Sameer Wankhede ಆರ್ಯನ್ ಖಾನ್ ನನ್ನು ಸಿಲುಕಿಸಿದ್ದು ಹೇಗೆ, ಮಾಹಿತಿ ಬಹಿರಂಗಪಡಿಸಿದ ಸಿಬಿಐ, ಶಾರುಕ್ ನಿಂದ ಎಷ್ಟು ಹಣ ಕೇಳಲಾಗಿತ್ತು?

Aryan Khan Case: ಈ ಪ್ಲಾನ್  ಅಡಿಯಲ್ಲಿ, ಅಕ್ಟೋಬರ್ 2, 2021 ರಂದು, ಮುಂಬೈನಲ್ಲಿ ಆರ್ಯನ್ ಖಾನ್ ಮತ್ತು ಇತರ ಆರೋಪಿಗಳನ್ನು ಡ್ರಗ್ಸ್ ಬಳಸಿದ ಆರೋಪದ ಮೇಲೆ ಖಾಸಗಿ ಕ್ರೂಸ್ ನಿಂದ ಬಂಧಿಸಲಾಗಿತ್ತು. ಆದರೆ ಸಮೀರ್ ವಾಂಖೆಡೆ ಮತ್ತು ಇತರ ಆರೋಪಿಗಳು ತಮ್ಮ  ಪ್ಲಾನ್ ನಲ್ಲಿ ಯಶಸ್ವಿಯಾಗುವ ಮೊದಲೇ, ಈ ವಿಷಯ ಬೆಳಕಿಗೆ ಬಂದಿದೆ.  

Written by - Nitin Tabib | Last Updated : May 15, 2023, 06:38 PM IST

    ಎನ್‌ಸಿಬಿಯ ಎಸ್‌ಇಟಿ ತನಿಖೆಯ ನಂತರ, ಮೇ 11, 2023 ರಂದು, ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ, ವಿವಿ ಸಿಂಗ್, ಆಶಿಶ್ ರಂಜನ್, ಕೆಪಿ ಗೋಸ್ವಾಮಿ ಮತ್ತು

    ಸಾನ್ವಿಲ್ ಡಿಸೋಜಾ ವಿರುದ್ಧ ದೂರು ಸಲ್ಲಿಸಿದ್ದಾರೆ ಮತ್ತು ನಂತರ ಸಿಬಿಐ ಅದೇ ದಿನ ಸಮೀರ್ ವಿರುದ್ಧ ಪ್ರಕರಣ ದಾಖಲಿಸಿದೆ.

    ವಾಂಖೆಡೆ ಮತ್ತಿತರರು ಆರೋಪಿಗಳಿಗೆ ಸಂಬಂಧಿಸಿದ 29 ಸ್ಥಳಗಳಲ್ಲಿ ದಾಳಿ ನಡೆಸಿ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.

Sameer Wankhede ಆರ್ಯನ್ ಖಾನ್ ನನ್ನು ಸಿಲುಕಿಸಿದ್ದು ಹೇಗೆ, ಮಾಹಿತಿ ಬಹಿರಂಗಪಡಿಸಿದ ಸಿಬಿಐ, ಶಾರುಕ್ ನಿಂದ ಎಷ್ಟು ಹಣ ಕೇಳಲಾಗಿತ್ತು? title=
ಆರ್ಯನ್ ಖಾನ್ ಪ್ರಕರಣ

