ಗರುಡ ರುಂಡ ಚೆಂಡಾಡಿದ ರಾಕಿ..ಇಂತಾ ಸೀನ್‌ ಸಿನಿಮಾ ಹಿಸ್ಟರಿಯಲ್ಲೇ ಇಲ್ಲ..'KGF' ಕ್ಲೈಮ್ಯಾಕ್ಸ್ ಮೇಕಿಂಗ್ ವಿಡಿಯೋ ವೈರಲ್!

KGF Climax Scene : ರಾಕಿಂಗ್‌ ಸ್ಟಾರ್ ಯಶ್‌ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಧೂಳ್‌ ಎಬ್ಬಿಸಿದ್ದು ಗೊತ್ತೇಯಿದೆ. ಅಲ್ಲದೇ ಇತ್ತೀಚೆಗಷ್ಟೇ 'KGF' ಸರಣಿ ಸಿನಿಮಾಗಳು ಜಪಾನ್ ದೇಶದಲ್ಲಿ ರಿಲೀಸ್ ಆಗಿ ಸದ್ದು ಮಾಡಿದ್ದವು. ಸದ್ಯ ಜಪಾನೀಯರು ಸಹ ರಾಕಿಬಾಯ್‌ ಫ್ಯಾನ್ಸ್‌ ಆಗಿದ್ದಾರೆ. ಈ ನಡುವೆಯೇ 'KGF' ಚಾಪ್ಟರ್-1 ಕ್ಲೈಮ್ಯಾಕ್ಸ್ ಮೇಕಿಂಗ್ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದೆ.   

Written by - Savita M B | Last Updated : Aug 12, 2023, 07:42 PM IST
  • 'KGF' ಕ್ಲೈಮ್ಯಾಕ್ಸ್ ಮೇಕಿಂಗ್ ವಿಡಿಯೋ ಒಂದು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ
  • ಮಾರಿ ಜಾತ್ರೆಯಲ್ಲಿ ರಾಕಿ ಗರುಡನ ರುಂಡ ಹಾರಿಸುವ ಸೀನ್‌ಗೆ ಫ್ಯಾನ್ಸ್‌ ನಿಬ್ಬೆರಗಾಗಿದ್ದರು
  • ದೃಶ್ಯ ನೈಜವಾಗಿ ಬರಬೇಕೆಂದು ಸಾಕಷ್ಟು ರಿಟೇಕ್‌ಗಳನ್ನು ತೆಗೆದುಕೊಂಡು ಚಿತ್ರೀಕರಣ ಮಾಡಲಾಗಿದೆ.
 ಗರುಡ ರುಂಡ ಚೆಂಡಾಡಿದ ರಾಕಿ..ಇಂತಾ ಸೀನ್‌ ಸಿನಿಮಾ ಹಿಸ್ಟರಿಯಲ್ಲೇ ಇಲ್ಲ..'KGF' ಕ್ಲೈಮ್ಯಾಕ್ಸ್ ಮೇಕಿಂಗ್ ವಿಡಿಯೋ ವೈರಲ್!  title=

KGF Viral Video : 'KGF' ಸರಣಿ ಚಿತ್ರಗಳ ಯಶಸ್ಸಿನಲ್ಲಿ ಯಶ್, ಹೊಂಬಾಳೆ ಸಂಸ್ಥೆ ಹಾಗೂ ಪ್ರಶಾಂತ್ ನೀಲ್ ಎಲ್ಲರಿಗೂ ಪಾಲಿದೆ. 2018ರಲ್ಲಿ ಚಿತ್ರದ ಮೊದಲ ಭಾಗ ರಿಲೀಸ್ ಆಗಿ 250 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿತ್ತು. ನಂತರ ಕಳೆದ ವರ್ಷ ಚಾಪ್ಟರ್-2 ಬಿಡುಗಡೆಯಾಗಿ 1200 ಕೋಟಿ ರೂ. ಕಲೆಕ್ಷನ್‌ ಮಾಡಿ ರೆಕಾರ್ಡ್‌ ಮಾಡಿತ್ತು. ಸದ್ಯ 'KGF' ಸರಣಿಯ 3ನೇ ಸಿನಿಮಾ ಮಾಡುವುದಾಗಿ ಚಿತ್ರತಂಡ ಸುಳಿವು ಕೊಟ್ಟಿದ್ದು, ಆದರೆ ಯಾವಾಗ ಎನ್ನುವುದು ಯಾರಿಗೂ ಗೊತ್ತಿಲ್ಲ. 

