Kantara star cast fees: ಕಾಂತಾರ ಈ ವರ್ಷದ ದೊಡ್ಡ ಬ್ಲಾಕ್ಬಸ್ಟರ್ಗಳಲ್ಲಿ ಒಂದಾಗಿದೆ. ಇದರಲ್ಲಿ ರಿಷಬ್ ಶೆಟ್ಟಿ ಅವರು ಇತರ ಜನಪ್ರಿಯ ತಾರಾಗಣದ ಜೊತೆ ನಾಯಕರಾಗಿ ನಟಿಸಿದ್ದಾರೆ. ಕಾಂತಾರವು ಪಂಜುರ್ಲಿ ದೈವದ ಕುರಿತಾದ ಸಿನಿಮಾ. ಕಂಬಳ ಚಾಂಪಿಯನ್ನ ಕಥೆಯನ್ನು ಚಿತ್ರ ಹೇಳುತ್ತದೆ. ಯಶ್ ಅಭಿನಯದ ಕೆಜಿಎಫ್ ಚಿತ್ರದ ಯಶಸ್ಸಿಗೆ ಹೆಸರಾದ ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಆಕ್ಷನ್ ಥ್ರಿಲ್ಲರ್ ಚಲನಚಿತ್ರವು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಹಿಟ್ ಆಯಿತು ಮತ್ತು ಪ್ಯಾನ್-ಇಂಡಿಯಾ ಮಟ್ಟದಲ್ಲಿ ಯಶಸ್ಸನ್ನು ಪಡೆಯಿತು.
ಕಾಂತಾರ ಚಿತ್ರ ಬಿಡುಗಡೆಯಾದ ಮೇಲೆ ವಿಶ್ವಾದ್ಯಂತ 400 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕಾಂತಾರವು ಬಾಕ್ಸಾಫೀಸ್ನಲ್ಲಿ ಈ ದೊಡ್ಡ ಕಲೆಕ್ಷನ್ ಮಾಡಿದ ವರ್ಷದ ಎರಡನೇ ಕನ್ನಡ ಚಲನಚಿತ್ರವಾಗಿದೆ. ಕನ್ನಡ ಭಾಷೆಯಲ್ಲಿ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಖ್ಯಾತಿ ಕಾಂತಾರಕ್ಕೆ ಸಲ್ಲುತ್ತದೆ.
ಇದನ್ನೂ ಓದಿ : Bigg Boss : ಪುತ್ರಿ ಆಸ್ಪತ್ರೆಗೆ ದಾಖಲು.. ಬಿಗ್ಬಾಸ್ ಮನೆಯಿಂದ ಹೊರ ನಡೆದ ಅರುಣ್ ಸಾಗರ್
ರಿಷಬ್ ಶೆಟ್ಟಿ ನಾಯಕ ನಟನಾಗಿ ಮಾತ್ರವಲ್ಲದೆ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. tollywood.net ನಲ್ಲಿ ವರದಿಯ ಪ್ರಕಾರ, ರಿಷಬ್ ಶೆಟ್ಟಿ ಚಿತ್ರಕ್ಕಾಗಿ 4 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ. ಬ್ಲಾಕ್ ಬಸ್ಟರ್ ಸಿನಿಮಾ ಕಾಂತಾರದಲ್ಲಿ ಸುಧಾಕರ ಪಾತ್ರದಲ್ಲಿ ನಟ ಪ್ರಮೋದ್ ಶೆಟ್ಟಿ ನಟಿಸಿದ್ದಾರೆ. ಸಿನಿಮಾದಲ್ಲಿ ನಟಿಸಿದ್ದಕ್ಕೆ ಅವರು 60 ಲಕ್ಷ ರೂಪಾಯಿ ಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ.
ಕಾಂತಾರ ಚಿತ್ರದಲ್ಲಿ ಉಪ ವಲಯ ಅರಣ್ಯಾಧಿಕಾರಿ ಮುರಳೀಧರ್ ಪಾತ್ರವನ್ನು ಕಿಶೋರ್ ನಿರ್ವಹಿಸಿದ್ದಾರೆ. tollywood.net ಪ್ರಕಾರ, ಅವರು ಚಿತ್ರಕ್ಕಾಗಿ 1 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದಿದ್ದಾರಂತೆ. ಕಾಂತಾರ ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆ ನಾಯಕಿಯಾಗಿ ನಟಿಸಿದ ಸಪ್ತಮಿ ಗೌಡ ಅವರು ಲೀಲಾ ಪಾತ್ರಕ್ಕಾಗಿ 1 ರಿಂದ 1.25 ಕೋಟಿ ರೂಪಾಯಿಗಳ ಸಂಭಾವನೆಯನ್ನು ಪ ಪಡೆದಿದ್ದಾರೆ ಎನ್ನಲಾಗಿದೆ. ಇನ್ನೂ ನಟ ಅಚ್ಯುತ್ ಕುಮಾರ್ ಅವರು ದೇವೇಂದ್ರ ಸುತ್ತೂರು ಪಾತ್ರವನ್ನು ನಿರ್ವಹಿಸಿದ್ದಾರೆ, ಕಾಂತಾರ ಚಿತ್ರದಲ್ಲಿ ಅವರ ಈ ಪ್ರಮುಖ ಪಾತ್ರಕ್ಕಾಗಿ 40 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ : Yash: 1 ಗಂಟೆ ನಿಂತು 700 ಫ್ಯಾನ್ಸ್ ಜೊತೆ ಸೆಲ್ಫಿ! 'Real Super Star' ಎಂದ ನೆಟ್ಟಿಜನ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.