CBI SET Investigation: ಸಮೀರ್ ವಾಂಖೆಡೆ ಮತ್ತು ಇತರ ನಾಲ್ವರು ಆರೋಪಿಗಳ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ, ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರನ್ನು ಈ ವ್ಯಕ್ತಿಗಳು ಹೇಗೆ ಬಂಧಿಸಿದ್ದಾರೆ ಎಂಬುದನ್ನು ಸಿಬಿಐ ಬಹಿರಂಗಪಡಿಸಿದೆ. ಸಮೀರ್ ವಾಂಖೆಡೆ 2008 ರ ಬ್ಯಾಚ್‌ನ ಐಆರ್‌ಎಸ್ ಅಧಿಕಾರಿಯಾಗಿದ್ದು, ಎನ್‌ಸಿಬಿಯಲ್ಲಿ ಮುಂಬೈ ವಲಯದ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಸಮೀರ್ ತನ್ನ ಇಬ್ಬರು ಅಧಿಕಾರಿಗಳಾದ ವಿವಿ ಸಿಂಗ್ ಮತ್ತು ಆಶಿಶ್ ರಂಜನ್ ಅವರನ್ನು ಈ ಸಂಚಿನಲ್ಲಿ ಶಾಮೀಲುಗೊಳಿಸಿದ್ದಾರೆ, ಅವರು ಕೆಪಿ ಗೋಸ್ವಾಮಿ ಮತ್ತು ಸಾನ್ವಿಲ್ ಡಿಸೋಜಾ ಜೊತೆಗೆ ಸೇರಿ ಈ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಪ್ಲಾನ್ ಅಡಿಯಲ್ಲಿ, ಅಕ್ಟೋಬರ್ 2, 2021 ರಂದು, ಆರ್ಯನ್ ಖಾನ್ ಮತ್ತು ಇತರ ಆರೋಪಿಗಳನ್ನು ಡ್ರಗ್ಸ್ ಬಳಸಿದ ಆರೋಪದ ಮೇಲೆ ಖಾಸಗಿ ಕ್ರೂಸ್ ನಿಂದ ಬಂಧಿಸಲಾಗಿದೆ.  ಆದರೆ ಸಮೀರ್ ವಾಂಖೆಡೆ ಮತ್ತು ಇತರ ಆರೋಪಿಗಳು ತಮ್ಮ ಸಂಚಿನಲ್ಲಿ ಯಶಸ್ವಿಯಾಗುವ ಮೊದಲೇ, ಶಾರುಖ್ ಖಾನ್ ಅವರ ಪುತ್ರನೂ ಇದರಲ್ಲಿ ಭಾಗಿಯಾಗಿದ್ದರಿಂದ ಈ ಪ್ರಕರಣ ಬೆಳಕಿಗೆ ಬಂದಿತು. ವಿಷಯದ ಗಂಭೀರತೆಯನ್ನು ಅರಿತ ಹಿರಿಯ ಅಧಿಕಾರಿಗಳು ನಿಗಾ ವಹಿಸಲು ಆರಂಭಿಸಿದ್ದಾರೆ.

NCB ಯ DDG-NR/CVO ಅಂದರೆ ಡೆಪ್ಯುಟಿ ಡೈರೆಕ್ಟರ್ ಜನರಲ್ ನಾರ್ದರ್ನ್ ಝೋನಲ್ ಜ್ಞಾನೇಶ್ವರ್ ಸಿಂಗ್ ಅವರು 21 ಅಕ್ಟೋಬರ್ 2021 ರಂದು SET ಅಂದರೆ ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ ಮತ್ತು ಈ ತಂಡ ಸಮೀರ್ ವಾಂಖೆಡೆ ವಿರುದ್ಧದ ಆರೋಪಗಳನ್ನು ತನಿಖೆ ಮಾಡಿದೆ.

ಖಾಸಗಿ ಕ್ರೂಸ್ ಮೇಲೆ ದಾಳಿ 
ಮುಂಬೈ ವಲಯದ ನಿರ್ದೇಶಕರಾಗಿದ್ದ ಸಮೀರ್ ವಾಂಖೆಡೆ ಅವರು ತಮ್ಮ ತಂಡದ ಸದಸ್ಯರಾಗಿದ್ದ ವಿವಿ ಸಿಂಗ್, ಆಶಿಶ್ ರಂಜನ್ ಮತ್ತು ಇಬ್ಬರು ಖಾಸಗಿ ಸಾಕ್ಷಿಗಳಾದ ಕೆಪಿ ಗೋಸ್ವಾಮಿ ಮತ್ತು ಅವರ ಅಂಗರಕ್ಷಕ ಪ್ರಭಾಕರ್ ಸೈಲ್ ಖಾಸಗಿ ಕ್ರೂಸ್ ಮೇಲೆ ದಾಳಿ ನಡೆಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.

