ನವದೆಹಲಿ: ಲಾಕ್‌ಡೌನ್ ಅವಧಿಯಲ್ಲಿ ಕಾರ್ಮಿಕರನ್ನು ಅವರವರ ಮನೆ ತಲುಪಲು ಸಹಾಯ ಮಾಡಿದ್ದ ಖ್ಯಾತ ಬಾಲಿವುಡ್ ನಟ ಸೋನು ಸೂದ್ ಸಹಾಯ ಮಾಡಿದ ರೀತಿ ಶ್ಲಾಘನೀಯ. ಆದರೆ ಇದೀಗ ವಿಶೇಷವೆಂದರೆ ಸೋನು ಇನ್ನೂ ಕೂಡ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಅವರ ಇತ್ತೀಚಿನ ಪೋಸ್ಟ್‌ಗಳಲ್ಲಿ ಒಂದು ಸಾಮಾಜಿಕ ವೈರಲ್ ಆಗುತ್ತಿದೆ, ಇದರಲ್ಲಿ ಅವರು ವ್ಯಕ್ತಿಯೋರ್ವರಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ನಟ ತನ್ನ ಟ್ವಿಟ್ಟರ್ ನಲ್ಲಿ ಈ ಕುರಿತು ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದು, ವ್ಯಕ್ತಿ ತನಗೆ ಸಹಾಯ ಮಾಡುವಂತೆ ಸೋನು ಸೂದ್ ಅವರನ್ನು ಕೋರಿದ್ದಾರೆ.
ವಿಷಯ ಏನು ಅಂದ್ರೆ, ವ್ಯಕ್ತಿಗೆ ತನ್ನ ಮಕ್ಕಳ ಆನ್ಲೈನ್ ಶಿಕ್ಷಣಕ್ಕಾಗಿ ಸ್ಮಾರ್ಟ್ ಫೋನ್ ಅಗತ್ಯತೆ ಇತ್ತು. ಆದರೆ, ಆ ವ್ಯಕ್ತಿಯ ಆರ್ಥಿಕ ಸ್ಥಿತಿ ಅಷ್ಟೊಂದು ಸರಿಯಾಗಿರಲಿಲ್ಲ. ಹೀಗಾಗಿ ಆ ವ್ಯಕ್ತಿ ತಮ್ಮ ಬಳಿ ಇದ್ದ ಹಸುವೊಂದನ್ನು ಮಾರಿ ಮಕ್ಕಳ ಶಿಕ್ಷಣಕ್ಕಾಗಿ ಸ್ಮಾರ್ಟ್ ಫೋನ್ ಖರೀದಿಸಿದ್ದಾರೆ. ಈ ಸುದ್ದಿ ಸೋನು ಸೂದ್ ಅವರ ಗಮನ ಸೆಳೆದಿದೆ ಹಾಗೂ ಅವರು ಆ ಪೋಸ್ಟ್ ಅನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ "ಬನ್ನಿ ಈ ವ್ಯಕ್ತಿಗೆ ಆತನ ಹಸು ಮರಲಿಸೋಣ. ಯಾರಾದರು ನನಗೆ ವ್ಯಕ್ತಿಯ ಬಗ್ಗೆ ಮಾಹಿತಿ ನೀಡುವಿರಾ?' ಎಂದು ಬರೆದಿದ್ದಾರೆ. ಸೋನು ಅವರ ಈ ಟ್ವೀಟ್ ಇದೀಗ ಭಾರಿ ವೈರಲ್ ಆಗುತ್ತಿದೆ. ಇತ್ತೀಚೆಗಷ್ಟೇ ಸೋನು ಕಿರ್ಗಿಸ್ಥಾನ್ ನಲ್ಲಿ ಸಿಲುಕಿರುವ ಸುಮಾರು 2500 ಭಾರತೀಯ ವಿದ್ಯಾರ್ಥಿಗಳನ್ನು ಕರೆತರುವುದಾಗಿ ಹೇಳಿದ್ದಾರೆ.
ಸದ್ಯ ಬಾಲಿವುಡ್ ನ ಈ ಖ್ಯಾತ ನಟ, ಕರೋನಾ ಸಾಂಕ್ರಾಮಿಕದ ಹಿನ್ನೆಲೆ ಜನರಿಗೆ ಸಹಾಯ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ, ಲಾಕ್ ಡೌನ್ ಸಮಯದಲ್ಲಿ, ಅವರು ತಮ್ಮ ತಂದೆ ಶಕ್ತಿ ಸಾಗರ್ ಸೂದ್ ಅವರ ಹೆಸರಿನ ಯೋಜನೆಯನ್ನು ಆರಂಭಿಸಿದ್ದು, ನಿತ್ಯ ಸುಮಾರು 45,000 ಜನರಿಗೆ ಆಹಾರವನ್ನು ಒದಗಿಸುತ್ತಿದ್ದಾರೆ. ಅವರು ಮುಂಬೈ ಪೊಲೀಸರಿಗೆ ಫೇಸ್ ಮಾಸ್ಕ್ ಗಳನ್ನೂ ಕೂಡ ಒದಗಿಸಿದ್ದಾರೆ ಮತ್ತು ಲಾಕ್ ಡೌನ್ ಸಮಯದಲ್ಲಿ ಅವರು ಕಾರ್ಮಿಕರನ್ನು ಅವರವರ ಮನೆಗೆ ಕರೆತಂದರು, ಸೋನು ನಡೆಸಿರುವ ಈ ಕಾರ್ಯಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ ಮತ್ತು ಈಗ ಅವರು ಕಾರ್ಮಿಕರಿಗೆ ಉದ್ಯೋಗವನ್ನು ಒದಗಿಸಲು ಮೊಬೈಲ್ ಆ್ಯಪ್ ಅನ್ನು ಸಹ ಪ್ರಾರಂಭಿಸಿದ್ದಾರೆ.