Puneeth rajkumar : ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನ ಅಭಿಮಾನಿಗಳು ಸೇರಿದಂತೆ ಭಾರತೀಯ ಚಿತ್ರರಂಗದ ಹಲವು ನಟ ನಟಿಯರು ಸಹ ತುಂಬಾ ಇಷ್ಟ ಪಡ್ತಾರೆ. ಅಪ್ಪು ಅಂದ್ರೆ ಚಂದನವನದ ಸಿನಿತಾರೆಯರಿಗೂ ಬಲು ಮೆಚ್ಚು. ಇಂದು ಪುನೀತ್ ಹುಟ್ಟು ಹಬ್ಬ, ಸ್ಯಾಂಡಲ್ವುಡ್ ಸ್ಟಾರ್ಗಳು ಬರ್ತ್ ಡೇ ವಿಶ್ ಮಾಡುತ್ತಿದ್ದಾರೆ. ನಟ ದುನಿಯಾ ವಿಜಯ್ ಕೊಂಚ ವಿಭಿನ್ನವಾಗಿ ರಾಜರತ್ನನಿಗೆ ಹುಟು ಹಬ್ಬದ ಶುಭ ಕೋರಿದ್ದಾರೆ.
ಅಪ್ಪು ಅವರನ್ನು ಹೆಚ್ಚಾಗಿ ಇಷ್ಟ ಪಡುವೆ ನಟರಲ್ಲಿ ದುನಿಯಾ ವಿಜಯ್ ಸಹ ಒಬ್ಬರು. ಇದೀಗ ಪುನೀತ್ ಅವರ ಬರ್ತ್ ಡೇ ನಿಮಿತ್ತ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟರ್ನಲ್ಲಿ ಕನ್ನಡದ ಪಠ್ಯ ಪುಸ್ತಕದಲ್ಲಿ ʼಅʼ ಎಂದರೆ ʼಅಪ್ಪುʼ ಎಂದಾಗಲಿ ಎನ್ನುವ ಆಸೆ ವ್ಯಕ್ತಪಡಿಸಿದ್ದಾರೆ. ಕೆಳಗೆ ತಮ್ಮ ಮುಂಬರುವ ಭೀಮಾ ಸಿನಿಮಾದ ಟೈಟಲ್ ಸಹ ಇದೆ.
ಇದನ್ನೂ ಓದಿ:Kabzaa review : ಶಿವಣ್ಣನ ಎಂಟ್ರಿ, ಕಿಚ್ಚನ ಖದರ್, ಉಪ್ಪಿ ಆರ್ಭಟ..! ಹೇಗಿದೆ ಗೊತ್ತಾ ʼಕಬ್ಜʼ..?
ವಿಜಯ್ ಪೋಸ್ಟರ್ಗೆ ಪುನೀತ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲ ಜನರು ಅ ಅಂದರೆ ಅಮ್ಮನಾಗಿಯೇ ಇರಲಿ ಅಪ್ಪು ಬೇಡ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ಅಪ್ಪು ಅವರಿಗೆ ಹುಟ್ಟು ಹಬ್ಬದ ಶುಭ ಕೋರುತ್ತಿದ್ದಾರೆ. ನಟ ದುನಿಯಾ ವಿಜಯ್ಗೆ ಇಂದು ಹುಟ್ಟುಹಬ್ಬದಂದು ಭೀಮ ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆ ಪಡೆದಿತ್ತು. ಈ ಸಿನಿಮಾ ಸಪ್ಟಂಬರ್ 15 ರಂದು ತೆರೆಗೆ ಅಪ್ಪಳಿಸಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.