Prabhas ಅಭಿಮಾನಿಗಳಿಗೆ ಸಿಹಿ ಸುದ್ದಿ..! ಟಿಕೆಟ್‌ ಮಾರಾಟದಲ್ಲೂ 'ರಾಧೆ ಶ್ಯಾಮ್' ದಾಖಲೆ..!

Radhe Shyam Updates - ಪ್ರಭಾಸ್‌ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ತಮ್ಮ ನೆಚ್ಚಿನ ನಟನ ಬಹು ನಿರೀಕ್ಷಿತ ಸಿನಿಮಾ ರಿಲೀಸ್‌ ಗೆ ರೆಡಿಯಾಗಿದೆ.

Written by - Malathesha M | Edited by - Nitin Tabib | Last Updated : Mar 10, 2022, 05:33 PM IST
  • ಪ್ರಭಾಸ್ ಅಭಿಮಾನಿಗಳಿಗೊಂದು ಸಂತಸದ ಸುದ್ದಿ.
  • ತಮ್ಮ ನೆಚ್ಚಿನ ನಟನ ಬಹು ನಿರೀಕ್ಷಿತ ಸಿನಿಮಾ ರಿಲೀಸ್‌ ಗೆ ರೆಡಿಯಾಗಿದೆ.
  • ಜಗತ್ತಿನಾದ್ಯಂತ 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ ಗಳಲ್ಲಿ 'ರಾಧೆ ಶ್ಯಾಮ್' ಧೂಳೆಬ್ಬಿಸಲಿದೆ
Prabhas ಅಭಿಮಾನಿಗಳಿಗೆ ಸಿಹಿ ಸುದ್ದಿ..! ಟಿಕೆಟ್‌ ಮಾರಾಟದಲ್ಲೂ 'ರಾಧೆ ಶ್ಯಾಮ್' ದಾಖಲೆ..! title=
Radhe Shyam Latest Update(File Photo)

Radhe Shyam Updates - ಪ್ರಭಾಸ್‌ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ತಮ್ಮ ನೆಚ್ಚಿನ ನಟನ ಬಹು ನಿರೀಕ್ಷಿತ ಸಿನಿಮಾ ರಿಲೀಸ್‌ ಗೆ ರೆಡಿಯಾಗಿದೆ. ನಾಳೆ ಪ್ರಭಾಸ್‌ ನಟನೆಯ 'ರಾಧೆ ಶ್ಯಾಮ್' ತೆರೆಗೆ ಬರುತ್ತಿದ್ದು, ಯಂಗ್‌ ರೆಬೆಲ್ ಚಿತ್ರ ಟಿಕೆಟ್‌ ಮಾರಾಟದ ವಿಷಯದಲ್ಲೂ ದಾಖಲೆ ಬರೆದಿದೆ. ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಈ ಸಿನಿಮಾ ಭರ್ಜರಿ ಹೈಪ್‌ ಕ್ರಿಯೇಟ್‌ ಮಾಡಿದೆ.

'ರಾಧೆ ಶ್ಯಾಮ್' (Radhe Shyam) ಶೂಟಿಂಗ್‌ ಶುರುವಾದಾಗಿನಿಂದಲೂ ಸಿಕ್ಕಾಪಟ್ಟೆ ಹೈಪ್‌ ಕ್ರಿಯೇಟ್‌ ಮಾಡಿತ್ತು. ಆದರೆ, ನಂತರ ಕೊರೊನಾ ಕಾರಣಕ್ಕೆ 'ರಾಧೆ ಶ್ಯಾಮ್'ಗೆ ಸಾಕಷ್ಟು ಅಡೆತಡೆಗಳು ಎದುರಾಗಿದ್ದವು. ಆದರೆ ಇದೀಗ ಕೊರೊನಾ ಕಂಟಕ ಮುಗಿದು ಭಾರತೀಯ ಸಿನಿಮಾ ರಂಗದಲ್ಲಿ ಹೊಸ ಮನ್ವಂತರ ಶುರುವಾಗಿದೆ. ಹೀಗಾಗಿ ಸಾಲು ಸಾಲು ಸಿನಿಮಾಗಳು ರಿಲೀಸ್‌ ಗೆ (Radhe Shyam Release Date) ರೆಡಿಯಾಗಿವೆ. ಇದೇ ರೀತಿ ಪ್ರಭಾಸ್‌ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ರಾಧೆ ಶ್ಯಾಮ್' ಕೂಡ ನಾಳೆ ತೆರೆಗೆ ಅಪ್ಪಳಿಸಲಿದೆ.

