ಪ್ರಭಾಸ್‌- ಕೃತಿ ಮದುವೆ : ಅನುಷ್ಕಾ ಶೆಟ್ಟಿ ಲವ್‌ ಮ್ಯಾಟರ್‌ ಸುಳ್ಳಾ.. ಏನಿದರ ಮರ್ಮ..!

ಭಾರತೀಯ ಸ್ಟಾರ್‌ ನಟ ಪ್ರಭಾಸ್ ಮತ್ತು ಕೃತಿ ಸನೋನ್ ಕುರಿತ ಮ್ಯಾಟರ್‌ ಒಂದು ಇಂಟರ್‌ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಅಲ್ಲದೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಈ ಕುರಿತ ಸುದ್ದಿ ಹರಿದಾಡುತ್ತಿವೆ. ಕೃತಿ ಪ್ರಭಾಸ್‌ ಅವರನ್ನು ಮದುವೆಯಾಗ್ತಾರೆ ಎಂದು ಹೇಳಲಾಗುತ್ತಿದೆ. ಇದನ್ನು ಕೇಳಿದ ಬಾಹುಬಲಿ ಫ್ಯಾನ್ಸ್‌ ರೊಚ್ಚಿಗೆದ್ದಿದ್ದಾರೆ. ಅಲ್ಲದೆ, ಪ್ರಭಾಸ್‌ ಅನುಷ್ಕಾ ಶೆಟ್ಟಿ ನಡುವೆ ಲವ್‌ ಇತ್ತು ಎಂದು ಹೇಳಲಾಗುತ್ತಿದ್ದ ಮಾತು ಸುಳ್ಳಾ..? ಎಂದು ಚರ್ಚೆ ನಡೆಸುತ್ತಿದ್ದಾರೆ.

Written by - Krishna N K | Last Updated : Nov 27, 2022, 11:38 AM IST
  • ಸ್ಟಾರ್‌ ನಟ ಪ್ರಭಾಸ್ ಮತ್ತು ಕೃತಿ ಸನೋನ್ ಕುರಿತ ಮ್ಯಾಟರ್‌ ಒಂದು ಇಂಟರ್‌ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ
  • ಕೃತಿ ಪ್ರಭಾಸ್‌ ಅವರನ್ನು ಮದುವೆಯಾಗ್ತಾರೆ ಎಂದು ಹೇಳಲಾಗುತ್ತಿದೆ
  • ಪ್ರಭಾಸ್‌, ಅನುಷ್ಕಾ ಶೆಟ್ಟಿ ನಡುವೆ ಲವ್‌ ಇತ್ತು ಎಂಬ ಮಾತು ಸುಳ್ಳಾ ಎಂದು ನೆಟ್ಟಿಗರು ಚರ್ಚೆ ನಡೆಸುತ್ತಿದ್ದಾರೆ
 ಪ್ರಭಾಸ್‌- ಕೃತಿ ಮದುವೆ : ಅನುಷ್ಕಾ ಶೆಟ್ಟಿ ಲವ್‌ ಮ್ಯಾಟರ್‌ ಸುಳ್ಳಾ.. ಏನಿದರ ಮರ್ಮ..! title=

Kriti sanon Prabhas Marriage : ಭಾರತೀಯ ಸ್ಟಾರ್‌ ನಟ ಪ್ರಭಾಸ್ ಮತ್ತು ಕೃತಿ ಸನೋನ್ ಕುರಿತ ಮ್ಯಾಟರ್‌ ಒಂದು ಇಂಟರ್‌ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಅಲ್ಲದೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಈ ಕುರಿತ ಸುದ್ದಿ ಹರಿದಾಡುತ್ತಿವೆ. ಕೃತಿ ಪ್ರಭಾಸ್‌ ಅವರನ್ನು ಮದುವೆಯಾಗ್ತಾರೆ ಎಂದು ಹೇಳಲಾಗುತ್ತಿದೆ. ಇದನ್ನು ಕೇಳಿದ ಬಾಹುಬಲಿ ಫ್ಯಾನ್ಸ್‌ ರೊಚ್ಚಿಗೆದ್ದಿದ್ದಾರೆ. ಅಲ್ಲದೆ, ಪ್ರಭಾಸ್‌ ಅನುಷ್ಕಾ ಶೆಟ್ಟಿ ನಡುವೆ ಲವ್‌ ಇತ್ತು ಎಂದು ಹೇಳಲಾಗುತ್ತಿದ್ದ ಮಾತು ಸುಳ್ಳಾ..? ಎಂದು ಚರ್ಚೆ ನಡೆಸುತ್ತಿದ್ದಾರೆ.

ಖ್ಯಾತ ನಟಿ ಅನುಷ್ಕಾ ಮತ್ತು ಪ್ರಭಾಸ್ ಮಧ್ಯ ಪ್ರೀತಿ ಇದೆ ಎಂಬ ಮಾತು ಹೆಚ್ಚಾಗಿ ಕೇಳಿ ಬರುತ್ತಿತ್ತು. ಇದೀಗ ರಾಷ್ಟ್ರೀಯ ಮಾಧ್ಯಮಗಳಲ್ಲಿ ಆದಿಪುರುಷ ಎಫೆಕ್ಟ್‌ನಿಂದ ಪ್ರಭಾಸ್ ಮತ್ತು ಕೃತಿ ಸನೋನ್ ಬಗ್ಗೆ ವದಂತಿಯ ಸುದ್ದಿಗಳು ಹರಿದಾಡುತ್ತಿವೆ. ಅಲ್ಲದೆ, ಇವುಗಳಿಗೆ ಪೂರಕ ಎಂಬಂತೆ ಕೃತಿ ಸನೋನ್ ಪ್ರಭಾಸ್ ಬಗ್ಗೆ ಶೂಟಿಂಗ್‌ ಸಮಯದಲ್ಲಿ ವಿಶೇಷ ಆಸಕ್ತಿ ತೋರುತ್ತಿದ್ದರು ಎಂದು ಹೇಳಾಗುತ್ತಿದೆ. ಅಲ್ಲದೆ, ಒಮ್ಮೆ ಕರಣ್ ಜೋಹರ್ ಶೋ ಕಾಫಿ ವಿತ್ ಕರಣ್‌ನಲ್ಲಿ ಪ್ರಭಾಸ್‌ಗೆ ಕೃತಿ ಕರೆ ಮಾಡಿದ್ದರು.

