Gowli Movie song : ಸಖತ್ ಸೌಂಡ್ ಮಾಡ್ತಿದೆ ಶ್ರೀನಗರ ಕಿಟ್ಟಿಯ 'ಗೌಳಿ' ಸಿನಿಮಾ ಲಿರಿಕಲ್ ಸಾಂಗ್!

ನೈಜ ಘಟನೆ ಕಥಾ ಹಂದರ ಹೊಂದಿರುವ ಗೌಳಿ ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆಯಾಗಿದ್ದು, ಎಲ್ಲೆಡೆ ಹವಾ ಎಬ್ಬಿಸಿದೆ.

Written by - K Karthik Rao | Last Updated : Jun 26, 2022, 08:59 PM IST
  • ಉದ್ದನೆ ಗಡ್ಡ, ರಗಡ್ ಲುಕ್ ಪೋಸ್ಟರ್ ಹಾಗೂ ಟೀಸರ್ ನಿಂದ ಸದ್ದು ಮಾಡಿದ್ದ ಚಿತ್ರ "ಗೌಳಿ"
  • ನೈಜ ಘಟನೆ ಕಥಾ ಹಂದರ ಹೊಂದಿರುವ ಗೌಳಿ ಚಿತ್ರ
  • ಗೌಳಿ ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆ
Gowli Movie song : ಸಖತ್ ಸೌಂಡ್ ಮಾಡ್ತಿದೆ ಶ್ರೀನಗರ ಕಿಟ್ಟಿಯ 'ಗೌಳಿ' ಸಿನಿಮಾ ಲಿರಿಕಲ್ ಸಾಂಗ್! title=

ಬೆಂಗಳೂರು : ಉದ್ದನೆ ಗಡ್ಡ, ರಗಡ್ ಲುಕ್ ಪೋಸ್ಟರ್ ಹಾಗೂ ಟೀಸರ್ ನಿಂದ ಸದ್ದು ಮಾಡಿದ್ದ ಚಿತ್ರ "ಗೌಳಿ". ನೈಜ ಘಟನೆ ಕಥಾ ಹಂದರ ಹೊಂದಿರುವ ಗೌಳಿ ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆಯಾಗಿದ್ದು, ಎಲ್ಲೆಡೆ ಹವ ಎಬ್ಬಿಸಿದೆ.

 'ಮಹಾ ರಕ್ಕಸ' ಎಂಬ ಸಾಹಿತ್ಯದಿಂದ ಪ್ರಾರಂಭವಾಗುವ ಹಾಡಿಗೆ ವಿ.ಎಲ್ ಆಶ್ರಿತ್ ಸಾಹಿತ್ಯ ಬರೆದಿದ್ದಾರೆ. ಶೇಶಗಿರಿ ಸಂಗೀತ ಸಂಯೋಜಿಸಿದ್ದು, ಅವರ ಧ್ವನಿಯಲ್ಲೆ ಹಾಡು ಮೂಡಿಬಂದಿರುವುದು ವಿಶೇಷವಾಗಿದೆ. ಇನ್ನು ಅನಿರುಧ್ ಶಾಸ್ತ್ರಿ, ಮಾಧ್ವೇಶ್ ಭಾರದ್ವಾಜ್ ಹಾಡಿಗೆ ಧ್ವನಿಗೂಡಿಸಿದ್ದಾರೆ. ಇನ್ನೂ ಈ ಹಾಡನ್ನ ಕರುನಾಡ ಚರ್ಕವರ್ತಿ ಶಿವರಾಜ್‌ಕುಮಾರ್ ಬಿಡುಗಡೆಮಾಡಿ ಶುಭಕೋರಿದ್ದಾರೆ.

ಇದನ್ನೂ ಓದಿ : ಕನ್ನಡಕ್ಕೆ ಎಂಟ್ರಿಕೊಟ್ಟ 'ವಿಶ್ವ ಸುಂದರಿ'..! ಯುವರಾಜ್‌ಗೆ ನಾಯಕಿ ಆಗ್ತಾರಾ ಮಾನುಷಿ ಚಿಲ್ಲರ್..?

ಶ್ರೀನಗರ ಕಿಟ್ಟಿ ಅವರು ನಾಯಕ ನಟನಾಗಿ ನಟಿಸಿದ್ದು, ಪಾವನಾ ಗೌಡ ಕಿಟ್ಟಿ ಅವರಿಗೆ ಜೋಡಿಯಾಗಿದ್ದಾರೆ. ಇನ್ನು‌ ಮುಖ್ಯ ಭೂಮಿಕೆಯಲ್ಲಿ ರಂಗಾಯಣ ರಘು, ಶರತ್ ಲೋಹಿತಾಶ್ವ ನಟಿಸಿದ್ದಾರೆ. ಸೂರ ಅವರ ನಿರ್ದೇಶನವಿದ್ದು, ಸಂದೀಪ್ ವಲ್ಲುರಿ ಛಾಯಾಗ್ರಹಣವಿದೆ. ರಘು ಸಿಂಗಂರವರ ಸೋಹನ್ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದ್ದು ಜುಲೈ 30ಕ್ಕೆ ತೆರೆ ಮೇಲೆ ಅಪ್ಪಳಿಸಲಿದೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News