‘ಜೇಮ್ಸ್’ ಸಿನಿಮಾ ನನಗೆ ಅರ್ಥವಾಗಿಲ್ಲ, ಟಿಕೆಟ್ಗೆ ದುಡ್ಡು ಕೊಟ್ಟಿದ್ದೇ ವೇಸ್ಟ್ ಅಂತಾ ಹೇಳಿದ್ದ ಯುವಕನನ್ನು ಹುಡುಕಿದ ‘ಅಪ್ಪು’ ಫ್ಯಾನ್ಸ್ ಆತನಿಗೆ ಖಡಕ್ ಆಗಿ ವಾರ್ನಿಂಗ್ ಮಾಡಿದ್ದಾರೆ.
ರಾಜಕೀಯ ಮುಖಂಡರು ಕೂಡ ಪಕ್ಷಾತೀತವಾಗಿ "ಜೇಮ್ಸ್" ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲು ಮುಖ್ಯಮಂತ್ರಿ ಅವರ ಬಳಿ ಮನವಿ ಮಾಡುವುದಾಗಿ ಹೇಳಿದ್ದಾರೆ. ಸರ್ಕಾರ ಈ ನಿಟ್ಟಿನಲ್ಲಿ ತೆರಿಗೆ ವಿನಾಯಿತಿ ನೀಡುವ ಸಾಧ್ಯತೆ ಹೆಚ್ಚಿದೆ.
ಕುಂದಾನಗರಿ ಬೆಳಗಾವಿಯಲ್ಲಿ ಜೇಮ್ಸ್ ಅಬ್ಬರ ಜೋರಾಗಿದೆ. ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದ ನಿವೃತ್ತ ಯೋಧರೊಬ್ಬರು ಸೇನಾ ಸಮವಸ್ತ್ರ ಧರಿಸಿಕೊಂಡೇ ಸಿನಿಮಾ ವೀಕ್ಷಿಸಲು ಆಗಮಿಸಿದ್ದಾರೆ.
ಜೇಮ್ಸ್' ಕೇವಲ ಸಿನಿಮಾ ಆಗಿಲ್ಲ, ಅದು ಹಬ್ಬದಂತೆ ಸಿಂಗಾರಗೊಂಡಿದೆ. ಮುಂದಿನ ಗುರುವಾರ ಜಗತ್ತಿನಾದ್ಯಂತ ಸಾವಿರಾರು ಥಿಯೇಟರ್ಗಳಲ್ಲಿ ರಿಲೀಸ್ ಆಗಲಿದ್ದು, ಕೆಲವು ದಿನಗಳ ಹಿಂದೆ 'ಟ್ರೇಡ್ ಮಾರ್ಕ್' ಹಾಡು ರಿಲೀಸ್ ಆಗಿ ಹೊಸ ದಾಖಲೆ ಬರೆದಿತ್ತು.
'ಜೇಮ್ಸ್' ಪುನೀತ್ ಅಭಿನಯದ ಕೊನೆಯ ಸಿನಿಮಾ. ಹೀಗೆ ಅಪ್ಪು ಕೊನೆಯ ಚಿತ್ರಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಕೋಟಿ ಕೋಟಿ ಆಫರ್ ಬರುತ್ತಿದ್ದರೂ ಕೂಡ 'ಜೇಮ್ಸ್' ನಿರ್ಮಾಪಕರು ಇದಕ್ಕೆ ಒಪ್ಪುತ್ತಿಲ್ಲ.
ಅಪ್ಪು ಅಂದ್ರೆ ಸ್ಮೈಲ್, ಅಪ್ಪು(Puneeth Rajkumar) ಅಂದ್ರೆ ಸ್ಟೈಲ್.. ಹಾಗೇ ಅಪ್ಪು ಅಂದ್ರೆ ಡಾನ್ಸ್ ಅಂತಾ ಅಭಿಮಾನಿಗಳು 'ಟ್ರೇಡ್ ಮಾರ್ಕ್' ಹಾಡನ್ನು ಸಂಭ್ರಮಿಸುತ್ತಿದ್ದಾರೆ. ಈ ನಡುವೆ ಯುಟ್ಯೂಬ್ನಲ್ಲಿ ನಿನ್ನೆಯಿಂದಲೂ 'ಟ್ರೇಡ್ ಮಾರ್ಕ್' ಸಾಂಗ್ ಟ್ರೆಂಡ್ ಕ್ರಿಯೇಟ್ ಮಾಡಿದೆ.
ʼಜೇಮ್ಸ್ʼ ಕೇವಲ ಚಿತ್ರವಲ್ಲ, ಇದು ಕೋಟಿ ಕೋಟಿ ಅಭಿಮಾನಿಗಳ ಪಾಲಿನ ಮಹಾ ಕನಸು. ಅಪ್ಪು ನಮ್ಮನ್ನೆಲ್ಲಾ ಅಗಲಿದ ಮೇಲೆ ತೆರೆಗೆ ಬರುತ್ತಿರುವ ಸಿನಿಮಾ. ಅಲ್ಲದೆ ಅಪ್ಪು ಹೀರೋ ಆಗಿ ಮಿಂಚಿರುವ ಕೊನೇ ಚಿತ್ರ. ಹೀಗಾಗಿ ಜೇಮ್ಸ್ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳು ಇದ್ದವು. ಈ ಎಲ್ಲಾ ನಿರೀಕ್ಷೆಗಳನ್ನು ಜೇಮ್ಸ್ ಪೋಸ್ಟರ್ ದುಪ್ಪಟ್ಟು ಮಾಡಿದೆ. ಜೊತೆಗೆ ಅಣ್ಣಾವ್ರ ಮಕ್ಕಳನ್ನು ಒಂದೇ ಸಿನಿಮಾದಲ್ಲಿ ನೋಡಬೇಕೆನ್ನುವ ಕೋಟಿ ಕೋಟಿ ಅಭಿಮಾನಿಗಳ ಕನಸು ಕೂಡ ನನಸಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.