ತನಿಖೆಯ ವೇಳೆ, ಆರೋಪಿಗಳು 27 ಜನರನ್ನು ಬಂಧಿಸಿದ್ದಾರೆ, ಇದು ಐ-ನೋಟ್ ಅಂದರೆ ಮಾಹಿತಿ ಟಿಪ್ಪಣಿಯಿಂದ ತಿಳಿದುಬಂದಿದೆ, ಆದರೆ ನಂತರ ಅದನ್ನು ಬದಲಾಯಿಸಲಾಗಿದೆ ಮತ್ತು 10 ಹೆಸರುಗಳನ್ನು ಅದರಲ್ಲಿ ಸೇರಿಸಲಾಗಿದೆ, ಅಂದರೆ  ಕೆಲವು ಹೆಸರುಗಳನ್ನು ನಂತರ ಸೇರಿಸಲಾಗಿದೆ. ತನಿಖೆಯ ವೇಳೆ ಯಾರ ವಿರುದ್ಧ ಸಾಕ್ಷ್ಯಾಧಾರವಿದೆಯೋ ಅವರನ್ನು ಸ್ಥಳದಲ್ಲೇ ಬಿಡುಗಡೆ ಮಾಡಲಾಗಿದ್ದು, ಸಾಕ್ಷ್ಯಾಧಾರಗಳಿಲ್ಲದ ಆರ್ಯನ್ ಖಾನ್ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ.

ಅರ್ಬಾಜ್ ಮರ್ಚೆಂಟ್‌ಗೆ ಚರಸ್ ತಂದಿದ್ದ ಸಿದ್ಧಾರ್ಥ್ ಸಾಹ್ ನಿಂದ ಎನ್‌ಸಿಬಿ ಅಧಿಕಾರಿಗಳು ಚರಸ್ ಅನ್ನು ವಶಪಡಿಸಿಕೊಂಡಿದ್ದಾರೆ ಆದರೆ ಸಿದ್ಧಾರ್ಥ್ ಯಾವುದೇ ಕಾರಣ ಇಲ್ಲದೆ ಬಿಡುಗಡೆಯಾಗಿದ್ದಾನೆ. ಆದರೆ, ಅರ್ಬಾಜ್ ಮರ್ಚೆಂಟ್‌ಗಾಗಿ ಚರಸ್ ತಂದಿದ್ದಾಗಿ ಆತ ಸ್ಥಳದಲ್ಲೇ ಒಪ್ಪಿಕೊಂಡಿದ್ದಾನೆ.

ಕೆ.ಪಿ.ಗೋಸ್ವಾಮಿ ಆರ್ಯನ್ ಖಾನ್ ನನ್ನು ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ
ಈ ಸಂದರ್ಭದಲ್ಲಿ  ಸಮೀರ್ ವಾಂಖೆಡೆ ಅವರು ಆರ್ಯನ್ ಖಾನ್ ನನ್ನು ಕರೆದುಕೊಂಡು ಹೋಗಲು ಕೆಪಿ ಗೋಸ್ವಾಮಿಗೆ ಅನುಮತಿ ನೀಡಬೇಕು ಎಂದು ತಮ್ಮ ಸಹ ಅಧಿಕಾರಿ ವಿವಿ ಸಿಂಗ್ ಗೆ ಹೇಳಿದ್ದಾರೆ. ಇದರಿಂದ ಕೆ.ಪಿ ಗೋಸ್ವಾಮಿ ಎನ್‌ಸಿಬಿಯ ಅಧಿಕಾರಿ ಎಂಬಂತೆ ಬಿಂಬಿಸಲಾಗಿದೆ. ಕೆ.ಪಿ.ಗೋಸ್ವಾಮಿ ಅವರು ಆರ್ಯನ್ ಖಾನ್ ಅವರನ್ನು ಬಂಧಿಸಿ ತಮ್ಮ ಖಾಸಗಿ ಕಾರಿನಲ್ಲಿ ಎನ್‌ಸಿಬಿ ಕಚೇರಿಗೆ ಕರೆದೊಯ್ದಿದ್ದಲ್ಲದೆ, ಇತರ ಅಧಿಕಾರಿಗಳು ಸ್ಥಳದಲ್ಲಿರುವಾಲೇ ತಾನೇ ತನಿಖಾಧಿಕಾರಿಯಾಗಿರುವುದಾಗಿ ಬಿಂಬಿಸಿಕೊಂಡಿದ್ದಾರೆ. ಇದಲ್ಲದೇ ಕೇವಲ ಖಾಸಗಿ ಸಾಕ್ಷಿಯಾಗಿದ್ದ ಕೆಪಿ ಗೋಸ್ವಾಮಿಗೆ ಆರ್ಯನ್ ಖಾನ್ ಜೊತೆ ಇರಲು, ಸೆಲ್ಫಿ ಕ್ಲಿಕ್ಕಿಸಲು ಮತ್ತು ಅವರ ಧ್ವನಿಯಲ್ಲಿ ಸಂದೇಶಗಳನ್ನು ರೆಕಾರ್ಡ್ ಮಾಡಲು ಸಮೀರ್ ಅವಕಾಶ ಮಾಡಿಕೊಟ್ಟಿದ್ದಾರೆ. 

