'ಜೇಮ್ಸ್' ಅದ್ಯಾವ ಪರಿ ಹವಾ ಎಬ್ಬಿಸಿದೆ ಅಂದ್ರೆ, ಹಿಂದೆ ಎಂದೂ ಇಂತಹ ಸಂಭ್ರಮ ಕಳೆಗಟ್ಟಿರಬಾರದು, ಮುಂದೆ ಎಂದೂ ಈ ರೀತಿ ಕನ್ನಡ ಸಿನಿಮಾ ಒಂದು ರಿಲೀಸ್ ಆಗಿರಬಾರದು. ಹಂಗಿದೆ ಅಪ್ಪು ಸಿನಿಮಾ ಹವಾ. ಇನ್ನೇನು ಮುಂದಿನ ವಾರ 'ಜೇಮ್ಸ್' ಸಾವಿರಾರು ಸ್ಕ್ರೀನ್ ಗಳಲ್ಲಿ ರಿಲೀಸ್ ಆಗಲಿದ್ದು, ಥಿಯೇಟರ್ ಗಳ ಎದುರು ಹಬ್ಬದ ವಾತಾವರಣ ನಿರ್ಮಾಣ ಆಗಿದೆ. ಇನ್ನು ಈ ಹೊತ್ತಲ್ಲೇ ಬಾಕ್ಸ್ ಆಫಿಸ್ ನಲ್ಲಿ ಹೊಸ ರೆಕಾರ್ಡ್ ಕ್ರಿಯೇಟ್ ಮಾಡುವ ಮುನ್ಸೂಚನೆಯನ್ನೂ ನೀಡಿದೆ ಪವರ್ ಸ್ಟಾರ್ ಸಿನಿಮಾ.
ಕಳೆದ 2 ದಶಕಗಳಿಂದಲೂ ಅಪ್ಪು ಸಿನಿಮಾಗಳು(Puneeth Rajkumar Movie) ಕನ್ನಡ ಚಿತ್ರರಂಗದಲ್ಲಿ ಧೂಳೆಬ್ಬಿಸುತ್ತಾ ಬಂದಿದ್ದವು. ಅಪ್ಪು ಹೀರೋ ಆಗಿ ಎಂಟ್ರಿಯಾದ ಮೊದಲ ಸಿನಿಮಾದಿಂದ ಹಿಡಿದು ಕೊನೇ ಸಿನಿಮಾ 'ಜೇಮ್ಸ್'ವರೆಗೂ ಎಲ್ಲಾ ಚಿತ್ರಗಳು ಹಬ್ಬದ ವಾತಾವರಣ ಕ್ರಿಯೇಟ್ ಮಾಡಿವೆ. ಆದರೆ ಪವರ್ ಸ್ಟಾರ್ ಇಂದು ನಮ್ಮೊಡನಿಲ್ಲ ಅನ್ನೋ ನೋವು ದೇಶವನ್ನೇ ಕಾಡುತ್ತಿದೆ. ಆದರೂ ಅವರು ಬಿಟ್ಟು ಹೋದ ಕೊನೆಯ ಸಿನಿಮಾ ಜೇಮ್ಸ್ ನಮ್ಮೆದುರು ಭರ್ಜರಿಯಾಗಿ ತೆರೆ ಮೇಲೆ ಅಪ್ಪಳಿಸಲು ಸಜ್ಜಾಗಿದೆ. ಇದಕ್ಕಾಗಿ ದೇಶವೇ ಸಂಭ್ರಮದ ತಯಾರಿ ನಡೆಸುತ್ತಿದೆ.
ಇದನ್ನೂ ಓದಿ : Kangana On PM Modi: 'ಈ ಕಾರಣಕ್ಕಾಗಿ ನಾನು PM Modi ಪರವಾಗಿ ಹೋರಾಡುತ್ತೇನೆ', ವಿಡಿಯೋ ಹಂಚಿಕೊಂಡು Kangana Ranaut ಹೇಳಿದ್ದೇನು?
₹100 ಕೋಟಿ ಟಾರ್ಗೆಟ್..!
ಇಷ್ಟೆಲ್ಲಾ ಸಂಭ್ರಮಗಳ ನಡುವೆ 'ಜೇಮ್ಸ್'(James Movie) ಅಬ್ಬರಕ್ಕೆ ಗಲ್ಲಾ ಪೆಟ್ಟಿಗೆಯೇ ಉಡೀಸ್ ಆಗಿ ಹೋಗುತ್ತೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಹೌದು, 'ಜೇಮ್ಸ್' ರಿಲೀಸ್ ಆಗಿ ಕೇವಲ 4 ದಿನದ ಒಳಗೆ 100 ಕೋಟಿಗೂ ಹೆಚ್ಚು ಹಣ ಬಾಚೋದು ಪಕ್ಕಾ ಎನ್ನಲಾಗುತ್ತಿದೆ. ಇನ್ನು ಚಿತ್ರ ರಿಲೀಸ್ ಆಗಿ ಒಂದು ವಾರ ಕಳೆಯುವ ಒಳಗಾಗಿ ಬಾಕ್ಸ್ ಆಫಿಸ್ ನಲ್ಲೂ ಹೊಸ ದಾಖಲೆ ಬರೆಯೋದು ಗ್ಯಾರಂಟಿ. ಈ ಮೂಲಕ ಅಪ್ಪು ಫ್ಯಾನ್ಸ್ ಮತ್ತೊಂದು ರೆಕಾರ್ಡ್ ಬ್ರೇಕ್ ಮಾಡಲು ಸಜ್ಜಾಗಿದ್ದಾರೆ. ಕನ್ನಡಿಗರ ಅಪ್ಪು, ಕರುನಾಡ ಹೆಮ್ಮೆ ಅನ್ನೋದು ಮತ್ತೊಮ್ಮೆ ತೆರೆ ಮೇಲೆ ಸಾಬೀತಾಗಲಿದೆ.
