Harsh Goenka Viral Tweet: 'ನನ್ನ ಗಂಡನ Work From Home' ಸ್ಥಗಿತಗೊಳಿಸಿ, Bossಗೆ ಪತ್ರ ಬರೆದ ಪತ್ನಿ

Harsh Goenka Viral Tweet - ಕೊರೊನಾ ವೈರಸ್ (Corona Virus) ಜನರ ಜೀವನ ಶೈಲಿಯನ್ನು ಮಾತ್ರ ಬದಲಾಯಿಸದೆ ಕೆಲಸ ಮಾಡುವ ವಿಧಾನವನ್ನೂ ಬದಲಿಸಿದೆ. ಕರೋನಾ ಪ್ರಾರಂಭವಾದಾಗಿನಿಂದ, ಜನರು ಮನೆಯಿಂದ ಕಚೇರಿ ಕೆಲಸ ಮಾಡುತ್ತಿದ್ದಾರೆ, ಇದನ್ನು 'Work From Home ಅಥವಾ WHF' ಎಂದು ಕರೆಯಲಾಗುತ್ತದೆ. 

Written by - Nitin Tabib | Last Updated : Sep 12, 2021, 07:47 PM IST
  • ನನ್ನ ಗಂಡನ ವರ್ಕ್ ಫ್ರಮ್ ಹೋಂ ಸ್ಥಗಿತಗೊಳಿಸಿ.
  • ಪತಿಯ ಬಾಸ್ ಗೆ ಪತ್ನಿ ಬರೆದ ಪತ್ರ ಇದೀಗ ವೈರಲ್.
  • ನನ್ನ ಮೇಲೆ ಈಗಾಗಲೇ ಎರಡು ಮಕ್ಕಳ ಜವಾಬ್ದಾರಿ ಇದೆ ಎಂದ ಪತ್ನಿ.
Harsh Goenka Viral Tweet: 'ನನ್ನ ಗಂಡನ Work From Home' ಸ್ಥಗಿತಗೊಳಿಸಿ, Bossಗೆ ಪತ್ರ ಬರೆದ ಪತ್ನಿ title=
Harsh Goenka Viral Tweet (File Photo)

Harsh Goenka Viral Tweet - ಕೊರೊನಾ ವೈರಸ್ (Corona Virus) ಜನರ ಜೀವನ ಶೈಲಿಯನ್ನು ಮಾತ್ರ ಬದಲಾಯಿಸದೆ ಕೆಲಸ ಮಾಡುವ ವಿಧಾನವನ್ನೂ ಬದಲಿಸಿದೆ. ಕರೋನಾ ಪ್ರಾರಂಭವಾದಾಗಿನಿಂದ, ಜನರು ಮನೆಯಿಂದ ಕಚೇರಿ ಕೆಲಸ ಮಾಡುತ್ತಿದ್ದಾರೆ, ಇದನ್ನು 'Work From Home ಅಥವಾ WHF' ಎಂದು ಕರೆಯಲಾಗುತ್ತದೆ. ಇತ್ತೀಚೆಗೆ, ಉದ್ಯಮಿ ಹರ್ಷ ಗೋಯೆಂಕಾ (Harsh Goenka) ಸಾಮಾಜಿಕ ಮಾಧ್ಯಮದಲ್ಲಿ (Social Media) ಒಂದು ಆಸಕ್ತಿಕರ ಪತ್ರವನ್ನು ಹಂಚಿಕೊಂಡಿದ್ದಾರೆ, ಆ ಪತ್ರವನ್ನು ಕಂಪನಿಯೊಂದರಲ್ಲಿ ಕೆಲಸ ಮಾಡುವ ಉದ್ಯೋಗಿಯ ಪತ್ನಿ ಕಳುಹಿಸಿದ್ದಾರೆ. ಇದರಲ್ಲಿ, ಉದ್ಯೋಗಿಯ ಪತ್ನಿ ತನ್ನ ಗಂಡನ ಮನೆಯಿಂದ ಕೆಲಸ ಸ್ಥಗಿತಗೊಳಿಸಬೆಕ್ ಮತ್ತು ಕಚೇರಿಯಿಂದ ಕೆಲಸ ಆರಂಭಿಸಬೇಕು ಎಂದು ಕೋರಿದ್ದಾರೆ. ಇದಕ್ಕಾಗಿ ಉದ್ಯೋಗಿಯ ಪತ್ನಿ ಹಲವು ಕಾರಣಗಳನ್ನು ನೀಡಿದ್ದಾಳೆ.

ಹರ್ಷ ಗೋಯೆಂಕಾ (Harsh Goenka Viral Tweet) ಉದ್ಯೋಗಿಯ ಪತ್ನಿ ಬರೆದ ಪತ್ರವನ್ನು (Employee Viral Letter To Husband's Boss) ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ, 'ಪ್ರಿಯ ಸರ್, ನಾನು ನಿಮ್ಮ ಉದ್ಯೋಗಿ ಮನೋಜ್ ಅವರ ಪತ್ನಿ ಎಂದು ಉದ್ಯೋಗಿಯ ಪತ್ನಿ ಬರೆದಿದ್ದಾರೆ. ನಾನು ನಿಮಗೆ ಮನವಿ ಮಾಡುತ್ತೇನೆ ದಯವಿಟ್ಟು ಈಗ ಕಚೇರಿಯಿಂದ ಕೆಲಸ ಆರಂಭಿಸಿ. ನನ್ನ ಪತಿ ಕರೋನಾ ಲಸಿಕೆಯ ಎರಡೂ ಪ್ರಮಾಣಗಳನ್ನು ತೆಗೆದುಕೊಂಡಿದ್ದಾರೆ ಮತ್ತು ಕರೋನಾ ಪ್ರೋಟೋಕಾಲ್ ಅನ್ನು ಸಂಪೂರ್ಣವಾಗಿ ನೋಡಿಕೊಳ್ಳುತ್ತಾರೆ. ಇನ್ನೂ ಸ್ವಲ್ಪ ಸಮಯ ಮನೆಯಿಂದ ಕೆಲಸ ಮುಂದುವರಿದರೆ ನಮ್ಮ ಮದುವೆ ಮುರಿದು ಬೀಳುವ ಸಾಧ್ಯತೆ ಇದೆ' ಎಂದು ಬರೆದಿದ್ದಾಳೆ.

