"ಹೆಣ್ಣನ್ನು ಕೆಟ್ಟದಾಗಿ ತೋರಿಸಬಾರದು, ಕನ್ನಡ ಭಾಷೆಗೆ ಅವಮಾನವಾಗಬಾರದು": ದರ್ಶನ್ ಪಾಲಿಸಿ!

Kaatera Success Meet: ಇತ್ತೀಚೆಗೆ ತೆರೆಕಂಡ ಕಾಟೇರ ಸಿನಿಮಾ ಗೆದ್ದ ಹಿನ್ವೆಲೆಯಲ್ಲಿ ಸೋಮವಾರ ಸಂಜೆ ಚಿತ್ರತಂಡದಿಂದ  ಸಕ್ಸಸ್ ಮೀಟ್ ನಡೆಸಿದ್ದು, ಅಲ್ಲಿ ದರ್ಶನ್‌ ಪತ್ರಕರ್ತರ ಪ್ರಶ್ನೆ ಉತ್ತರ ನೀಡುವಾಗ ಅವರ ಸಿನಿಮಾ ಆಯ್ಕೆ ಹಾಗೂ ಪಾಲಿಸಿಗಳ ಬಗ್ಗೆ ಹಂಚಿಕೊಂಡಿದ್ದಾರೆ.

Written by - Zee Kannada News Desk | Last Updated : Jan 2, 2024, 09:52 AM IST
  • ನಟ ದರ್ಶನ್ ಅಭಿನಯಿಸಿರುವ ಕಾಟೇರ ಚಿತ್ರದ ಸಕ್ಸಸ್‌ ಕಂಡು ಮತ್ತೆ ಈತ ಬಾಕ್ಸ್ ಆಫೀಸ್ ಸುಲ್ತಾನ ಎಂಬುದು ಸಾಬೀತಾಗಿದೆ.
  • ಕಾಟೇರ ಸಿನಿಮಾ ಗೆದ್ದ ಹಿನ್ವೆಲೆಯಲ್ಲಿ ಸೋಮವಾರ ಸಂಜೆ ಚಿತ್ರತಂಡದಿಂದ ಸಕ್ಸಸ್ ಮೀಟ್ ನಡೆಸಿದ್ದು, ಈ ಸಂದರ್ಭದಲ್ಲಿ ದರ್ಶನ್‌ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದಾರೆ.
  • ಚಾಲೆಂಜಿಂಗ್‌ ಸಾರ್‌ಗೆ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ದರ್ಶನ್, ನಾನು ರಾಜ್‌ಕುಮಾರ್ ಅವರ ಕಾಲಿನ ಧೂಳಿಗೂ ಸಮ ಇಲ್ಲ ಎಂದು ಹೇಳಿದರು.
"ಹೆಣ್ಣನ್ನು ಕೆಟ್ಟದಾಗಿ ತೋರಿಸಬಾರದು, ಕನ್ನಡ ಭಾಷೆಗೆ ಅವಮಾನವಾಗಬಾರದು": ದರ್ಶನ್ ಪಾಲಿಸಿ! title=

Darshan In Kaatera Success Meet: ಸ್ಯಾಂಡಲ್‌ವುಡ್‌ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟಿಸಿರುವ  'ಕಾಟೇರ' ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾದ ಬಾಕ್ಸ್‌ ಆಫೀಸ್‌ನಲ್ಲಿ ಕೊಳ್ಳೆ ಹೊಡೆಯುತ್ತಿದೆ. ನಟ ದರ್ಶನ್  ಅಭಿನಯಿಸಿರುವ ಕಾಟೇರ ಚಿತ್ರದ ಸಕ್ಸಸ್‌ ಕಂಡು ಮತ್ತೆ ಈತ ಬಾಕ್ಸ್ ಆಫೀಸ್ ಸುಲ್ತಾನ ಎಂಬುದು ಸಾಬೀತಾಗಿದೆ. ಸಿನಿಮಾ ರಿಲೀಸ್‌ ಆದ ಮೊದಲ ದಿನ 19.79 ಕೋಟಿ ರೂ. ಕಲೆಕ್ಷನ್ ಮಾಡಿದ್ದ ಈ ಸಿನಿಮಾ ಮೂರನೇ ದಿನ ಅಂದರೆ ಭಾನುವಾರ 20.94 ಕೋಟಿ ರೂಪಾಯಿ ಗಳಿಸಿದೆ. ಮೂರು ದಿನಗಳಲ್ಲಿ ಒಟ್ಟು 58.8 ಕೋಟಿ ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. 

