ಇಷ್ಟು ವರ್ಷ ಕಳೆದರೂ ಆ ನೋವಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ: ನಟಿ ಭಾವನಾ ಹೀಗೆ ಹೇಳಿದ್ಯಾಕೆ?

Bhavana Menon: ಬಹುಭಾಷಾ ನಟಿ ಭಾವನಾ ಮೆನನ್‌ ಕನ್ನಡ, ತಮಿಳು, ಮಲಯಾಳಂ ಸಿನಿರಂಗದಲ್ಲಿ ಸಕ್ರಿಯವಾಗಿರುವ ನಟಿ. ಇವರು ಇತ್ತೀಚೆಗೆ ಭಾಗವಹಿಸಿದ ಸಂದರ್ಶನದಲ್ಲಿ ತಮ್ಮ ಮನದಾಳದ ನೋವನ್ನು ತೋಡಿಕೊಂಡಿದ್ದಾರೆ.   

Written by - Savita M B | Last Updated : Sep 24, 2023, 04:02 PM IST
  • ಬಹುಭಾಷಾ ನಟಿ ಭಾವಾನಾ ಮೆನನ್‌ ಕನ್ನಡ, ತಮಿಳು, ಮಲಯಾಳಂ ಸಿನಿರಂಗದಲ್ಲಿ ಸಕ್ರಿಯವಾಗಿರುವ ನಟಿ
  • ನಟಿ ಭಾವನಾ ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಭಾಗಿಯಾಗಿದ್ದರು
  • ಅಲ್ಲಿ ತಮಗೆ ಕಾಡುವ ನೆನಪುಗಳ ಕುರಿತು ಮನಬಿಚ್ಚಿ ಮಾತಾನಡಿದ್ದಾರೆ
ಇಷ್ಟು ವರ್ಷ ಕಳೆದರೂ ಆ ನೋವಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ: ನಟಿ ಭಾವನಾ ಹೀಗೆ ಹೇಳಿದ್ಯಾಕೆ? title=

Sandalwood News: ನಟಿ ಭಾವನಾ ಕನ್ನಡದಲ್ಲಿ ಬೆರಳೆಣಿಕೆ ಸಿನಿಮಾಗಳನ್ನು ಮಾಡಿದ್ದದರೂ ಸಹ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದಾರೆ. ಅಪ್ಪು ಜೊತೆ ಜಾಕಿ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ಇವರು ಕನ್ನಡದ ಬಹುತೇಕ ಸ್ಟಾರ್‌ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. 

ನಟಿ ಭಾವನಾ ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಭಾಗಿಯಾಗಿದ್ದರು. ಅಲ್ಲಿ ತಮಗೆ ಕಾಡುವ ನೆನಪುಗಳ ಕುರಿತು ಮನಬಿಚ್ಚಿ ಮಾತಾನಡಿದ್ದಾರೆ. ಅವರಿಗೆ ಕಾಡುವ ಮರೆಯಾಗದ ನೆನೆಪೆಂದರೇ ಅವರ ತಂದೆ.. ಸಂದರ್ಶನದಲ್ಲಿ ಅವರ ಅಗಲುವಿಕೆಯ ಬಗ್ಗೆಯೇ ನಟಿ ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ-ದಳಪತಿ ವಿಜಯ್ ನಟನೆಯ "ಲಿಯೋ" ಸಿನಿಮಾ ಕೇರಳದಲ್ಲಿ ಬೈಕಾಟ್...! ಕಾರಣವೇನು?

ಈ ಕುರಿತು ಮಾತನಾಡಿದ ಅವರು "ನನ್ನ ತಂದೆಯ ಸಾವಿನ ನೋವು ಇನ್ನೂ ನ್ನನ್ನಿಂದ ದೂರವಾಗಿಲ್ಲ, ಅಲ್ಲದೇ ಅದು ಹಾಗೆಯೇ ಇರುತ್ತದೆ. ನಾನು ಹೊರಗೆ ಎಷ್ಟೇ ನಗುತ್ತಾ ಇದ್ದರೂ ಒಳಗಿನ ನೋವು ಮಾತ್ರ ಇಂದಿಗೂ ಆರಿಲ್ಲ. ಇಷ್ಟು ವರ್ಷವಾದರೂ ಆ ನೋವಿನಿಂದ ಹೊರಬರಲು ನನ್ನಿಂದಾಗುತ್ತಿಲ್ಲ. ಜೀವನ ತುಂಬಾ ಬದಲಾಗಿದೆ. ಆದರೆ ನನ್ನ ತಂದೆ ನನ್ನ ಜೊತೆ ಇಲ್ಲ ಎನ್ನುವುದು ಪ್ರತಿ ಸಲ ಕಾಡುವ ನೋವು. ಈ ಕಡುವಿಕೆ ಒಮ್ಮೊಮ್ಮೆ ಹೆಚ್ಚು., ಒಮ್ಮೆ ಕಡಿಮೆ. ಆದರೆ ಆ ನೋವು ಇಂದಿಗೂ ಹಾಗೆಯೇ ಇದೆ" ಎಂದಿದ್ದಾರೆ. 

ಭಾವನಾ ಅವರ ತಂದೆ ಬಾಲಚಂದ್ರ ಅವರು 59ವರ್ಷಕ್ಕೆ ಇಹಲೋಕ ತ್ಯಜಿಸಿದರು. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಬಾಲಚಂದ್ರ ಅವರು ಮತ್ತೆ ಮನೆಗೆ ಮರಳಿ ಬರಲೇ ಇಲ್ಲ. ಇನ್ನು ಭಾವನಾ ಪ್ರತಿ ವೇದಿಕೆಯಲ್ಲೂ ತಮ್ಮ ತಂದೆಯನ್ನು ನೆನಪಿಸಿಕೊಳ್ಳುತ್ತಾ...ನಾನು ಈ ಮಟ್ಟಕ್ಕೆ ಬೆಳೆಯಲು ನನ್ನ ತಂದೆಯೇ ಪ್ರಮುಖ ಕಾರಣ ಎಂದು ನೆನಪು ಮಾಡಿಕೊಳ್ಳುತ್ತಾರೆ. 

ಇದನ್ನೂ ಓದಿ-ಬಹುನಿರೀಕ್ಷಿತ ʼನಿರ್ಭಯ 2ʼ ಚಿತ್ರದ ಟೀಸರ್ ರಿಲೀಸ್‌..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News