂಜ್ರೇಕರ್ ನಟಿಸಿದ್ದಾರೆ. ಆದರೆ ನಿರ್ದೇಶಕ ನೀರಜ್ ಪಾಂಡೆ ಯಂಗ್ ಯಶೋದಾ ಪಾತ್ರವನ್ನೂ ಮಾಡುವಂತೆ ಟಬುಗೆ ಕೇಳಿಕೊಂಡರು. ಆದರೆ ನಟಿ ಮಾಡುವುದಿಲ್ಲ ಎಂದು ಹೇಳಿದ್ದರಂತೆ... ನಮ್ಮ ವಯಸ್ಸು ಗೊತ್ತಾದಾಗ ಪ್ರೇಕ್ಷಕರು ನಮ್ಮನ್ನು ಯುವ ಪಾತ್ರಗಳಲ್ಲಿ ಒಪ್ಪಿಕೊಳ್ಳುವುದಿಲ್ಲ ಎಂದು ಹಿಂದೆ ಸರಿದಿದ್ದರಂತೆ.. 

ಇನ್ನು ಮುಂದೆ ಯುವ ಪಾತ್ರಗಳಲ್ಲ... ವಯಸ್ಸಿಗೆ ತಕ್ಕ ಪಾತ್ರಗಳನ್ನು ಮಾತ್ರ ಮಾಡುವುದಾಗಿ ಟಬು ನಿರ್ಧರಿಸಿದ್ದಾರೆ. ಅಂತಹ ಪಾತ್ರಗಳನ್ನು ಮಾಡುವ ನಾಯಕಿಯರ ಇಮೇಜ್‌ ನನಗೆ ಬೇಡ ಎನ್ನುತ್ತಾರೆ ಟಬು. ಸ್ಕ್ರಿಪ್ಟ್ ಆಯ್ಕೆಯ ಬಗ್ಗೆ ನನಗೆ ಗೊತ್ತಿದೆ... ಹಾಗಾಗಿಯೇ ನನಗೆ ಉತ್ತಮ ಪಾತ್ರಗಳು ಸಿಗುತ್ತಿವೆ ಎಂದರು. 

ಇದನ್ನೂ ಓದಿ-ನಟನೆ ಏನ್‌ ಬೇಡ ಜಸ್ಟ್‌ ತಮನ್ನಾ ಹಾಗೆ ಮಾಡಿದ್ರೆ ಸಾಕು ಸಿನಿಮಾ ಸೂಪರ್ ಹಿಟ್..! ನಿರ್ದೇಶಕನ ಶಾಕಿಂಗ್ ಹೇಳಿಕೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News