ಇಂದಿನ ವಿಚಾರಣೆ ವೇಳೆ ಸೆಲಬ್ರಿಟಿಗಳ ಹೆಸರು ಬಾಯಿ ಬಿಡುತ್ತಾರಾ ಇಂದ್ರಜಿತ್ ಲಂಕೇಶ್?

ಕನ್ನಡ ಚಿತ್ರರಂಗದ ನಟ-ನಟಿಯರು ಡ್ರಗ್ಸ್ (Drugs) ಜಾಲದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದ ಇಂದ್ರಜಿತ್ ಲಂಕೇಶ್ 

Last Updated : Aug 31, 2020, 10:05 AM IST
  • ಇಂದ್ರಜಿತ್ ಲಂಕೇಶ್ ಅವರನ್ನು ಬೆಳಿಗ್ಗೆ 11:30ಕ್ಕೆ ಕಚೇರಿಗೆ ಬರುವಂತೆ ಸಿಸಿಬಿ ಅಧಿಕಾರಿಗಳು ನೊಟೀಸ್ ನೀಡಿದ್ದಾರೆ.
  • ಕನ್ನಡ ಚಿತ್ರರಂಗದ ನಟ-ನಟಿಯರು ಡ್ರಗ್ಸ್ (Drugs) ಜಾಲದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದ ಇಂದ್ರಜಿತ್ ಲಂಕೇಶ್
ಇಂದಿನ ವಿಚಾರಣೆ ವೇಳೆ ಸೆಲಬ್ರಿಟಿಗಳ ಹೆಸರು ಬಾಯಿ ಬಿಡುತ್ತಾರಾ ಇಂದ್ರಜಿತ್ ಲಂಕೇಶ್? title=

ಬೆಂಗಳೂರು: ಬೆಂಗಳೂರಿನಲ್ಲಿ ಪತ್ತೆಯಾಗಿದ್ದ ಬೃಹತ್ ಡ್ರಗ್ಸ್ ಜಾಲದಲ್ಲಿ ಸ್ಯಾಂಡಲ್ ವುಡ್ ತಾರೆಯರು ಭಾಗಿಯಾಗಿದ್ದಾರೆ ಎಂದು ಬಹಿರಂಗವಾಗಿ ಹೇಳಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ (Indrajith Lankesh) ಇಂದು ಸಿಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.

ಕನ್ನಡ ಚಿತ್ರರಂಗದ ನಟ-ನಟಿಯರು ಡ್ರಗ್ಸ್ (Drugs) ಜಾಲದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದ ಇಂದ್ರಜಿತ್ ಲಂಕೇಶ್ ಅವರನ್ನು ಬೆಳಿಗ್ಗೆ 11:30ಕ್ಕೆ ಕಚೇರಿಗೆ ಬರುವಂತೆ ಸಿಸಿಬಿ ಅಧಿಕಾರಿಗಳು ನೊಟೀಸ್ ನೀಡಿದ್ದಾರೆ.

ಇಂದ್ರಜಿತ್ ಲಂಕೇಶ್, 'c' ಎಂದು ಕೂಡ ಹೇಳಿದ್ದರು. ಇದರ ಬೆನ್ನಲ್ಲೇ ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡುವಂತೆ ನೋಟೀಸ್ ನೀಡಿದ್ದಾರೆ.

ಇಂದ್ರಜಿತ್ ಲಂಕೇಶ್ ಇಂದು ವಿಚಾರಣೆ ವೇಳೆ ಸ್ಯಾಂಡಲ್ ವುಡ್ ನ ಯಾವ್ಯಾವ ನಟ-ನಟಿಯರ ಹೆಸರನ್ನು ಹೇಳುವರು ಎಂಬುದು ಸದ್ಯ ಕುತೂಹಲ ಮಾಡಬೇಕಿತ್ತು. ಅವರು ಹೇಳುವ ಮಾಹಿತಿಯಿಂದ ಸ್ಯಾಂಡಲ್ ವುಡ್ ನಲ್ಲಿ ಯಾರಿಗೆಲ್ಲಾ ತೊಂದರೆಯಾಗುತ್ತದೆ ಎಂಬುದನ್ನು ಕಾದುನೋಡಬೇಕು.

ಬೆಂಗಳೂರಿನಲ್ಲಿ ಬೃಹತ್ ಡ್ರಗ್ಸ್ ಜಾಲ; ಖ್ಯಾತ ಸಂಗೀತಗಾರ ಮತ್ತು ಚಿತ್ರನಟರು ಭಾಗಿ ಶಂಕೆ

ಅಥವಾ ಈ ಡ್ರಗ್ಸ್ ಜಾಲದಲ್ಲಿ ತೇಲಾಡುತ್ತಿರುವ ಬಗ್ಗೆ ನಿಜವಾಗಿಯೂ ಇಂದ್ರಜಿತ್ ಲಂಕೇಶ್ ಅವರಿಗೆ ಗೊತ್ತಾ? ಅವರು ಹೆಸರುಗಳನ್ನು ಹೇಳುವುದರ ಜೊತೆಗೆ ಸಾಕ್ಷ್ಯಾಧಾರಗಳನ್ನೂ ನೀಡುತ್ತಾರಾ? ಎಂಬುದು ಕೂಡ ಬಹಳ ಮಹತ್ವದ ಬೆಳವಣಿಗೆಯಾಗಲಿದೆ.

ಇತ್ತೀಚೆಗೆ ತೀರಿಹೋದ ನಟರ ಪೋಸ್ಟ್ ಮಾರ್ಟಮ್ ಏಕೆ ಮಾಡ್ಲಿಲ್ಲ: ಇಂದ್ರಜಿತ್ ಲಂಕೇಶ್ ಪ್ರಶ್ನೆ

ಇದಲ್ಲದೆ ಇಂದ್ರಜಿತ್ ಲಂಕೇಶ್ ಪರೋಕ್ಷವಾಗಿ ಚಿರಂಜೀವಿ ಸರ್ಜಾ ಬಗ್ಗೆ ಕೂಡ ಮಾತನ್ನಾಡಿದ್ದರು. ಇತ್ತೀಚೆಗೆ ತೀರಿಕೊಂಡ ನಟನ ಪೋಸ್ಟ್ ಮಾರ್ಟಂ ಏಕೆ ಮಾಡಲಿಲ್ಲ? ಎಂದು ಪ್ರಶ್ನಿಸಿದ್ದರು. ಹಾಗಾಗಿ ಇವತ್ತಿನ ವಿಚಾರಣೆ ವೇಳೆ ಚಿರಂಜೀವಿ ಸರ್ಜಾ ಬಗ್ಗೆ ಮಾಹಿತಿ ಕೊಡುತ್ತಾರಾ ಮತ್ತು ಏಕೆ ಆ ಪ್ರಕರಣವನ್ನು ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ಏಕೆ ಉಲ್ಲೇಖಿಸಿದರು ಎಂಬ ಬಗ್ಗೆ ಮಾಹಿತಿ ನೀಡುತ್ತಾರಾ ಕಾದುನೋಡಬೇಕು.

Trending News