ನಟ ಅಲ್ಲು ಅರ್ಜುನ್‌ಗಿಂತ ʼಪುಷ್ಪಾ ಡೈರೆಕ್ಟರ್‌ʼ ಸಂಭಾವನೆ ಹೆಚ್ಚು..! ಎಷ್ಟು ಗೊತ್ತೆ..?

Director Sukumar remuneration : ಪುಷ್ಪ 2 ಚಿತ್ರಕ್ಕಾಗಿ ಭಾರತೀಯ ಸಿನಿ ಪ್ರೇಕ್ಷಕರು ಬಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಈ ಸಿನಿಮಾ ಸುಕುಮಾರ್ ನಿರ್ದೇಶನದ 'ಪುಷ್ಪ' ಚಿತ್ರದ ಮುಂದುವರಿದ ಭಾಗವಾಗಿದೆ. ಸದ್ಯ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ದಿನವೂ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿದೆ.

Written by - Krishna N K | Last Updated : Dec 1, 2023, 04:39 PM IST
  • ಪುಷ್ಪ 2 ಚಿತ್ರಕ್ಕಾಗಿ ಭಾರತೀಯ ಸಿನಿ ಪ್ರೇಕ್ಷಕರು ಕಾಯುತ್ತಿದ್ದಾರೆ.
  • ಸುಕುಮಾರ್ ನಿರ್ದೇಶನದ 'ಪುಷ್ಪ' ಚಿತ್ರದ ಮುಂದುವರಿದ ಭಾಗವಾಗಿದೆ.
  • ಡೈರೆಕ್ಟರ್‌ ಸುಕುಮಾರ್ ಹೆಚ್ಚಿನ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ನಟ ಅಲ್ಲು ಅರ್ಜುನ್‌ಗಿಂತ ʼಪುಷ್ಪಾ ಡೈರೆಕ್ಟರ್‌ʼ ಸಂಭಾವನೆ ಹೆಚ್ಚು..! ಎಷ್ಟು ಗೊತ್ತೆ..? title=

Pushpa 2 : ಪುಷ್ಪ 2 ಚಿತ್ರದ ಮೇಲೆ ಸಿನಿ ಪ್ರೇಕ್ಷಕರಿಗೆ ಭಾರಿ ನಿರೀಕ್ಷೆ ಇದೆ. ಇದಕ್ಕೆ ಕಾರಣ ಪುಷ್ಪಾ ಮೊದಲ ಭಾಗ ಹಿಟ್‌ ಆಗಿದ್ದು. ಇದೀಗ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಇದು ಮುಂದಿನ ವರ್ಷ ಅಂದ್ರೆ 2024 ಆಗಸ್ಟ್ 15 ರಂದು ವಿಶ್ವದಾದ್ಯಂತ ಪ್ರಮುಖ ಭಾರತೀಯ ಭಾಷೆಗಳಲ್ಲಿ ತೆರೆ ಕಾಣಲಿದೆ.

ಹ್ಯಾಟ್ರಿಕ್‌ ನಿರ್ದೇಶಕ ಸುಕುಮಾರ್ ಮಹತ್ವಾಕಾಂಕ್ಷೆಯಿಂದ ಈ ಸಿನಿಮಾ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್‌ ಜೊತೆಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಹಾಸ್ಯ ನಟ ಸುನೀಲ್ ಈ ಸಿನಿಮಾದಲ್ಲಿ ವಿಲನ್‌ ಪಾತ್ರದಲ್ಲಿ ಮಿಂಚಿದ್ದಾರೆ ಅಲ್ಲದೆ, ನಿರೂಪಕಿ ಅನಸೂಯಾ ಭಾರದ್ವಾಜ್, ಧನಂಜಯ, ಮಲಯಾಳಂ ನಟ ಫಹಾದ್ ಫಾಜಿಲ್, ರಾವ್ ರಮೇಶ್ ಮುಂತಾದವರು ಈ ಸಿನಿಮಾದಲ್ಲಿದ್ದಾರೆ.

ಇದನ್ನೂ ಓದಿ: ಕಾಂತಾರ ಪ್ರೀಕ್ವೆಲ್‌ಗೆ ರಿಷಬ್‌ ಶೆಟ್ಟಿ ಪಡೆಯುತ್ತಿರುವ ಭಾರೀ ಸಂಭಾವನೆ ಇದು.!

ಇನ್ನು ಇದೇ ವೇಳೆ ನಿರ್ದೇಶಕ ಸುಕುಮಾರ್ ಪುಪ್ಪಾ 2ಗಾಗಿ ಪಡೆದಿರುವ ಸಂಭಾವನೆ ಕುರಿತ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಲ್ಲು ಅರ್ಜುನ್ ಈ ಚಿತ್ರಕ್ಕೆ 300 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿತ್ತು. ಇದೀಗ ಸುಕುಮಾರ್ ಸಹ ಅದೇ ರೇಂಜ್​ನಲ್ಲಿ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಹೌದು.. ಪುಷ್ಪಾ ಚಿತ್ರಕ್ಕಾಗಿ ಸುಕುಮಾರ್ 100 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ. ಸಧ್ಯ ಭಾರೀ ನಿರೀಕ್ಷೆಗಳ ನಡುವೆ ರೆಡಿಯಾಗುತ್ತಿರುವ ಈ ಸಿನಿಮಾ 2024 ಆಗಸ್ಟ್ 15 ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಈಗಾಗಲೇ ಬಿಡುಗಡೆಯಾದ ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News