ಬಿಗ್ ಬಾಸ್ ನಲ್ಲಿ ಅದಲು ಬದಲಾದ ಗಂಧರ್ವ ರಾಕ್ಷಸರು

Written by - YASHODHA POOJARI | Edited by - Manjunath N | Last Updated : Dec 6, 2023, 03:50 PM IST
  • ನಿನ್ನೆಯಿಂದ ಸಂಗೀತಾ ತಂಡದ ಸದಸ್ಯರು ರಕ್ಕಸರಾಗಿ ಇಡೀ ಮನೆಯಲ್ಲಿ ಮೆರೆದಾಡಿದ್ದರು
  • ವರ್ತೂರು ತಂಡದ ಗಂಧರ್ವರನ್ನು ಬಗೆಬಗೆಯಾಗಿ ಗೋಳು ಹೊಯ್ದುಕೊಂಡಿದ್ದರು
  • ನಂತರ ಬಾವುಟ ನೆಡುವ ಟಾಸ್ಕ್‌ನಲ್ಲಿ ಕೂಡ ಎರಡೂ ತಂಡಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತ್ತು
ಬಿಗ್ ಬಾಸ್ ನಲ್ಲಿ ಅದಲು ಬದಲಾದ ಗಂಧರ್ವ ರಾಕ್ಷಸರು title=

ಬಿಗ್‌ಬಾಸ್‌ ಮನೆಯ ರಕ್ಕಸ-ಗಂಧರ್ವರ ಟಾಸ್ಕ್‌ನ ಎರಡನೇ ಮುಖ ಆರಂಭಗೊಂಡಿದೆ. ನಾಣ್ಯದ ಬದಿಗಳು ಅದಲುಬದಲಾಗಿವೆ. ರಕ್ಕಸರು ಗಂಧರ್ವರಾಗಿದ್ದಾರೆ. ಗಂಧರ್ವರು ರಕ್ಕಸರಾಗಿದ್ದಾರೆ. ಈ ಅದಲುಬದಲಿನ ಆಟದ ಪರಿಣಾಮ ಏನಾಗುತ್ತಿದೆ ಎಂಬುದು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ.

ಇದನ್ನೂ ಓದಿ: ಹೃದಯ ಆರೋಗ್ಯ ಕೆಟ್ಟರೆ ಹೀಗಿರುತ್ತೆ ಮುನ್ಸೂಚನೆ

ನಿನ್ನೆಯಿಂದ ಸಂಗೀತಾ ತಂಡದ ಸದಸ್ಯರು ರಕ್ಕಸರಾಗಿ ಇಡೀ ಮನೆಯಲ್ಲಿ ಮೆರೆದಾಡಿದ್ದರು. ವರ್ತೂರು ತಂಡದ ಗಂಧರ್ವರನ್ನು ಬಗೆಬಗೆಯಾಗಿ ಗೋಳು ಹೊಯ್ದುಕೊಂಡಿದ್ದರು. ನಂತರ ಬಾವುಟ ನೆಡುವ ಟಾಸ್ಕ್‌ನಲ್ಲಿ ಕೂಡ ಎರಡೂ ತಂಡಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತ್ತು.ಇಂದು ವೇಷಗಳು ಹಾಗೆಯೇ ಇವೆ. ಅದರೊಳಗಿನ ವ್ಯಕ್ತಿಗಳು ಬದಲಾಗಿದ್ದಾರೆ.ರಕ್ಕಸರಾಗಿದ್ದವರು ಗಂಧರ್ವ ವೇಷ ತೊಟ್ಟು ನಸುನಗುತ್ತಿದ್ದಾರೆ. ಗಂಧರ್ವರಾಗಿದ್ದವರು ರಕ್ಕಸರಾಗಿ ಅಟ್ಟಹಾಸಗೈಯುತ್ತಿದ್ದಾರೆ.

ಇದನ್ನೂ ಓದಿ: ಕುರಿಗಳಿಗೆ ವೈರಸ್: ಗುಂಡ್ಲುಪೇಟೆಯಲ್ಲಿ 30 ಕ್ಕೂ ಹೆಚ್ಚು ಕುರಿ ಬಲಿ

ವರ್ತೂರು ತಂಡದ ಸದಸ್ಯರು ನಿನ್ನೆಅನುಭವಿಸಿದ ಅವಮಾನ-ನೋವುಗಳನ್ನೆಲ್ಲ ಬಡ್ಡಿಸಮೇತ ತೀರಿಸಲು ಹೊರಟಂತಿದೆ. ಕಾರ್ತಿಕ್‌ ಬಳಿ ವಿನಯ್, ಆನೆ ಬೀಳಿಸಿದ್ದಕ್ಕೆ ಕ್ಷಮೆ ಕೇಳಿಸಿಕೊಳ್ಳುತ್ತಿದ್ದಾರೆ. ರಕ್ಕಸರಾಗಿದ್ದಾಗ ಮೆರೆದಾಡಿದ್ದ ಕಾರ್ತಿಕ್ ಅವರನ್ನೇ ಗಂಧರ್ವ ತಂಡ ಟಾರ್ಗೆಟ್ ಮಾಡಿಕೊಂಡು ಬಗೆಬಗೆಯ ಶಿಕ್ಷೆಗಳನ್ನು ನೀಡುತ್ತಿರುವಂತಿದೆ. ಬದಲಾದ ಈ ಆಯಾಮದಲ್ಲಿ ಯಾರು ಗೆಲ್ಲುತ್ತಾರೆ? ಯಾರು ಸೋತು ಶರಣಾಗುತ್ತಾರೆ?  ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ.ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News