ʼದೇವರʼ ಸಿನಿಮಾದ ಫಸ್ಟ್‌ ಸಾಂಗ್‌ ರಿಲೀಸ್‌..! ಎನ್‌ಟಿಆರ್‌ ಜಾನ್ವಿ ಕೆಮಿಸ್ಟ್ರೀಗೆ ಫ್ಯಾನ್ಸ್‌ ಫಿದಾ

Devara movie Chuttamalle song : ಇನ್ನೆರಡು ತಿಂಗಳಲ್ಲಿ ತೆರೆಕಾಣಲಿರುವ ʼದೇವರʼ ಚಿತ್ರದ ಮೇಲೆ ಇಂದು ಬಿಡುಗಡೆಯಾದ ಹಾಡು ನಿರೀಕ್ಷೆ ಹೆಚ್ಚಿಸಿದೆ. ಈಗಾಗಲೇ ರಿಲೀಸ್‌ ಆಗಿರುವ ಈ ಚಿತ್ರದ ಗ್ಲಿಂಪ್ಸಸ್, ಫಿಯರ್ ಸಾಂಗ್ ಸಿನಿ ಪ್ರಿಯರಿಗೆ ಕುತೂಹಲ ಹುಟ್ಟಿಸಿತ್ತು, ಇದೀಗ ಈ ಹಾಡು ಸಿನಿಮಾದ ಮೇಲಿನ ನಿರೀಕ್ಷೆ ದ್ವಿಗುಣಗೊಳಿಸಿದೆ..

Written by - Krishna N K | Last Updated : Aug 5, 2024, 06:58 PM IST
    • ಪ್ಯಾನ್‌ ವರ್ಲ್ಡ್‌ ಪ್ರೇಕ್ಷಕರೆಲ್ಲ ‘ದೇವರ’ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.
    • ಕೊರಟಾಲ ನಿರ್ದೇಶನದಲ್ಲಿ ತಯಾರಾಗುತ್ತಿರುವ ಬಹುನಿರೀಕ್ಷಿತ ದೇವರ ಸಿನಿಮಾ
    • ಈ ಸಿನಿಮಾದ ಎರಡನೇ ಸಿಂಗಲ್ ಬಿಡುಗಡೆಯಾಗಿದ್ದು, ಅದ್ಬುತವಾಗಿ ಮೂಡಿಬಂದಿದೆ
ʼದೇವರʼ ಸಿನಿಮಾದ ಫಸ್ಟ್‌ ಸಾಂಗ್‌ ರಿಲೀಸ್‌..! ಎನ್‌ಟಿಆರ್‌ ಜಾನ್ವಿ ಕೆಮಿಸ್ಟ್ರೀಗೆ ಫ್ಯಾನ್ಸ್‌ ಫಿದಾ title=

Devara movie song : ಎನ್‌ಟಿಆರ್‌ ಅಭಿಮಾನಿಗಳು ಮಾತ್ರವಲ್ಲದೆ ಪ್ಯಾನ್‌ ವರ್ಲ್ಡ್‌ ಪ್ರೇಕ್ಷಕರೆಲ್ಲ ‘ದೇವರ’ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಕೊರಟಾಲ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಅದರ ಜೊತೆಗೆ ಆರ್‌ಆರ್‌ಆರ್‌ ನಂತಹ ಭರ್ಜರಿ ಹಿಟ್ ನಂತರ ಜೂ.ಎನ್‌ಟಿಆರ್‌ ಅಭಿನಯದ ಚಿತ್ರ ಇದಾಗಿರುವುದರಿಂದ ಎಲ್ಲರೂ ಉತ್ಸುಕರಾಗಿದ್ದಾರೆ.

ಈ ನಡುವೆ ಬಿಡುಗಡೆಯಾದ ಫಿಯರ್‌ ಸಾಂಗ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಒಂದೇ ಒಂದು ಹಾಡಿನಿಂದ ಚಿತ್ರದಲ್ಲಿ ರಕ್ತಪಾತದ ಯಾವ ರೇಂಜ್‌ಗೆ ಇರಲಿದೆ ಎಂಬುದು ಅರ್ಥವಾಗುತ್ತದೆ. ಅನಿರುದ್ಧ್ ಕಂಪೋಸ್ ಮಾಡಿರುವ ಈ ಹಾಡು ಇಂದಿಗೂ ಸದ್ದು ಮಾಡುತ್ತಿದೆ. ಇತ್ತೀಚೆಗೆ ಈ ಸಿನಿಮಾದ ಎರಡನೇ ಸಿಂಗಲ್ ಬಿಡುಗಡೆಯಾಗಿದೆ. 

ಇದನ್ನೂ ಓದಿ:ಒಂದೇ ಒಂದು ಫೊಟೋ ಮೂಲಕ ಇಂಟರ್‌ನೆಟ್‌ ಅಲ್ಲಾಡಿಸಿದ ಅಕ್ಕ-ತಂಗಿ..! ಬಿಟೌನ್‌ ಸಿಸ್ಟರ್ಸ್‌ ಫೋಟೋ ವೈರಲ್‌

ಈ ಸುಮಧುರ ಗೀತೆ ಕೇಳುಗರನ್ನು ತಲ್ಲಣಗೊಳಿಸುತ್ತಿದೆ. ಶಿಲ್ಪಾ ರಾವ್ ಅವರ ಗಾಯನ, ರಾಮಜೋಗಯ್ಯ ಶಾಸ್ತ್ರಿಯವರ ಸಾಹಿತ್ಯ, ಅನಿರುದ್ಧ್ ರವಿಚಂದರ್ ಮ್ಯೂಸಿಕ್‌ನಲ್ಲಿ ಅದ್ಭುತವಾಗಿ ಈ ಹಾಡು ಮೂಡಿಬಂದಿದೆ. ಸಧ್ಯ ಈ ಲಿರಿಕಲ್ ವಿಡಿಯೋ ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಕ್ರಿಯೇಟ್‌ ಮಾಡುತ್ತಿದೆ.. 

ದೇವರ ಚಿತ್ರದ ಮೊದಲ ಭಾಗ ಸೆಪ್ಟೆಂಬರ್ 27 ರಂದು ಬಿಡುಗಡೆಯಾಗಲಿದೆ. ಆಚಾರ್ಯರಂತಹ ಅಲ್ಟ್ರಾ ಡಿಸಾಸ್ಟರ್ ನಂತರ ಕೊರಟಾಲ ಶಿವ ಈ ಚಿತ್ರದ ಮೂಲಕ ಪುನರಾಗಮನ ಮಾಡಲು ಪ್ರಯತ್ನಿಸುತ್ತಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ಹೀರೋ ಸೈಫ್ ಅಲಿ ಖಾನ್ ಖಳನಾಯಕನಾಗಿ ನಟಿಸುತ್ತಿದ್ದು, ಮೊದಲ ಬಾರಿಗೆ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ನಾಯಕಿಯಾಗಿ ಸೌತ್‌ ಸಿನಿರಂಗಕ್ಕೆ ಪ್ರವೇಶ ಮಾಡಿದ್ದಾರೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News