ಹೊಸ ರೆಕಾರ್ಡ್..! (Radhe Shyam Latest Updates)
ಅಂದಹಾಗೆ 'ರಾಧೆ ಶ್ಯಾಮ್' ಸಿನಿಮಾ ಕೇವಲ ಭಾರತದಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಅದರಲ್ಲೂ ಯಂಗ್‌ ರೆಬೆಲ್‌ ಪ್ರಭಾಸ್‌ ಅವರಿಗೆ ಹೊರ ದೇಶದಲ್ಲೂ ಕೋಟ್ಯಂತರ ಅಭಿಮಾನಿಗಳಿದ್ದು, ಅವರೆಲ್ಲಾ 'ರಾಧೆ ಶ್ಯಾಮ್'ಗಾಗಿ ಕಾದು ಕುಳಿತಿದ್ದಾರೆ. ಹೀಗಾಗಿ 'ರಾಧೆ ಶ್ಯಾಮ್' ಸಿನಿಮಾ ಹೊಸ ದಾಖಲೆ ಕ್ರಿಯೇಟ್‌ ಮಾಡಿದ್ದು, ಫ್ಯಾನ್ಸ್‌ ಫುಲ್‌ ಖುಷ್‌ ಆಗಿದ್ದಾರೆ.

ಸಖತ್‌ ಡಿಮ್ಯಾಂಡ್‌ (Radhe Shyam Latest News)
'ರಾಧೆ ಶ್ಯಾಮ್' ಸಿನಿಮಾದಲ್ಲಿ ನಟ ಪ್ರಭಾಸ್‌ಗೆ ಕರಾವಳಿ ಬೆಡಗಿ ಪೂಜಾ ಹೆಗ್ಡೆ *(Pooja Hegde) ಸಾಥ್‌ ನೀಡಿದ್ದಾರೆ.ಕಥೆ ಮೂಲಕ ಕ್ಯೂರಿಯಾಸಿಟಿ ಕ್ರಿಯೇಟ್‌ ಮಾಡಿದ್ದ 'ರಾಧೆ ಶ್ಯಾಮ್' ಈಗಾಗಲೇ ಟ್ರೈಲರ್‌, ಟೀಸರ್‌ ಮೂಲಕವೂ ಸದ್ದು ಮಾಡಿದೆ. ಅದ್ರಲ್ಲೂ ಪ್ರಭಾಸ್‌ ನಟನೆಗೆ ಪ್ರೇಕ್ಷಕ ಫಿದಾ ಆಗಿದ್ದು, ಪೂಜಾ ಸೌಂದರ್ಯಕ್ಕೆ ಪಡ್ಡೆ ಹೈಕ್ಳ ನಿದ್ದೆ ಹಾರಿ ಹೋಗಿದೆ. ಹೀಗೆ ನಾಳೆ ಕೋಟ್ಯಂತರ ಸಿನಿ ರಸಿಕರು ಪ್ರಭಾಸ್‌ ಚಿತ್ರ ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಹೀಗಾಗಿ 'ರಾಧೆ ಶ್ಯಾಮ್' ಸಿನಿಮಾ ಟಿಕೆಟ್‌ ಗೆ ಸಖತ್‌ ಡಿಮ್ಯಾಂಡ್‌ ಕ್ರಿಯೇಟ್‌ ಆಗಿದೆ.

ಇದನ್ನೂ ಓದಿ-James Movie : ಪವರ್‌ ಸ್ಟಾರ್‌ ಸಿನಿಮಾ 'ಜೇಮ್ಸ್‌' 4 ದಿನದಲ್ಲಿ ₹100 ಕೋಟಿ ಗಳಿಸೋದು ಪಕ್ಕಾ!