ಇದರ ನಂತರ ಕೆಪಿ ಗೋಸ್ವಾಮಿ ತನ್ನ ಪಾರ್ಟ್ನರ್  ಸಾನ್ವಿಲ್ ಡಿಸೋಜಾ ಅವರೊಂದಿಗೆ ಆರ್ಯನ್ ಖಾನ್ ನನ್ನು ರಕ್ಷಿಸಲು  ಶಾರುಖ್ ಖಾನ್ ಅವರಿಂದ 25 ಕೋಟಿಗೆ ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. 18 ಕೋಟಿಗೆ ಅಗ್ರಿಮೆಂಟ್ ನಿಗದಿಯಾಗಿದ್ದು, 50 ಲಕ್ಷ ರೂ.ಗಳನ್ನು ಮುಂಗಡವಾಗಿ ಪಾವತಿಸಲಾಗಿದೆ. ಆದರೆ ವಿಷಯ ಬೆಳಕಿಗೆ ಬಂದಾಗ ಮತ್ತು ವಿಷಯಗಳು ಕೈ ತಪ್ಪಲು ಪ್ರಾರಂಭಿಸಿದಾಗ, ಸ್ವಲ್ಪ ಹಣವನ್ನು ಹಿಂದಿರುಗಿಸಲಾಗಿದೆ. ವಂಚನೆಯ ಹಳೆಯ ಪ್ರಕರಣದಲ್ಲಿ ಪುಣೆ ಪೊಲೀಸರು 28 ಅಕ್ಟೋಬರ್ 2021 ರಂದು ಗೋಸ್ವಾಮಿಯನ್ನು ಬಂಧಿಸಿದ್ದರು.

ಈಗ, SET, ಸಮೀರ್ ವಾಂಖೆಡೆ ವಿರುದ್ಧ ಮತ್ತಷ್ಟು ತೀವ್ರ ತನಿಖೆ ಕೈಗೊಂಡಾಗ, ಅವರು ಹಲವು ಬಾರಿ ವಿದೇಶಿ ಪ್ರವಾಸಗಳಿಗೆ ಹೋಗಿದ್ದಾರೆ ಮತ್ತು ಸಾಕಷ್ಟು ಖರ್ಚು ಮಾಡಿದ್ದಾರೆ ಎಂಬುದು ತಿಳಿದುಬಂದಿದೆ, ಆದರೆ NCB ಅಥವಾ ಅದರ ಪೋಷಕ ಕೇಡರ್ ಅಂದರೆ IRS- C&CE (ಕಸ್ಟಮ್ ಮತ್ತು ಸೆಂಟ್ರಲ್ ಎಕ್ಸೈಸ್) ಇಲಾಖೆ ಬಳಿ ಅವರ  ಪ್ರವಾಸದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಸಮೀರ್ ವಿದೇಶಿ ಮತ್ತು ದುಬಾರಿ ವಾಚ್ ಗಳನ್ನು ಖರೀದಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿರುವುದು ತನಿಖೆಯಲ್ಲಿ  ಪತ್ತೆಯಾಗಿದ್ದು, ಅದರ ಮಾಹಿತಿ ಅವರು ನೀಡಿಲ್ಲ ಎನ್ನಲಾಗಿದೆ. 

