Ileana D'Cruz: ಮದುವೆಗೂ ಮುನ್ನವೇ ಮುದ್ದಾದ ಮಗುವಿಗೆ ಜನ್ಮ ನೀಡಿದ ಗೋವಾ ಬ್ಯೂಟಿ..ಹೆಸರೇನು ಗೊತ್ತಾ..?

Ileana D'Cruz blessed with boy baby : ಬಹುಬಾಷಾ ನಟಿ ಇಲಿಯಾನಾ ತಾಯಿಯಾಗಿದ್ದಾರೆ. ಸದ್ಯ ಈ ವಿಚಾರವನ್ನು ನಟಿ ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಳ್ಳುವುದರ ಜೊತೆಗೆ ಮಗುವಿನ ಪೋಟೋ ಮತ್ತು ಹೆಸರನ್ನು ರಿವೀಲ್‌ ಮಾಡಿದ್ದಾರೆ. ಹಾಗಾದರೆ ಗೋವಾ ಬ್ಯೂಟಿ ತಾಯಿಯಾಗಿದ್ದು ಹೆಣ್ಣು ಮಗುವಿಗಾ..? ಗಂಡು ಮಗುವಿಗಾ..? ಆ ಮಗುವಿನ ಹೆಸರರೇನು ಅನ್ನೋ ಡಿಟೇಲ್ಸ್‌ ಇಲ್ಲಿದೆ ನೋಡಿ..

Written by - Savita M B | Last Updated : Aug 6, 2023, 09:22 AM IST
  • ನಟಿ ಇಲಿಯಾನಾ ಕೆಲ ದಿನಗಳ ಹಿಂದೆ ತಾವು ತಾಯಿಯಾಗುವ ವಿಚಾರವನ್ನು ಬಹಿರಂಗ ಪಡಿಸಿದ್ದರು.
  • ಆಗ್ಗಾಗೆ ಪೋಟೋಗಳನ್ನು ಶೇರ್‌ ಮಾಡಿ ತಾಯಿಯಾಗುತ್ತಿರುವ ಖುಷಿಯನ್ನು ಹಂಚಿಕೊಳ್ಳುತ್ತಿದ್ದರು.
  • ಸದ್ಯ ಇಲಿಯಾನಾ ತಾವು ಗಂಡು ಮಗುವಿಗೆ ಜನ್ಮ ನೀಡಿರುವ ಸಂಗತಿಯನ್ನು ಸೋಷಿಯಲ್‌ ಮಿಡಿಯಾದಲ್ಲಿ
Ileana D'Cruz: ಮದುವೆಗೂ ಮುನ್ನವೇ ಮುದ್ದಾದ ಮಗುವಿಗೆ ಜನ್ಮ ನೀಡಿದ ಗೋವಾ ಬ್ಯೂಟಿ..ಹೆಸರೇನು ಗೊತ್ತಾ..?  title=

Ileana D'Cruz : ನಟಿ ಇಲಿಯಾನಾ ಕೆಲ ದಿನಗಳ ಹಿಂದೆ ತಾವು ತಾಯಿಯಾಗುವ ವಿಚಾರವನ್ನು ಬಹಿರಂಗ ಪಡಿಸಿದ್ದರು. ಮದುವೆಗೂ ಮೊದಲೇ ಮಗುನಾ..? ಮಗುವಿನ ತಂದೆ ಯಾರು..? ಎಂದೆಲ್ಲಾ ಟ್ರೋಲ್‌ ಕೂಡಾ ಆಗಿದ್ದರು. ಆದರೆ ಅವರು ಯಾವುದಕ್ಕೂ ಕೇರ್‌ ಮಾಡದೇ ಆಗ್ಗಾಗೆ ಪೋಟೋಗಳನ್ನು ಶೇರ್‌ ಮಾಡಿ ತಾಯಿಯಾಗುತ್ತಿರುವ ಖುಷಿಯನ್ನು ಹಂಚಿಕೊಳ್ಳುತ್ತಿದ್ದರು. 