ಮಿಲಿಯನ್‌ ಟಿಕೆಟ್‌ ಸೇಲ್‌
ವಿದೇಶದಲ್ಲಿ ಅದರಲ್ಲೂ ಬ್ರಿಟನ್‌ ನಲ್ಲಿ ಈ ಬಾರಿ ಕಮಾಲ್‌ ಮಾಡಲು 'ರಾಧೆ ಶ್ಯಾಮ್' ಸನ್ನದ್ಧವಾಗಿದೆ. ಅದರಲ್ಲೂ ಫಸ್ಟ್ ಡೇ ಫಸ್ಟ್ ಶೋ ನೋಡಿ, ಪ್ರಭಾಸ್‌ ಗೆ ಜೈಕಾರ ಹಾಕಲು ಬ್ರಿಟನ್‌ ನಲ್ಲೂ ಅಭಿಮಾನಿಗಳು ಸಜ್ಜಾಗಿದ್ದು, 'ರಾಧೆ ಶ್ಯಾಮ್' ಟಿಕೆಟ್ ಖರೀದಿಗೆ ಮುಗಿಬಿದ್ದಿದ್ದಾರೆ. 'ರಾಧೆ ಶ್ಯಾಮ್' ಸಿನಿಮಾ ರಿಲೀಸ್‌ ಗೆ ಕೆಲದಿನಗಳು ಬಾಕಿ ಇರುವಾಗಲೇ ಪ್ರಿ ಬುಕಿಂಗ್ ಆರಂಭ ಆಗಿತ್ತು. ಬ್ರಿಟನ್‌ನಲ್ಲಿ 4 ದಿನಗಳ ಹಿಂದೆ ಟಿಕೆಟ್ ಬುಕ್ಕಿಂಗ್ ಓಪನ್ ಆಗಿತ್ತು. ಹೀಗೆ ಪ್ರಿ ಟಿಕೆಟ್‌ ಬುಕಿಂಗ್‌ ಆರಂಭವಾದ ಕೆಲವೇ ದಿನದಲ್ಲಿ ಸುಮಾರು 1 ಮಿಲಿಯನ್‌ ಟಿಕೆಟ್‌ ಸೇಲ್‌ ಆಗಿದೆಯಂತೆ. ಹಾಗಾದ್ರೆ ಇದು ಭಾರತೀಯ ಸಿನಿಮಾ ಒಂದು ವಿದೇಶದಲ್ಲಿ ಕ್ರಿಯೇಟ್‌ ಮಾಡಿರುವ ಹೊಸ ದಾಖಲೆಯೇ ಸರಿ ಎನ್ನಬಹುದು.

ಇದನ್ನೂ ಓದಿ-Kangana On PM Modi: 'ಈ ಕಾರಣಕ್ಕಾಗಿ ನಾನು PM Modi ಪರವಾಗಿ ಹೋರಾಡುತ್ತೇನೆ', ವಿಡಿಯೋ ಹಂಚಿಕೊಂಡು Kangana Ranaut ಹೇಳಿದ್ದೇನು?

ಜಗತ್ತಿನಾದ್ಯಂತ 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ ಗಳಲ್ಲಿ 'ರಾಧೆ ಶ್ಯಾಮ್' ಧೂಳೆಬ್ಬಿಸಲಿದೆ. ಒಟ್ಟಾರೆ ಹೇಳೋದಾದ್ರೆ ಪ್ರಭಾಸ್‌ ಫ್ಯಾನ್ಸ್‌ 'ರಾಧೆ ಶ್ಯಾಮ್' ಹಬ್ಬಕ್ಕೆ ಸರ್ವ ಸನ್ನದ್ಧವಾಗಿದ್ದು, ನಾಳೆ ಥಿಯೇಟರ್‌ ಗಳ ಎದುರು ಸಂಭ್ರಮ ಮನೆ ಮಾಡೋದು ಗ್ಯಾರಂಟಿ.

ಇದನ್ನೂ ಓದಿ-Samantha-Nagachaitanya: ನಟಿ ಸಮಂತಾ & ನಾಗಚೈತನ್ಯ ನಡುವೆ ಮತ್ತೊಂದು ಮಹಾ ಬಿರುಕು..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News