ನಟ ಕಿಚ್ಚ ಸುದೀಪ್‌ಗೆ ಸಲ್ಮಾನ್‌ ಖಾನ್‌ ಸಾಥ್..! ಹೇಗಿದೆ ಗೊತ್ತಾ 'ವಿಕ್ರಾಂತ್‌ ರೋಣ' ಹವಾ..?

Written by - Malathesha M | Last Updated : Apr 1, 2022, 03:49 PM IST
  • ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾ ದೊಡ್ಡ ಹವಾ ಎಬ್ಬಿಸಲು ಸಜ್ಜಾಗಿದೆ.
  • 'ಕೆಜಿಎಫ್‌'ನ ನರಾಚಿಯಲ್ಲಿ ದೊಡ್ಡ ಯುದ್ಧ ಸಂಭವಿಸಿದ ಬಳಿಕ 'ವಿಕ್ರಾಂತ್‌ ರೋಣ' ಘರ್ಜಿಸೋದು ಗ್ಯಾರಂಟಿ.
ನಟ ಕಿಚ್ಚ ಸುದೀಪ್‌ಗೆ ಸಲ್ಮಾನ್‌ ಖಾನ್‌ ಸಾಥ್..! ಹೇಗಿದೆ ಗೊತ್ತಾ 'ವಿಕ್ರಾಂತ್‌ ರೋಣ' ಹವಾ..? title=
Photo Courtesy: Twitter

ಬಾಲಿವುಡ್‌ ಬಿಗ್‌ಸ್ಟಾರ್‌ ಸಲ್ಮಾನ್‌ ಖಾನ್‌ ಹಾಗೂ ನಟ ಕಿಚ್ಚ ಸುದೀಪ್‌ ನಡುವೆ ಅವಿನಾಭಾವ ಸಂಬಂಧವಿದೆ. ಸಲ್ಲು ಜೊತೆ ಹಲವು ಸಿನಿಮಾಗಳಲ್ಲಿ ಕಿಚ್ಚ ಸುದೀಪ್‌ ಕಾಣಿಸಿಕೊಂಡಿದ್ದಾರೆ.ಹೀಗೆ ಇಬ್ಬರ ಸ್ನೇಹದ ಹೆಗ್ಗುರುತಾಗಿ ವಿಕ್ರಾಂತ್‌ ರೋಣ ಟೀಸರ್‌ ರಿಲೀಸ್‌ ಇವೆಂಟ್‌ ರಾರಾಜಿಸೋದು ಪಕ್ಕಾ ಆಗಿದೆ.

ಎಲ್ಲೆಲ್ಲೂ 'ವಿಕ್ರಾಂತ್‌ ರೋಣ (Vikrant Rona) 'ನ ಅಬ್ಬರ ಜೋರಾಗಿದೆ. ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾ ದೊಡ್ಡ ಹವಾ ಎಬ್ಬಿಸಲು ಸಜ್ಜಾಗಿದೆ.'ಕೆಜಿಎಫ್‌'ನ ನರಾಚಿಯಲ್ಲಿ ದೊಡ್ಡ ಯುದ್ಧ ಸಂಭವಿಸಿದ ಬಳಿಕ 'ವಿಕ್ರಾಂತ್‌ ರೋಣ' ಘರ್ಜಿಸೋದು ಗ್ಯಾರಂಟಿ.

ಇದನ್ನೂ ಓದಿ: Coffee: ಅತಿಯಾದ ಕಾಫಿ ಸೇವನೆಯಿಂದ ಏನಾಗುತ್ತದೆ ಗೊತ್ತಾ..?

ರಾರಾಜಿಸುತ್ತಿದೆ ಕನ್ನಡ..! 

ಹೀಗೆ ಕನ್ನಡ ಚಿತ್ರರಂಗವನ್ನು ಇಡೀ ಜಗತ್ತೇ ತಿರುಗಿ ನೋಡುವಂತೆ ಮಾಡುತ್ತಿವೆ ಪ್ಯಾನ್‌ ಇಂಡಿಯಾ ಸಿನಿಮಾಗಳು.ಈ ಹೊತ್ತಲ್ಲೇ ಭಾರತ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್‌ಗಳೇ ಕನ್ನಡದ ಪ್ಯಾನ್‌ ಇಂಡಿಯಾ ಸಿನಿಮಾಗಳಿಗೆ ಸಾಥ್‌ ನೀಡುತ್ತಿದ್ದಾರೆ. ಇದೀಗ ಬಾಲಿವುಡ್‌ ಬಿಗ್‌ ಸ್ಟಾರ್‌ ಸಲ್ಮಾನ್‌ ಖಾನ್‌ (Salman Khan)  ಕೂಡ ಕನ್ನಡ ಸಿನಿಮಾಗೆ ಸಾಥ್‌ ನೀಡುತ್ತಿದ್ದಾರೆ.

ಇದನ್ನೂ ಓದಿ: Harmful Fruit Combination : ಬಾಳೆ ಹಣ್ಣಿನ ಜೊತೆ ತಪ್ಪಿಯೂ ಈ ಹಣ್ಣನ್ನು ಸೇವಿಸಬೇಡಿ..! ಎದುರಿಸಬೇಕಾಗುತ್ತದೆ ಆರೋಗ್ಯ ಸಮಸ್ಯೆ

ಏಪ್ರಿಲ್ 2ರ ಬೆಳಗ್ಗೆ 9.55ಕ್ಕೆ 'ವಿಕ್ರಾಂತ್‌ ರೋಣ' ಸಿನಿಮಾ ಟೀಸರ್ ರಿಲೀಸ್‌ ಆಗಲಿದೆ.‌ಈ ಕಾರ್ಯಕ್ರಮದಲ್ಲಿ ಹಲವು ಭಾಷೆಯಲ್ಲಿ 'ವಿಕ್ರಾಂತ್‌ ರೋಣ' ಟೀಸರ್‌ ರಿಲೀಸ್‌ ಆಗಲಿದೆ.ಟೀಸರ್‌ ರಿಲೀಸ್‌ಗೆ ಮಲಯಾಳಂ ಚಿತ್ರರಂಗದ ದಿಗ್ಗಜ ನಟ ಮೋಹನ್ ಲಾಲ್ & ಟಾಲಿವುಡ್ ‘ಮೆಗಾಸ್ಟಾರ್’ ಚಿರಂಜೀವಿ ಸಾಥ್‌ ನೀಡಲಿದ್ದಾರೆ. ಮತ್ತೊಂದು ಕಡೆ ತಮಿಳು ಭಾಷೆಯ 'ವಿಕ್ರಾಂತ್‌ ರೋಣ' ಟೀಸರ್‌ ರಿಲೀಸ್‌ಗೆ ನಟ ಸಿಂಬು ಸಾಥ್‌ ನೀಡಲಿದ್ದಾರೆ. ಇದರ ಜೊತೆಗೆ ಹೊಸ ಅಪ್‌ಡೇಟ್‌ ಏನಂದ್ರೆ  'ವಿಕ್ರಾಂತ್‌ ರೋಣ' ಹಿಂದಿ ಟೀಸರ್‌ ಬಿಡುಗಡೆಗೆ ನಟ ಸಲ್ಮಾನ್‌ ಖಾನ್‌ ಸಾಥ್‌ ಕೊಡಲಿದ್ದಾರಂತೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News