ಬಿಗ್ ಬಾಸ್ ಕ್ಯೂಟ್ ಜೋಡಿ ಮಧ್ಯೆ ಮಹಾನ್ ಬಿರುಕು! ವೈಲೆಂಟ್ ಆದ ಸೈಲೆಂಟ್ ಧರ್ಮ! ಜಗಳದ ಭರಾಟೆಯಲ್ಲಿ ಹೊರಬಿತ್ತು "ಆ " ಪದ

ಇಲ್ಲಿವರೆಗೆ ಸೈಲೆಂಟ್ ಎಂದೇ ಕರೆಸಿಕೊಂಡಿರುವ ಧರ್ಮ ಕೀರ್ತಿರಾಜ್ ಅದ್ಯಾಕೋ ಬಹಳ ವೈಲೆಂಟ್ ಆಗಿದ್ದಾರೆ. ಜಗಳದ ಮಧ್ಯೆ ಆ ಒಂದು ಪದವನ್ನೂ ಬಳಸಿದ್ದಾರೆ.

Written by - Ranjitha R K | Last Updated : Nov 12, 2024, 11:56 AM IST
  • ಧರ್ಮ ಮತ್ತು ಅನುಷಾ ಮಧ್ಯೆ ಬಿಗ್ ಬಾಸ್ ಮನೆಯೊಳಗೆ ಒಳ್ಳೆಯ ಸ್ನೇಹ
  • ಸ್ನೇಹದ ಮಧ್ಯೆ ಮೂಡಿದ ಬಿರುಕು
  • ಇದೀಗ ಈ ಜೋಡಿ ಮಧ್ಯೆಯೇ ಜಗಳ ಹತ್ತಿಕೊಂಡಿದೆ.
ಬಿಗ್ ಬಾಸ್ ಕ್ಯೂಟ್ ಜೋಡಿ ಮಧ್ಯೆ ಮಹಾನ್ ಬಿರುಕು! ವೈಲೆಂಟ್ ಆದ ಸೈಲೆಂಟ್ ಧರ್ಮ! ಜಗಳದ ಭರಾಟೆಯಲ್ಲಿ ಹೊರಬಿತ್ತು "ಆ " ಪದ  title=

BIGGBOSS 11 : ಬಿಗ್ ಬಾಸ್ ಪ್ರತೀ ಸೀಸನ್ ನಲ್ಲಿಯೂ ಒಂದೊಂದು ಕ್ಯೂಟ್ ಜೋಡಿಗಳು ಇರ್ತಾರೆ. ಹಾಗೆಯೇ ಈ ಬಾರಿ ಕೂಡಾ ಬಿಗ್ ಮನೆಯಲ್ಲಿ ಒಂದಷ್ಟು ಜೋಡಿಗಳ ಕಲರವ ಕೇಳಿ ಬರುತ್ತಿದೆ. ಐಶ್ವರ್ಯ - ಶಿಶಿರ್,ಧರ್ಮ -ಅನುಷಾ, ಭವ್ಯ - ತ್ರಿವಿಕ್ರಂ ಮಧ್ಯೆ ಇರುವ ಸ್ನೇಹ ಪ್ರೇಕ್ಷಕರಿಗೂ ಇಷ್ಟವಾಗುತ್ತಿದೆ. ಅದರಲ್ಲಿಯೂ ಧರ್ಮ ಅನುಷಾ ಚಪಾತಿ ಜೋಡಿ ಎಂದೇ ಹೆಸರಾಗಿದ್ದಾರೆ. 

ಧರ್ಮ ಮತ್ತು ಅನುಷಾ ಮಧ್ಯೆ ಬಿಗ್ ಬಾಸ್ ಮನೆಯೊಳಗೆ ಒಳ್ಳೆಯ ಸ್ನೇಹವಿದೆ. ಸದಾ ಒಬ್ಬರ ಜೊತೆ ಇನ್ನೊಬ್ಬರು ಕಾಣಿಸಿಕೊಳ್ಳುತ್ತಿರುತ್ತಾರೆ. ಮನೆಯೊಳಗೆ ಭಾರೀ ಭಯಂಕರ ಜಗಳ ನಡೆದಾಗಲೂ ಇವರಿಬ್ಬರೂ ತಮಗೂ ಆ ಜಗಳಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಚಪಾತಿ ತಿನ್ನುತ್ತಾ ಅಡುಗೆ ಮನೆಯಲ್ಲಿ ಇದ್ದ ಕಾರಣ ಇವರು  ಕಿಚ್ಚ ಸುದೀಪ ಅವರ ಬಾಯಿಯಿಂದಲೂ ಚಪಾತಿ ಎಂದೇ ಕರೆಸಿಕೊಳ್ಳುತ್ತಾರೆ. 

