Deepika Padukone Dance At Ananth Ambani-Radhika Merchant Pre Wedding: ಬಾಲಿವುಡ್‌ನ ಕ್ಯೂಟ್ ಜೋಡಿಗಳಲ್ಲಿ ಒಂದಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್, ಮಾರ್ಚ್ 3 ರಂದು ಜಾಮ್‌ನಗರಕ್ಕೆ ತೆರೆಳಿದ್ದಾರೆ. ಅಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹಪೂರ್ವ ಆಚರಣೆಗಳು ನಡೆಯುತ್ತಿದ್ದು, ಈ ಜೋಡಿ ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಗಾಯಕರು ಹಾಡುಗಳನ್ನು ಹಾಡುತ್ತಿದ್ದರೆ, ತಾರಾ ಬಳಗ ತಮ್ಮದೇ ಶೈಲಿಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ.
ಅನಂತ್-ರಾಧಿಕಾ ಪ್ರೀ ವೆಡ್ಡಿಂಗ್ ಸೆಲೆಬ್ರೇಷನ್‌ನಲ್ಲಿ ದೇಶ ಮತ್ತು ಪ್ರಪಂಚದಾದ್ಯಂತದ ಅನೇಕ ಪ್ರಸಿದ್ಧ ವ್ಯಕ್ತಿಗಳನ್ನು ಆಹ್ವಾನಿಸಲಾಗಿದ್ದು, ಅಲ್ಲಿಗೆ ಬಂದಿದ್ದ ಬಿ-ಟೌನ್ ಕಪಲ್ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಕುಣಿದು ಕುಪ್ಪಳಿಸಿದ್ದಾರೆ. ನಟಿ ದೀಪಿಕಾ ಪಡುಕೋಣೆ ಈ ಕಾರ್ಯಕ್ರಮದ ಸಂಜೆಗಾಗಿ ಗೋಲ್ಡನ್ ಮತ್ತು ಕಪ್ಪು ಬಣ್ಣದ ಲೆಹೆಂಗಾ ಚೋಲಿಯಲ್ಲಿ ವೇದಿಕೆ ಮೇಲೆ ಕಾಣಿಸಿಕೊಂಡು ಈಕೆ ಗರ್ಭಿಣಿಯಾದರು ಪಾರ್ಟಿಯ ಭಾಗವಾಗಿ ಗರ್ಬಾ ನೃತ್ಯ ಮಾಡಿದ್ದಾರೆ.
ನಟಿ ದೀಪಿಕಾ ಪಡುಕೋಣೆ ನಾಲ್ಕು ತಿಂಗಳು ಗರ್ಭಿಣಿಯಾದರೂ ಮೊದಲು ಲೆಹೆಂಗಾದಲ್ಲಿ ಕಾಣಿಸಿಕೊಂಡು, ನಂತರ ಗಾರ್ಬಾ ಮಾಡುವುದಕ್ಕಾಗಿ ಸಡಿಲವಾದ ಪ್ಯಾಂಟ್‌ನೊಂದಿಗೆ ಬೀಜ್ ಅನಾರ್ಕಲಿ ಉಡುಗೆಯೊಂದಿಗೆ ದುಪಟ್ಟಾ ಧರಿಸಿದ್ದರು. ಇತ್ತ ರಣವೀರ್ ಕಪ್ಪು ಮತ್ತು ನೀಲಿ ಶೆರ್ವಾನಿ ಧರಿಸಿ ಪತ್ನಿ ದೀಪಿಕಾ ಜೊತೆಗೆ ಕುಣಿದಿದ್ದಾರೆ. ಈ ದಂಪತಿ ದಿಲ್ ಧಡಕ್ನೆ ದೋದಿಂದ ಗಲ್ಲನ್ ಗುಡಿಯನ್ ವರೆಗಿನ ಹಾಡುಗಳಿಗೆ ನೃತ್ಯ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಯಾದಲ್ಲಿ ವೈರಲ್ ಆಗಿದೆ.
ವಿಶೇಷವೆಂದರೆ ಈ ವಿಡಿಯೋದಲ್ಲಿ ನಟಿ ದೀಪಿಕಾ ಪತಿ ರಣವೀರ್ ಜೊತೆಗೆ ನಿಂತ ಜಾಗದಲ್ಲೇ ನಿಧಾನವಾಗಿ ಗಾರ್ಬಾ ಡ್ಯಾನ್ಸ್ ಮಾಡಿದ್ದಾರೆ. ಇನ್ನೂ ರಸಸಂಜೆಯ ಸಮಾರಂಭದಲ್ಲಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಕೂಡ ಗಮನ ಸೆಳೆದಿದ್ದು, ಇವರೊಂದಿಗೆ ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್, ಅರ್ಜುನ್ ಕಪೂರ್, ಅನಿಲ್ ಕಪೂರ್, ಆದಿತ್ಯ ರಾಯ್ ಕಪೂರ್ ಮುಂತಾದ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.