ಇತ್ತೀಚೆಗೆ ಜಪಾನ ದೇಶದಲ್ಲಿ ರಾಕಿಬಾಯ್‌ 'KGF' ಸರಣಿ ಸಿನಿಮಾಗಳು ರಿಳಿಸ್‌ ಆಗಿ ಸಖತ್‌ ಸೌಂಡ್‌ ಮಾಡಿದ್ದವು. ಜಪಾನೀಯರು ಯಶ್‌ ಅಭಿಮಾನಿಗಳಾಗಿ, ಸಲಾಂ ರಾಕಿಭಾಯ್ ಎಂದು ಜೈಕಾರವನ್ನು ಹಾಕಿದ್ದರು. ಬೇರೆ ದೇಶದಲ್ಲಿ ಕನ್ನಡ ಸಿನಿಮಾ ಈ ರೀತಿ ಸದ್ದು ಮಾಡಿದ್ದು ಹೆಮ್ಮೆಯ ವಿಚಾರವೇ ಸರಿ. 

ಇದನ್ನೂ ಓದಿ-'ಟೋಬಿ'ಯ ನೆತ್ತರ ನರ್ತನಕ್ಕೆ ಫ್ಯಾನ್ಸ್ ಫುಲ್ ಫಿದಾ.. ಆಗಸ್ಟ್ 25ಕ್ಕೆ ನಿಮ್ಮನ್ನ ಅಳಿಸಲು ಬರ್ತಿದ್ದಾನೆ ಟೋಬಿ

ಇದೀಗ 'KGF' ಚಾಪ್ಟರ್-1 ಕ್ಲೈಮ್ಯಾಕ್ಸ್ ಮೇಕಿಂಗ್ ವಿಡಿಯೋ ಒಂದು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್ ಆಗ್ತಿದೆ. ಮಾರಿ ಜಾತ್ರೆಯಲ್ಲಿ ರಾಕಿ ಗರುಡನ ರುಂಡ ಹಾರಿಸುವ ಸೀನ್‌ಗೆ ಫ್ಯಾನ್ಸ್‌ ನಿಬ್ಬೆರಗಾಗಿದ್ದರು. ಗಣಿ ಕಾರ್ಮಿಕರನ್ನು ಗರುಡನ ಕೈಯಿಂದ ತಪ್ಪಿಸಲು ರಾಕಿ ಗರುಡನ ರುಂಡವನ್ನು ತೆಗೆಯುತ್ತಾನೆ. ಈ ಸೀನ್‌ ಅಭಿಮಾನಿಗಳಿಗೆ ಸಖತ್‌ ಕಿಕ್‌ ಕೊಟ್ಟಿದ್ದಂತೂ ಸುಳ್ಳಲ್ಲ. ಸದ್ಯ ಸೋಷಿಯಲ್‌ ಮಿಡಿಯಾದಲ್ಲಿ ಈ ದೃಶ್ಯದ ಮೇಕಿಂಗ್‌ ವಿಡಿಯೋ ಒಂದು ಹರಿದಾಡುತ್ತಿದ್ದು, ಗಂಭೀರವಾದ ಸೀನ್‌ನ್ನು ಸಹ ಚಿತ್ರೀಕರಣದ ವೇಳೆ ಚಿತ್ರತಂಡ ಸಖತ್‌ ಎಂಜಾಯ್ ಮಾಡಿರೋದನ್ನು ನೋಡಬಹುದು.

ದೊಡ್ಡ ಮಾರಿ ವಿಗ್ರಹದ ಎದುರು ನೀರಿನ ಹಳ್ಳದಲ್ಲಿ ಈ ಸನ್ನಿವೇಶವನ್ನು ನಾವು ಸ್ಕ್ರೀನ್‌ ಮೇಲೆ ನೋಡಬಹುದು. ಇದಕ್ಕಾಗಿ ಸೆಟ್‌ ನಿರ್ಮಾಣ ಮಾಡಿ ಚಿತ್ರೀಕರಣ ನಡೆಸಲಾಗಿತ್ತು. ದೃಶ್ಯ ನೈಜವಾಗಿ ಬರಬೇಕೆಂದು ಸಾಕಷ್ಟು ರಿಟೇಕ್‌ಗಳನ್ನು ತೆಗೆದುಕೊಂಡು ಚಿತ್ರೀಕರಣ ಮಾಡಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ನೀರಿನಿಂದ ಯಶ್‌ ಎದ್ದು ಗರುಡ ರಾಮ್‌ ಕಡೆ ದೊಡ್ಡ ಕತ್ತಿಯನ್ನು ಬೀಸುವ ದೃಶ್ಯವನ್ನು ಭುವನ್ ಗೌಡ ಅಂಡ್ ಟೀಂ ರೆಕಾರ್ಡ್‌ ಮಾಡಿಕೊಂಡಿರುವದನ್ನು ವಿಡಿಯೋದಲ್ಲಿ ಕಾಣಬಹುದು. 

ಇದನ್ನೂ ಓದಿ-ಬಾಹುಬಲಿ ʼಕಟ್ಟಪ್ಪʼ ಖ್ಯಾತಿಯ ನಟ ಸತ್ಯರಾಜ್ ತಾಯಿ ನಿಧನ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News