ನ್ಯಾಯ ಒದಗಿಸಿ ಎಂದು ಅರೆನಗ್ನಳಾಗಿದ್ದ ನಟಿ ಶ್ರಿರೆಡ್ಡಿಯಿಂದ ಮತ್ತೊಂದು ಬಾಂಬ್!

ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕರೊಬ್ಬರ ಪುತ್ರ ತಮ್ಮನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಶ್ರಿರೆಡ್ಡಿ ಆರೋಪ ಮಾಡಿದ್ದಾರೆ. 

Last Updated : Apr 11, 2018, 06:22 PM IST
ನ್ಯಾಯ ಒದಗಿಸಿ ಎಂದು ಅರೆನಗ್ನಳಾಗಿದ್ದ ನಟಿ ಶ್ರಿರೆಡ್ಡಿಯಿಂದ ಮತ್ತೊಂದು ಬಾಂಬ್! title=

ಎರಡು ದಿನಗಳ ಹಿಂದಷ್ಟೇ ತೆಲುಗು ಚಿತ್ರರಂಗದಲ್ಲಿ ತನಗೆ ಅವಕಾಶಗಳನ್ನು ನೀಡುತ್ತಿಲ್ಲ, ನಟಿಯರ ಮೇಲೆ ಲೈಂಗಿಕ ಶೋಷಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ತೆಲುಗು ಫಿಲಂ ಚೇಂಬರ್ ಮುಂದೆ ಅರೆನಗ್ನಳಾಗಿ ಪ್ರತಿಭಟಿಸಿದ್ದ ನಟಿ ಶ್ರಿರೆಡ್ಡಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.

ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕರೊಬ್ಬರ ಪುತ್ರ ತಮ್ಮನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಶ್ರಿರೆಡ್ಡಿ ಆರೋಪ ಮಾಡಿದ್ದಾರೆ. ಇದುವರೆಗೂ ಕೇವಲ ಬಾಯಿಮಾತಿನಲ್ಲಿ ಆರೋಪ ಮಾಡುತ್ತಿದ್ದ ಈಕೆ, ಇಂದು ಚಿತ್ರ ನಿರ್ಮಾಪಕ ಸುರೇಶ ಬಾಬು ಪುತ್ರ ಅಭಿರಾಮ್ ಜೊತೆಗಿನ ಆತ್ಮೀಯ ಛಾಯಾಚಿತ್ರಗಳನ್ನು ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಅಭಿರಾಮ್ ಈಕೆಗೆ ಆತ್ಮೀಯವಾಗಿ ಕಳಿಸಿದ್ದ ಸಂದೇಶಗಳನ್ನೂ ಆಕೆ ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ. 

ನಿರ್ಮಾಪಕರ ಮಗ ತಮ್ಮನ್ನು ಸ್ಟುಡಿಯೋಗೆ ಕರೆಸಿಕೊಂಡು ತಮ್ಮ ಕಾಮ ತೃಷೆ ತೀರಿಸಿಕೊಳ್ಳುತ್ತಿದ್ದರು. ಶೂಟಿಂಗ್ ಇದೆ ಎಂದು ಸ್ಟುಡಿಯೋಗೆ ಬರಳು ಹೇಳಿ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದರು ಎಂದು ಆರೋಪಿಸಿರುವ ಶ್ರಿರೆಡ್ಡಿ,  ದೊಡ್ಡ ನಿರ್ದೇಶಕರು, ನಿರ್ಮಾಪಕರು ಮತ್ತು ನಟರು ತಮ್ಮ ಲೈಂಗಿಕ ತೃಷೆಯನ್ನು ತೀರಿಸಿಕೊಳ್ಳಲು ಸ್ಟುಡಿಯೋಗಳನ್ನು ವೇಶ್ಯಾವಾಟಿಕೆಗಳಂತೆ ಬಳಸಿಕೊಳ್ಳುತ್ತಿದ್ದಾರೆ. ಸ್ಟುಡಿಯೋಗಳ ಒಳಗೆ ಬರುವುದಿಲ್ಲ ಎಂಬ ಧೈರ್ಯದಿಂದ ಇದು ನಡೆಯುತ್ತಿದೆ ಎಂದು ಹೇಳಿದ್ದಾರೆ. 

ನ್ಯಾಯ ಒದಗಿಸಿ ಎಂದು ಅರೆಬೆತ್ತಲಾದ ಈಕೆ ಯಾರು?

ಈಗಾಗಲೇ ತೆಲುಗು ಫಿಲಂ ಚೇಂಬರ್ ಮುಂದೆ ಅರೆನಗ್ನಳಾಗಿ ಪ್ರತಿಭಟನೆ ನಡೆಸಿದ್ದ ಶ್ರೀರೆಡ್ಡಿಗೆ, ಆಕೆಯ ವರ್ತನೆಯನ್ನು ಪರಾಮರ್ಷಿಸಿ, ಪರಿಸ್ಥಿತಿಯನ್ನು ಅವಲೋಕಿಸಿದ ಮೂವಿ ಆರ್ಟಿಸ್ಟ್ ಅಸೋಸಿಯೇಷನ್ ಈ  ನಟಿಗೆ ಸದಸ್ಯತ್ವ ನೀಡುವ ಮಾತೇ ಇಲ್ಲ ಎಂದು ಹೇಳಿದೆ. ಅಲ್ಲದೆ, ಸಾರ್ವಜನಿಕವಾಗಿ ಅಶ್ಲೀಲವಾಗಿ ವರ್ತಿಸಿದ ಶ್ರೀ ರೆಡ್ಡಿ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. 

Trending News