ಇದನ್ನೂ ಓದಿ: ಅಜಯ್ ರಾವ್ ನೂತನ ಸಿನಿಮಾಗೆ ‘ಯುದ್ಧಕಾಂಡ’ ಟೈಟಲ್ - ಮೊದಲ ಬಾರಿ ಲಾಯರ್ ಪಾತ್ರದಲ್ಲಿ ಅಜಯ್ ರಾವ್

ಕರಣ್‌ ಕೃತಿಗೆ ನೀವು ಕರೆಮಾಡಿದ್ರೆ ಯಾರು ಬೇಗ ಎತ್ತುತ್ತಾರೆ ಎಂದು ಕೇಳಿದ್ದರು. ಆಗ ಕೃತಿ ಪ್ರಭಾಸ್‌ಗೆ ಕರೆ ಮಾಡಿದ್ದಾಳೆ. ಅದೂ ಅಲ್ಲದೆ.. ಆದಿಪುರುಷ ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಇವರಿಬ್ಬರ ಜೋಡಿ ಎಲ್ಲರನ್ನೂ ಇಂಪ್ರೆಸ್ ಮಾಡಿತ್ತು. ಮೊಣಕಾಲು ಶಸ್ತ್ರಚಿಕಿತ್ಸೆಯಿಂದ ಪ್ರಭಾಸ್‌ಗೆ ನಿಲ್ಲಲು ಮತ್ತು ನಡೆಯಲು ಸಾಧ್ಯವಾಗದ ಕಾರಣ ಕೃತಿ ಸನೋನ್ ಕೈ ಹಿಡಿದು ನಡೆಸಿದ್ದರು. ಅಲ್ಲದೆ, ಪ್ರಭಾಸ್ ಬೆವರುತ್ತಿರುವಾಗ ಒರೆಸುವ ಮೂಲಕ ಪ್ರೀತಿ ತೋರಿದ್ದರು. 

ಹಾಗಾಗಿ ಎಲ್ಲರ ಕಣ್ಣು ಪ್ರಭಾಸ್ ಮತ್ತು ಕೃತಿ ಸನೋನ್ ಜೋಡಿಯ ಮೇಲೆ ಬಿದ್ದಿತ್ತು. ಅಲ್ಲದೆ, ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಪ್ರಸ್ತುತ, ಕೃತಿ ಸನೋನ್ ಭೇದಿಯಾ ಸಿನಿಮಾದಲ್ಲಿ ನಡೆಸಿದ್ದಾರೆ. ಭೇದಿಯಾ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ವರುಣ್ ಧವನ್ ಮತ್ತು ಕೃತಿ ಜೋಡಿಯ ಭೇದಿಯಾಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ವಿಶೇಷ ಅಂದ್ರೆ ಈ ಸಿನಿಮಾದ ಪ್ರಚಾರದ ಸಮಯದಲ್ಲೂ ಪ್ರಭಾಸ್ ಹೆಸರು ಕೇಳಿ ಬಂದಿತ್ತು.

ಇದನ್ನೂ ಓದಿ: ಸಪ್ತಮಿಗೌಡ ಹೊಸ ಸಿನಮಾ ಅನೌನ್ಸ್‌ : ʼಕಾಳಿʼಯಲ್ಲಿ ಲೀಲಾ ನಟನೆ.. ಹೀರೋ ಯಾರು..!

ಇದೀಗ ಮಾಧ್ಯಮವೊಂದು ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಕೃತಿ ಸನೋನ್, ಪ್ರಭಾಸ್ ಅವರನ್ನು ಮದುವೆಯಾಗುವುದಾಗಿ ಹೇಳಿದ್ದಾರೆ. ನಿರೂಪಕಿ ಕೃತಿಗೆ ಡೇಟಿಂಗ್‌, ಮದುವೆ, ಫ್ಲರ್ಟ್‌ ಯಾರ್‌ ಜೊತೆ ಮಾಡ್ತೀರಾ ಅಂತ ಟೈಗರ್ ಶ್ರಾಫ್, ಪ್ರಭಾಸ್, ಕಾರ್ತಿಕ್ ಆರ್ಯನ್ ಹೆಸರನ್ನು ನೀಡಿದ್ದರು. ಆಗ ಕೃತಿ ಕಾರ್ತಿಕ್ ಫ್ಲರ್ಟ್ ಮಾಡಿದರೆ.. ಟೈಗರ್ ಜೊತೆ ಡೇಟ್ಸ್.. ಪ್ರಭಾಸ್ ಜೊತೆ ಮದುವೆ ಆಗ್ತಿನಿ ಎಂದು ಕೃತಿ ಸನನ್ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News