ಇದನ್ನೂ ಓದಿ :  14 ವರ್ಷದ ಹುಡುಗಿಯೊಂದಿಗೆ ಲವ್‌.. 132 ಸಿನಿಮಾಗಳ ಒಡೆಯ.. ಈ ರಂಗಭೂಮಿ ಕಲಾವಿದ ದೇಶದಲ್ಲೇ ಅತೀ ಹೆಚ್ಚು ಜನಪ್ರಿಯತೆ ಪಡೆದ ವಿಲನ್‌!!

ಇದೀಗ ಈ ಜೋಡಿ ಮಧ್ಯೆಯೇ ಜಗಳ ಹತ್ತಿಕೊಂಡಿದೆ. ಈ ಜಗಳಕ್ಕೆ ನಾಮಿನೆಶನ್ ಕಾರಣ. ನೇರ ನಾಮಿನೆಶನ್ ಗೆ ಅನುಷಾ ಹೆಸರನ್ನು ಬಹುತೇಕ ಮನೆಯ ಎಲ್ಲಾ ಸದಸ್ಯರು ತೆಗೆದುಕೊಳ್ಳುತ್ತಾರೆ. ಇಲ್ಲಿ ಧರ್ಮ ಕೂಡಾ ಅನುಷಾ ಹೆಸರು ಎತ್ತಿಕೊಳ್ಳುತ್ತಾರೆ. ಮನೆಯಲ್ಲಿ ಇನ್ನಷ್ಟು ಮುನುಗ್ಗಿ ಬರಬೇಕು ಎನ್ನುವ ಕಾರಣ ನೀಡುತ್ತಾರೆ. ಧರ್ಮ ನೀಡಿದ ಈ ಕಾರಣದಿಂದ ಅನುಷಾ ಕೆರಳಿ ಕೆಂಡವಾಗಿದ್ದಾರೆ. 

ನೀವೆಷ್ಟು ಮಾತನಾಡುತ್ತೀರಿ, ನೀವೆಷ್ಟು ಇನ್ವಾಲ್ಮೆಂಟ್ ತೋರಿಸೀದ್ದೀರಿ ಎಂದು ಅನುಷಾ ಧರ್ಮಾಗೆ ಪ್ರಶ್ನೆ ಮಾಡುತ್ತಾರೆ. ಇಲ್ಲಿಯವರೆಗೆ ಎದುರಿನವರು ಏನೇ ಹೇಳಿದರೂ ಹೇಳಿಸಿಕೊಂಡು ಸುಮ್ಮನಾಗಿದ್ದ ಧರ್ಮ ಈಗ ಮಾತ್ರ ಅಬ್ಬರಿಸಿದ್ದಾರೆ. ಹೌದು, ನಾನು ನಾಲಾಯಕ್, ನಾನು ನಾಲಾಯಕ್ ಬೇ_ರ್ಸಿ ಎಂದು ಎಲ್ಲರೂ ಅವಾರ್ಡ್ ನೀಡಿ ಆಗಿದೆಯಲ್ಲಾ ಎಂದು ಮಾತಿನ ಚಾಟಿ ಬೀಸುತ್ತಾರೆ. 

 

ಇದನ್ನೂ ಓದಿ :  2 ಮಕ್ಕಳ ತಾಯಿ.. ಈ ಖ್ಯಾತ ಕಿರಿಯ ನಟನೊಂದಿಗೆ ಮೂರನೇ ಮದುವೆಗೆ ರೆಡಿಯಾದ 43 ವರ್ಷದ ನಟಿ!?

ಇಲ್ಲಿ ಎರಡು ಅಂಶಗಳನ್ನು ಗಮನಿಸಬೇಕು. ಸದಾ ಸುಮ್ಮನಿದ್ದ ಧರ್ಮ ತಿರುಗಿ ಬಿದ್ದಿರುವುದು, ಇನ್ನೊಂದು ಜೊತೆ ಜೊತೆಯಲ್ಲಿ ಒಬ್ಬರಿಗೊಬ್ಬರು ಸಮಾಧಾನ ಪಡಿಸುತ್ತಿದ್ದ ಈ ಜೋಡಿ ಮಧ್ಯೆ ಬಿರುಕು ಮೂಡಿರುವುದು. ಬಹುಶಃ ಬಿಗ್ ಬಾಸ್ ಅಂದರೆ ಹೆಜ್ಜೆ ಹೆಜ್ಜೆಗೂ ಟ್ವಿಸ್ಟ್ ಅಂತ ಹೇಳುವುದು ಇದೇ ಕಾರಣಕ್ಕೆ ಅನ್ನಿಸುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News