ಕಾಟೇರ ಸಿನಿಮಾ ಗೆದ್ದ ಹಿನ್ವೆಲೆಯಲ್ಲಿ ಸೋಮವಾರ ಸಂಜೆ ಚಿತ್ರತಂಡದಿಂದ  ಸಕ್ಸಸ್ ಮೀಟ್ ನಡೆಸಿದ್ದು, ಈ ಸಂದರ್ಭದಲ್ಲಿ ಚಿತ್ರದಲ್ಲಿ ಜಾತಿ ಸೇರಿದಂತೆ ಮತ್ತೊಂದಿಷ್ಟು ಕಥೆ ಕುರಿತು ಕೇಳಿದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ದರ್ಶನ್, ಕಾಟೇರ ಕಥೆ ಕೇಳುವಾಗ ಚಂದಮಾಮನ ಕಥೆ ಕೇಳಿದಂತೆ ಕೇಳಿದ್ದೀನಿ. ಸಿನಿಮಾದಲ್ಲಿ ಒಳ್ಳೇಯ ಮೆಸೇಜ್ ಇದೆ. ಇವತ್ತು ಜನ ಮಾತನಾಡದೇನು? ಗಂಡಸು ಬೆವರು ಸುರಿಸಬೇಕು, ಜೊಲ್ಲು ಸುರಿಸಬಾರದು ಅಂತಾರೆ . ಇದರಲ್ಲಿ ಅದೆಷ್ಚು ಅರ್ಥ ಇದೆ. ಸಮಾಜದಲ್ಲಿ ನಮ್ಮ ಸುತ್ತಮುತ್ತ ನಡೆಯುತ್ತಿರುವ ಕಥೆನೇ ಇದು ಎಂದರು.

ಇದನ್ನೂ ಓದಿ: ನ್ಯೂ ಇಯರ್‌ಗೆ "ಕೃಷ್ಣಂ ಪ್ರಣಯ ಸಖಿ" ನ್ಯೂ ಪೋಸ್ಟ್‌ರ್‌ ರಿಲೀಸ್‌!

ದರ್ಶನ್‌ ಚಿತ್ರದ ಕಥೆ ಯಾವ ರೀತಿ ಆಯ್ಕೆ ಮಾಡ್ತಾರೆಂಬುವುದರ ಬಗ್ಗೆ ಉತ್ತರ ನೀಡುತ್ತಿರುವಾಗ,  ಸಿನಿಮಾ ಕಥೆ ಆಯ್ಕೆ ಮಾಡುವಾಗ ಮೂರು ರೀತಿ ಯೋಚನೆ ಮಾಡುತ್ತೇನೆ.ಹೆಣ್ಣನ್ನು ಕೆಟ್ಟದಾಗಿ ತೋರಿಸಬಾರದು, ಕನ್ನಡ ಭಾಷೆಗೆ ಅವಮಾನವಾಗುವಂತೆ ಇರಬಾರದು, ಅನ್ನದಾತನರಿಗೆ ನಷ್ಟ ಆಗಬಾರದು ಎಂಬುದು ನನ್ನ ಪಾಲಿಸಿ ಅಂದ ದರ್ಶನ್, ಯಾವತ್ತಿಗೂ ರಾಷ್ಟ್ರ  ಪ್ರಶಸ್ತಿ ಬರುತ್ತೆ ಅಂತಾ ಸಿನಿಮಾ ಮಾಡಲ್ಲ ಎಂದು ಸ್ಪಷ್ಪಪಡಿಸಿದರು.

ಚಾಲೆಂಜಿಂಗ್‌ ಸಾರ್‌ಗೆ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ದರ್ಶನ್, ನಾನು ರಾಜ್‌ಕುಮಾರ್ ಅವರ ಕಾಲಿನ ಧೂಳಿಗೂ ಸಮ ಇಲ್ಲ. ಅವರಿಗೆ ನನ್ನನ್ನು ಹೋಲಿಸಬೇಡಿ, ಅವರು ಮಾಡಿರುವ ಪಾತ್ರಗಳಲ್ಲಿ 0.5 ಅಷ್ಟು ಕೂಡ ನಾವು ಮಾಡಲು ಆಗಲ್ಲ, ಪ್ರಯತ್ನಿಸಬಹುದಷ್ಟೇ ಅಂದರು. ಹಾಗೆಯೇ ಇನ್ನಷ್ಟುನ ತಮ್ಮ ಸಿನಿಮಾಗಳ ಬಗ್ಗೆ ಮಾತನಾಡಿದ ದರ್ಶನ್‌ ನನೊಬ್ಬ ಕಮರ್ಷಿಯಲ್ ನಟ. ನನ್ನ ನಂಬಿದ ನಿರ್ಮಾಪಕರು ಸಿನಿಮಾಕ್ಕೆ ಹಾಕಿರುವ ಹಣ ವಾಪಸ್ ಬರಬೇಕು. ಚಿತ್ರದಲ್ಲಿ ಅಭಿನಯಿಸಿದ ಎಲ್ಲಾ ಕಲಾವಿದರಿಗೂ ಒಂದಷ್ಟು ಅನುಕೂಲವಾಗಬೇಕು, ಅಲ್ಲದೇ ಒಂದು ಚಿತ್ರ ಗೆದ್ದಾಗ ಮತ್ತೊಂದಿಷ್ಟು ಚಿತ್ರಗಳು ಸೆಟ್ಟೇರಲು ಕಾರಣವಾಗುತ್ತದೆ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News