ಸಿಕ್ಕಾಪಟ್ಟೆ ಡಿಮ್ಯಾಂಡ್
ಮತ್ತೊಂದ್ಕಡೆ ಅಪ್ಪು(Appu) ಕೊನೆಯ ಚಿತ್ರಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಕೋಟಿ ಕೋಟಿ ಆಫರ್ ಬರುತ್ತಿದ್ದರು ಕೂಡ 'ಜೇಮ್ಸ್' ನಿರ್ಮಾಪಕರು ಇದಕ್ಕೆ ಒಪ್ಪುತ್ತಿಲ್ಲ. BKT ಭಾಗಕ್ಕೆ 12 ಕೋಟಿ ಆಫರ್ ಬಂದ್ರೂ ನಿರ್ಮಾಪಕರು ಇದನ್ನ ತಿರಸ್ಕರಿಸಿದ್ದಾರಂತೆ. ಮಾರ್ಚ್ 17ಕ್ಕೆ 'ಜೇಮ್ಸ್' ರಿಲೀಸ್ ಆಗುತ್ತಿದೆ. ಇದೇ ಕಾರಣಕ್ಕೆ ವಿತರಕರು 'ಜೇಮ್ಸ್' ಸಿನಿಮಾಗೆ ಮುಗಿಬಿದ್ದು, ದೊಡ್ಡ ದೊಡ್ಡ ಆಫರ್ ಕೊಡುತ್ತಿದ್ದಾರೆ. ಆದರೆ ಇದ್ಯಾವುದಕ್ಕೂ ಚಿತ್ರದ ನಿರ್ಮಾಪಕ ಕಿಶೋರ್ ಕೇರ್ ಮಾಡುತ್ತಿಲ್ಲ. ಅಷ್ಟಕ್ಕೂ BKT ಅಂದ್ರೆ ಬೆಂಗಳೂರು, ಕೋಲಾರ ಹಾಗೂ ತುಮಕೂರು ಭಾಗಕ್ಕೆ 12 ಕೋಟಿ ರೂಪಾಯಿ ಆಫರ್ ಕೊಟ್ಟರೂ ನಿರ್ಮಾಪಕ ಕಿಶೋರ್ ಓಕೆ ಅಂದಿಲ್ಲ.
ಮಾರ್ಚ್ 17ರಂದು ಕರುನಾಡಿನ ಪ್ರತಿ ಮೂಲೆಮೂಲೆಯಲ್ಲೂ ಅಪ್ಪುವಿಗೆ ಜೈಕಾರ ಕೇಳಿ ಬರೋದು ಗ್ಯಾರಂಟಿ. ದೇಶಾದ್ಯಂತ ಸಾವಿರಾರು ಸ್ಕ್ರೀನ್‌ಗಳನ್ನ 'ಜೇಮ್ಸ್' ಸಿನಿಮಾಗಾಗಿ ಮೀಸಲಿಡಲಾಗಿದೆ. ಇನ್ನೇನು ದೇಶದ ಪ್ರತಿಯೊಂದು ಪ್ರದೇಶದಲ್ಲೂ ಜೇಮ್ಸ್ ರಿಲೀಸ್ ಆಗಿ, ಹಲವು ದಾಖಲೆಗಳನ್ನ ಬ್ರೇಕ್ ಮಾಡೋದು ಪಕ್ಕಾ ಅನ್ನಬಹುದು. ಈ ಮೂಲಕ ಕನ್ನಡದ ಸಿನಿಮಾ ವಿಶ್ವದಾಖಲೆ ಬರೋದು ಗ್ಯಾರಂಟಿ.
ಇದನ್ನೂ ಓದಿ : Samantha-Nagachaitanya: ನಟಿ ಸಮಂತಾ & ನಾಗಚೈತನ್ಯ ನಡುವೆ ಮತ್ತೊಂದು ಮಹಾ ಬಿರುಕು..?
ನ್ನು ಬಳಕೆ ಸಹ ಒಂದು ಕಾರಣವಾಗಲಿದೆ. ಆದರೆ, ಸದ್ಯದ ಮಟ್ಟಿಗೆ ಎಕ್ಸಿಟ್ ಪೋಲ್ ಗಳ ಫತಿತಾಂಶದಂತೆ AAP ಕ್ಲೀನ್ ಸ್ವೀಪ್ ನತ್ತ ಮುಂದುವರೆದಿದ್ದು, ಮತ ಎಣಿಕೆಯ ನಂತರವೇ ಎಲ್ಲಾ ಅಂಕಿ-ಅಂಶಗಳು ಮತ್ತು ಮಾರನಗಳು ನಿಚ್ಚಳವಾಗಳಿವೆ.