ಸದ್ಯ ಇಲಿಯಾನಾ ತಾವು ಗಂಡು ಮಗುವಿಗೆ ಜನ್ಮ ನೀಡಿರುವ ಸಂಗತಿಯನ್ನು ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಗನ ಹೆಸರು ಕೋವಾ ಫೀನಕ್ಸ್ ಡೋಲನ್ ಎಂದು ಪರಿಚಯಿಸಿದ್ದಾರೆ. ಆದರೆ ಮಗುವಿನ ತಂದೆ ಯಾರು ಅನ್ನೋದು ಮಾತ್ರ ಗುಟ್ಟಾಗಿಯೇ ಇದೆ.  

 
 
 
 

 
 
 
 
 
 
 
 
 
 
 

A post shared by Ileana D'Cruz (@ileana_official)

ಇದನ್ನೂ ಓದಿ-OTT In India: ಒಟಿಟಿ ಸೆನ್ಸಾರ್‌ಶಿಪ್ ಸರ್ಕಾರದ ಮಹತ್ವದ ನಿರ್ಧಾರ

ಇನ್ನು ಇಲಿಯಾನಾ ಸಿನಿಮಾ ವಿಚಾರಕ್ಕೆ ಬಂದರೇ ತೆಲುಗಿನ ದೇವದಾಸು ಸಿನಿಮಾ ಮೂಲಕ ಬೆಳ್ಳೆತೆರೆಗೆ ಕಾಲಿಟ್ಟ ಇಲಿಯಾನಾ ಮುಂದೆ ತಮಿಳು, ಹಿಂದಿ, ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಮಹೇಶ್‌ ಬಾಬು ಜೊತೆ ನಟಿಸಿದ ಪೋಕಿರಿ ಸಿನಿಮಾದಿಂದ ಈ ನಟಿಗೆ ದೊಡ್ಡ ಬ್ರೇಕ್‌ ಸಿಕ್ಕಿತ್ತು. ಇದರಿಂದ ಬಾಲಿವುಡ್‌ನಲ್ಲಿಯೂ ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದಿದ್ದವು. ತಮ್ಮ ಮಾದಕ ಮೈಮಾಟದಿಂದಲೇ ಇಲಿಯಾನಾ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರು. ಇತ್ತೀಚೆಗೆ ನಟಿ ಸಿನಿಮಾಗಳಿಂದ ಕೊಂಚ ದೂರ ಉಳಿದಿದ್ದಾರೆ. 

ಮೈಕಲ್‌ ಡೋಲನ್‌ ಎಂಬುವರನ್ನು ಇಲಿಯಾನಾ ಮದುವೆಯಾಗಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿದ್ದವು. ಸದ್ಯ ಮಗುವನ್ನು ಸ್ವಾಗತಿಸಿದ್ದಾರೆ ಎನ್ನುವ ಕುರಿತು ಚರ್ಚೆ ಆಗುತ್ತಿದೆ. ಈ ಹಿಂದೆ ಇಲಿಯಾನಾ ಆಸ್ಟೇಲಿಯಾ ಮೂಲದ ಪೋಟೋಗ್ರಾಫರ್‌ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎನ್ನಲಾಗುತ್ತಿತ್ತು. ಇಬ್ಬರು ಗುಟ್ಟಾಗಿ ಮದುವೆ ಆಗಿದ್ದಾರೆ ಎನ್ನುವ ವದಂತಿಯೂ ಇದೆ. 4 ವರ್ಷಗಳಿಂದ ಇವರಿಬ್ಬರೂ ದೂರವಾಗಿದ್ದಾರೆ ಎನ್ನುವ ಗುಸುಗುಸು ಹಬ್ಬಿತ್ತು. 

ಇದನ್ನೂ ಓದಿ- ಅದ್ಭುತ ಯಶಸ್ಸಿನೊಂದಿಗೆ ಮುಕ್ತಾಯವಾದ ಮಿಸ್ಟರ್, ಮಿಸ್ ಮತ್ತು ಮಿಸೆಸ್ ಸ್ಟಾರ್‌ ಯೂನಿವರ್ಸ್‌ ಇಂಡೋ-ಇಂಟರ್ನ್ಯಾಷನಲ್ ಫ್ಯಾಶನ್ ಕಾರ್ನಿವಲ್ 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News