ಇದನ್ನೂ ಓದಿ-Inflation: ಕಳೆದ ಮೂರು ವರ್ಷಗಳಲ್ಲಿಯೇ ಅತಿ ಕನಿಷ್ಠ ಮಟ್ಟಕ್ಕೆ ಜಾರಿಗೆ ಹಣದುಬ್ಬರ

ಆರ್ಯನ್ ಖಾನ್ ಸೇರಿದಂತೆ 6 ಮಂದಿ ವಿರುದ್ಧ ಚಾರ್ಜ್ ಶೀಟ್ ದಾಖಲಾಗಿಲ್ಲ
ಇಡೀ ವಿಷಯವನ್ನು ತನಿಖೆ ಮಾಡಿದ ನಂತರ, ಎನ್‌ಸಿಬಿ 2022 ರ ಮೇ 27 ರಂದು ಖಾಸಗಿ ಕ್ರೂಸ್‌ನಿಂದ ಬಂಧಿಸಲ್ಪಟ್ಟ 14 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ. ಆದರೆ ಆರ್ಯನ್ ಖಾನ್ ಸೇರಿದಂತೆ 6 ಜನರ ವಿರುದ್ಧ ಯಾವುದೇ ಸಾಕ್ಷಾಧಾರಗಳಿಲ್ಲದ ಕಾರಣ ಅವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿಲ್ಲ. ಕ್ರೂಸ್‌ನಲ್ಲಿ ದಾಳಿಯ ಸಮಯದಲ್ಲಿ ಹಾಜರಿದ್ದ ಕೆಪಿ ಸಿಂಗ್ ಅವರ ಅಂಗರಕ್ಷಕ ಪ್ರಭಾಕರ್ ಸೈಲ್ ಅವರು ಚಾರ್ಜ್‌ಶೀಟ್ ದಾಖಲಾಗುವ ಒಂದು ತಿಂಗಳ ಮೊದಲು ಏಪ್ರಿಲ್ 2022 ರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಇದನ್ನೂ ಓದಿ-Adani-Hindenburg Case: ಸುಪ್ರೀಂ ಕೋರ್ಟ್ ನಲ್ಲಿ ತನ್ನ ಉತ್ತರ ದಾಖಲಿಸಿದ ಸೆಬಿ, 2016 ರಿಂದ ಅಡಾಣಿ ಕಂಪನಿ ತನಿಖೆಗೆ ನಕಾರ

ಎನ್‌ಸಿಬಿಯ ಎಸ್‌ಇಟಿ ತನಿಖೆಯ ನಂತರ, ಮೇ 11, 2023 ರಂದು, ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ, ವಿವಿ ಸಿಂಗ್, ಆಶಿಶ್ ರಂಜನ್, ಕೆಪಿ ಗೋಸ್ವಾಮಿ ಮತ್ತು ಸಾನ್ವಿಲ್ ಡಿಸೋಜಾ ವಿರುದ್ಧ ದೂರು ಸಲ್ಲಿಸಿದ್ದಾರೆ ಮತ್ತು ನಂತರ ಸಿಬಿಐ ಅದೇ ದಿನ ಸಮೀರ್ ವಿರುದ್ಧ ಪ್ರಕರಣ ದಾಖಲಿಸಿದೆ. ವಾಂಖೆಡೆ ಮತ್ತಿತರರು ಆರೋಪಿಗಳಿಗೆ ಸಂಬಂಧಿಸಿದ 29 ಸ್ಥಳಗಳಲ್ಲಿ ದಾಳಿ ನಡೆಸಿ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News