ಮುಂದುವರೆದು ಬರೆದಿರುವ ಪತ್ನಿ, 'ನನ್ನ ಗಂಡ ದಿನದಲ್ಲಿ 10 ಬಾರಿ ಕಾಫಿ ಸೇವಿಸುತ್ತಾರೆ. ಬೇರೆ ಬೇರೆ ಕೊಠಡಿಗಳಿಗೆ ಹೋಗುತ್ತಾರೆ ಮತ್ತು ಎಲ್ಲವನ್ನು ಅಸ್ತವ್ಯಸ್ತ ಮಾಡುತ್ತಾರೆ. ಇದಲ್ಲದೆ ಸತತವಾಗಿ ಅವರು ತಿನ್ನಲು ಏನಾದರು ಕೇಳುತ್ತಾರೆ. ಕೆಲಸದ ಅವಧಿಯಲ್ಲಿ ಅವರು ಮಲಗುವುದನ್ನು ನಾನು ನೋಡಿದ್ದೇನೆ. ನನ್ನ ಬಳಿ ಈಗಾಗಲೇ ಎರಡು ಮಕ್ಕಳಿವೆ. ನಾನು ನನ್ನ ಮಕ್ಕಳ ಕಾಳಜಿ ವಹಿಸಬೇಕು. ನನಗೆ ಸಹಾಯ ಮಾಡಿ, ನಮಸ್ಕಾರ' ಎಂದು ಹೇಳಿದ್ದಾರೆ.

ಇದನ್ನೂ ಓದಿ-Funny Video : ಡಾನ್ಸ್ ಮೂಲಕ ಮದುವೆ ವೇದಿಕೆಗೆ ಎಂಟ್ರಿ ಕೊಟ್ಟ ಜೋಡಿ, ಅತೀ ಉತ್ಸಾಹದಿಂದ ಕುಣಿಯುತ್ತಿದ್ದ ವೇಳೆ ಆಗಿದ್ದು....

ಈ ಸ್ವಾರಸ್ಯಕರ ಪತ್ರವನ್ನು ಹಂಚಿಕೊಂಡ ಹರ್ಷ ಗೋಯೆಂಕಾ (Harsh Goenk Twitter), 'ಇದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ತಮಗೆ ತಿಳಿದಿಲ್ಲ ಎಂದಿದ್ದಾರೆ. ಆದರೆ ಅವರು ಹಂಚಿಕೊಂಡ ಈ ಪತ್ರ ಇದೀಗ ಭಾರಿ ವೈರಲ್ ಆಗಿದೆ. ಹರ್ಷ ಗೋಯೆಂಕಾ ಅವರ ಉದ್ಯೋಗಿಯ ಹೆಂಡತಿಯ ಕೈಬರಹವನ್ನು ನೋಡಿ, ಬಳಕೆದಾರರು ಗೊಂದಲಕ್ಕೊಳಗಾಗಿದ್ದಾರೆ.  ಅನೇಕ ಬಳಕೆದಾರರು ಇದನ್ನು ತಮ್ಮೊಂದಿಗೆ ಸಂಬಂಧ ಕಲ್ಪಿಸಿ ನೋಡುತ್ತಿದ್ದಾರೆ. ನಿಜಾರ್ಥದಲ್ಲಿ ಕೆಲವರಿಗೆ ಇದು ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಒಬ್ಬ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ-Viral Video: ಪೊದೆಯಿಂದ ಜಿಗಿದ ಹಾವು; ಮಹಿಳೆಗೆ ಏನಾಯ್ತು ನೋಡಿ..!

ಇದಲ್ಲದೆ ಈ ಪತ್ರದ ವಿಷಯದಲ್ಲಿ ಜನರು ಪರಸ್ಪರ ತದ್ವಿರುದ್ಧ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಕೆಲ ಜನರು ಮನೋಜ್ ಅವರನ್ನು ಬೆಂಬಲಿಸಿ ಹೇಳಿಕೆಗಳನ್ನು ನೀಡುತ್ತಿದ್ದರೆ, ಕೆಲವರು ಅವರ ಪತ್ನಿಯನ್ನು ಬೆಂಬಲಿಸಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಲೆಳೆಯುವ ರೀತಿಯಲ್ಲಿ ಪ್ರತಿಕ್ರಿಯೆ ನೀಡಿರುವ ಒಬ್ಬ ಬಳಕೆದಾರ, ಮನೋಜ್ ಇಷ್ಟೊಂದು ಕಾಫಿ ಕುದಿಯುತ್ತಿರುವ ಕಾರಣ ಅವರ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದೆಯಾ ಎಂಬುದನ್ನು ಪರೀಕ್ಷಿಸಿ ಎಂದು ಹೇಳಿದ್ದಾನೆ. ಪತ್ನಿಯ ಪತ್ರ ನಿಮಗಾಗಿ ಇಲ್ಲಿದೆ.

ಇದನ್ನೂ ಓದಿ-Viral Video: ಆರ್‌ಜೆಡಿ ನಾಯಕ ತೇಜಶ್ವಿ ಯಾದವ್ ಹಣ ಹಂಚುತ್ತಿರುವ ವಿಡಿಯೋ ವೈರಲ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News