Gandhada Gudi teaser: ಅನಾವರಣಗೊಂಡ ಅಪ್ಪು ಕನಸಿನ ಗಂಧದ ಗುಡಿ ಟೀಸರ್

ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರು ಅಭಿನಯದ ಮುಂಬರುವ ಪ್ರಕೃತಿ ಸಾಕ್ಷ್ಯಚಿತ್ರದ ಟೀಸರ್ ಸೋಮವಾರ ನಟನ ತಾಯಿ ಪಾರ್ವತಮ್ಮ ರಾಜ್‌ಕುಮಾರ್ ಅವರ ಜನ್ಮದಿನದಂದು ಬಿಡುಗಡೆಯಾಯಿತು.

Written by - Zee Kannada News Desk | Last Updated : Dec 6, 2021, 05:48 PM IST
  • ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರು ಅಭಿನಯದ ಮುಂಬರುವ ಪ್ರಕೃತಿ ಸಾಕ್ಷ್ಯಚಿತ್ರದ ಟೀಸರ್ ಸೋಮವಾರ ನಟನ ತಾಯಿ ಪಾರ್ವತಮ್ಮ ರಾಜ್‌ಕುಮಾರ್ ಅವರ ಜನ್ಮದಿನದಂದು ಬಿಡುಗಡೆಯಾಯಿತು.
Gandhada Gudi teaser: ಅನಾವರಣಗೊಂಡ ಅಪ್ಪು ಕನಸಿನ ಗಂಧದ ಗುಡಿ ಟೀಸರ್ title=
Photo Courtesy: screengrab

ಬೆಂಗಳೂರು: ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರು ಅಭಿನಯದ ಮುಂಬರುವ ಪ್ರಕೃತಿ ಸಾಕ್ಷ್ಯಚಿತ್ರದ ಟೀಸರ್ ಸೋಮವಾರ ಅವರ ತಾಯಿ ಪಾರ್ವತಮ್ಮ ರಾಜ್‌ಕುಮಾರ್ ಅವರ ಜನ್ಮದಿನದಂದು ಬಿಡುಗಡೆಯಾಯಿತು.

ಇದು ಪುನೀತ್ ಅವರ ಕನಸಿನ ಪ್ರಾಜೆಕ್ಟ್ ಎಂದು ಬಿಂಬಿಸಲಾಗಿದ್ದು, ಟೀಸರ್ ದೃಶ್ಯಗಳನ್ನು ನಿಜಕ್ಕೂ ಎಲ್ಲರನ್ನು ಹುಬ್ಬೆರಿಸುವಂತಿವೆ.ಈ ಸಾಕ್ಷ್ಯಚಿತ್ರವು ಕರ್ನಾಟಕದ ಕಾಡುಗಳು, ಸುಂದರವಾದ ಕಡಲತೀರಗಳು ಮತ್ತು ನೀರೊಳಗಿನ ಪ್ರಪಂಚವನ್ನು ಪರಿಶೋಧಿಸುತ್ತದೆ.ಪುನೀತ್ ಅವರು ಪ್ರಸಿದ್ಧ ವನ್ಯಜೀವಿ ಚಲನಚಿತ್ರ ನಿರ್ಮಾಪಕ ಅಮೋಘವರ್ಷ ಜೆಎಸ್ ಅವರೊಂದಿಗೆ ಕರ್ನಾಟಕದ ಕಾಡಿನಲ್ಲಿನ ಅನ್ವೇಷಣೆಯಲ್ಲಿ ಜೊತೆಗೂಡಿದ್ದರಿಂದಾಗಿ ಈ ಸಾಕ್ಷ್ಯಚಿತ್ರವನ್ನು ಸುಮಾರು ಒಂದು ವರ್ಷಗಳ ಕಾಲ ಚಿತ್ರಿಕರಿಸಲಾಗಿದೆ.

ಈ ಚಿತ್ರದ ಶೀರ್ಷಿಕೆಯು ಇದು ಡಾ ರಾಜ್‌ಕುಮಾರ್ ಅವರ 1973 ರ ಬ್ಲಾಕ್‌ಬಸ್ಟರ್‌ ಸಿನಿಮಾದ ಗಂಧದಗುಡಿಯ ಶೀರ್ಷಿಕೆಯಾಗಿದೆ, ಇದು ಕರ್ನಾಟಕದ ಕಾಡುಗಳ ಪವಿತ್ರತೆ ಮತ್ತು ಸಂಪತ್ತನ್ನು ರಕ್ಷಿಸುವ ಪ್ರಾಮುಖ್ಯತೆಯನ್ನು ಆಧರಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News