ಪ್ರೇಮಿಗಳ ದಿನದಂದು ಪ್ರೇಮಿಗಳಿಗಾಗಿ 'ಗೂಗಲ್' ಗೀತೆ

ನಿಮ್ಮನ್ನು ನೀವು ಕಂಡು ಕೊಳ್ಳುವುದೇ ಗೂಗಲ್ ಕಥೆಯ ಜೀವಾಳ.

Updated: Feb 14, 2018 , 11:41 AM IST
ಪ್ರೇಮಿಗಳ ದಿನದಂದು ಪ್ರೇಮಿಗಳಿಗಾಗಿ 'ಗೂಗಲ್' ಗೀತೆ

ತಮ್ಮದೇ ನಿರ್ಮಾಣ ಸಂಸ್ಥೆಯಾಗಿರುವ ಉತ್ಸವ್ ಮೂವೀಸ್ ಅಡಿಯಲ್ಲಿ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತ, ಛಾಯಾಗ್ರಹಣ ಕೆಲಸಗಳನ್ನು ತಾವೇ ನಿರ್ವಹಿಸುವ ಮೂಲಕ ಡಾ.ವಿ.ನಾಗೇಂದ್ರ ಪ್ರಸಾದ್ 'ಒನ್ ಮ್ಯಾನ್ ಶೋ' ಆಗಿ ಕೆಲಸ ಮಾಡಿರುವ ಚಿತ್ರ 'ಗೂಗಲ್'. 

'ಗೂಗಲ್' ಎಂಬ ಸರ್ಚ್ ಎಂಜಿನ್ ಇಡೀ ವಿಶ್ವವನ್ನೇ ಅಂಗೈಯಲ್ಲಿ ಒದಗಿಸುವ ಸಾಧನ. ನಿಮ್ಮನ್ನು ನೀವು ಕಂಡು ಕೊಳ್ಳುವುದೇ ಗೂಗಲ್ ಕಥೆಯ ಜೀವಾಳ. ಸ್ನೇಹಿತರ ನಡುವೆ ಮುಚ್ಚುಮರೆ ಇರಲ್ಲ, ಪ್ರೇಮಿಗಳು ಎಲ್ಲವನ್ನೂ ಶೇರ್ ಮಾಡ್ಕೊತಾರೆ. ಗಂಡನಿಗೆ ಮನೇನೆ ಪ್ರಪಂಚ-ಹೆಂಡತಿಗೆ ಗಂಡನೇ ಪ್ರಪಂಚ, ಅವರಿಬ್ಬರಿಗೂ ಮಕ್ಕಳೇ ಪ್ರಪಂಚ. ನಾಲ್ಕು ಗೋಡೆಯ ಈ ಪುಟಾಣಿ ಪ್ರಪಂಚದಲ್ಲಿ ಎಲ್ಲವನ್ನೂ ಶೇರ್ ಮಾಡ್ಕೊತಾರೆ. ಆದರೆ ಮೊಬೈಲ್ ವಿಚಾರ ಬಂದಾಗ ಎಷ್ಟೇ ಸ್ನೇಹ ಇದ್ದರೂ, ಪ್ರೀತಿ ಇದ್ದರೂ ತಮ್ಮ ಮೊಬೈಲನ್ನು ಇನ್ನೊಬ್ಬರು ಮುಟ್ಟಲು ಬಿಡುವುದಿಲ್ಲ. ಯಾಕೆಂದರೆ ಇವರ ಅಂತರಂಗ ಅನ್ನೋ ಗೂಗಲ್ ನಲ್ಲಿ ಇನ್ನೊಬ್ಬರು ಹುಡುಕಾಡಬಾರದು ಅಂತ. ಈ ಚಿತ್ರದ ಕಥಾ ಹಂದರವೇ ನಿಮ್ಮ ಅಂತರಂಗದ ಗೂಗಲ್ ಸರ್ಚ್ ಅಂತ ಹೇಳ್ತಾರೆ ಡಾ.ವಿ.ನಾಗೇಂದ್ರ ಪ್ರಸಾದ್.

ಡಾ.ವಿ.ನಾಗೇಂದ್ರ ಪ್ರಸಾದ್ ಇಂದು ಪ್ರೇಮಿಗಳ ದಿನಕ್ಕಾಗಿ ಪ್ರೀತಿಸುವವರಿಗಾಗಿ ಗೂಗಲ್ ಚಿತ್ರದ "ತುಂಬಾ ತುಂಬಾ ನೀನಿಷ್ಟಾ ಕಣೇ..." ಗೀತೆಯನ್ನು ಅರ್ಪಿಸಿದ್ದಾರೆ. ಈ ಹಾಡನ್ನು ನಾನು ಪ್ರೀತಿಸುತ್ತೇನೆ ಮತ್ತು ನಿಮ್ಮ ಪ್ರೇಮಿ / ಹೆಂಡತಿ / ಗಂಡನಿಗೆ ಇದನ್ನು ಅರ್ಪಿಸುತ್ತೇನೆ ಎಂದು ನಾಗೇಂದ್ರ ಪ್ರಸಾದ್ ಟ್ವೀಟ್ ಮಾಡಿದ್ದಾರೆ.

ಈ  ಗೀತೆಯನ್ನು ನೀವೂ ಕೇಳಿ...