ತಿರುಮಲಕ್ಕೆ ಬಾಯ್‌ಫ್ರೆಂಡ್‌ ಜೊತೆ ಜಾನ್ವಿ ಕಪೂರ್‌ ಬಂದಿದ್ದು ಇದಕ್ಕೇನಾ? ವೈರಲ್‌ ಆಗ್ತಿದೆ ʻಆʼ ಒಂದು ಫೋಟೋ !

Janhvi Kapoor Visits Tirumala: ಬಾಲಿವುಡ್ ನಟಿ ಜಾನ್ವಿ ಕಪೂರ್ ತಿರುಮಲ ಶ್ರೀಗಳ ದರ್ಶನ ಪಡೆದರು. ಮಂಗಳವಾರ ಬೆಳಿಗ್ಗೆ ಜನಪ್ರಿಯ ಬಾಲಿವುಡ್ ನಟಿ ಜಾನ್ವಿ ಕಪೂರ್ ತಮ್ಮ ಗೆಳೆಯ ಶಿಖರ್ ಪಹ್ರಿಯಾ ಅವರೊಂದಿಗೆ ಸ್ವಾಮಿಗೆ ನಮನ ಸಲ್ಲಿಸಿದರು. 

Written by - Chetana Devarmani | Last Updated : Aug 14, 2024, 02:08 PM IST
    • ಬಾಲಿವುಡ್ ನಟಿ ಜಾನ್ವಿ ಕಪೂರ್
    • ಜಾನ್ವಿ ಕಪೂರ್ ಬಾಯ್‌ಫ್ರೆಂಡ್
    • ತಿರುಮಲ ಶ್ರೀಗಳ ದರ್ಶನ ಪಡೆದ ಜಾನ್ವಿ
ತಿರುಮಲಕ್ಕೆ ಬಾಯ್‌ಫ್ರೆಂಡ್‌ ಜೊತೆ ಜಾನ್ವಿ ಕಪೂರ್‌ ಬಂದಿದ್ದು ಇದಕ್ಕೇನಾ? ವೈರಲ್‌ ಆಗ್ತಿದೆ ʻಆʼ ಒಂದು ಫೋಟೋ ! title=

Janhvi Kapoor Visits Tirumala: ಬಾಲಿವುಡ್ ನಟಿ ಜಾನ್ವಿ ಕಪೂರ್ ತಿರುಮಲ ಶ್ರೀಗಳ ದರ್ಶನ ಪಡೆದರು. ಮಂಗಳವಾರ ಬೆಳಿಗ್ಗೆ ಜನಪ್ರಿಯ ಬಾಲಿವುಡ್ ನಟಿ ಜಾನ್ವಿ ಕಪೂರ್ ತಮ್ಮ ಗೆಳೆಯ ಶಿಖರ್ ಪಹ್ರಿಯಾ ಅವರೊಂದಿಗೆ ಸ್ವಾಮಿಗೆ ನಮನ ಸಲ್ಲಿಸಿದರು. ದರ್ಶನದ ನಂತರ ದೇವಸ್ಥಾನದ ರಂಗನಾಯಕ ಮಂಟಪದಲ್ಲಿ ವೈದಿಕರು ವೇದಾಶೀರ್ವಾದ ಮಾಡಿದರು. ದೇವಸ್ಥಾನದ ಅಧಿಕಾರಿಗಳು ರೇಷ್ಮೆ ವಸ್ತ್ರದಿಂದ ಸನ್ಮಾನಿಸಿ ಸ್ವಾಮಿಯ ತೀರ್ಥ ಪ್ರಸಾದವನ್ನು ನೀಡಿದರು.

ಇದನ್ನೂ ಓದಿ: ನಟಿ ಸುಧಾರಾಣಿ ಮಗಳು ಕೂಡ ಫೇಮಸ್‌ ಕಲಾವಿದೆ.. ದೇವಲೋಕದ ಅಪ್ಸರೆಯಂತಿರುವ ಚೆಲುವೆ ಇವರೇ ನೋಡಿ

ದೇವಸ್ಥಾನದ ಹೊರಗೆ ಕೂಡ ಅಭಿಮಾನಿಗಳು ಜಾನ್ವಿ ಕಪೂರ್ ಜೊತೆ ಸೆಲ್ಫಿ ತೆಗೆದುಕೊಂಡರು. ಪ್ರತಿ ಚಿತ್ರ ಬಿಡುಗಡೆಗೂ ಮುನ್ನ ಜಾನ್ವಿ ಕಪೂರ್ ಶ್ರೀಗಳನ್ನು ಭೇಟಿ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಜಾನ್ವಿ ಕಪೂರ್ ತಾಯಿ ಬಾಲಿವುಡ್‌ ಸ್ಟಾರ್‌ ಶ್ರೀದೇವಿ ಜನ್ಮದಿನದ ಕಾರಣ ಜಾನ್ವಿ ಕಪೂರ್ ತಿರುಮಲಕ್ಕೆ ಬರುವುದೇ ಒಂದು ವಿಶೇಷ. ಸೋಮವಾರ ರಾತ್ರಿ ತನ್ನ ಬಾಯ್‌ಫ್ರೆಂಡ್‌ ಶಿಖರ್ ಪಹಾರಿಯಾ ಜೊತೆ ಜಾನ್ವಿ ಕಪೂರ್ ತಿರುಮಲ ತಲುಪಿ ಮಂಗಳವಾರ ಬೆಳಗ್ಗೆ ಸ್ವಾಮಿಯ ಸೇವೆಯಲ್ಲಿ ಪಾಲ್ಗೊಂಡರು. ಇದೀಗ ಜಾನ್ವಿ ಕಪೂರ್‌ ಮತ್ತು ಶಿಖರ್‌ ಒಟ್ಟಿಗೆ ತಿರಪತಿಗೆ ಭೇಟಿ ನೀಡಿದ ಫೋಟೋಗಳು ವೈರಲ್‌ ಆಗಿವೆ.

ತೆಲುಗಿನಲ್ಲಿ ಜ್ಯೂನಿಯರ್ ಎನ್ ಟಿಆರ್ ಜೊತೆ ದೇವರ ಚಿತ್ರದಲ್ಲಿ ನಾಯಕಿಯಾಗಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ಈ ಚಿತ್ರದ ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ಸಖತ್‌ ಸದ್ದು ಮಾಡುತ್ತಿವೆ.  

ಇದನ್ನೂ ಓದಿ: ಸಮಂತಾ ಫಸ್ಟ್ ಲವ್ ನಾಗ ಚೈತನ್ಯ ಅಲ್ಲ! ಸ್ಯಾಮ್ ಮೊದಲು ಪ್ರೀತಿಸಿದ್ದ ಈ ಖ್ಯಾತ ನಟ ಇನ್ನೂ ಮದುವೆನೇ ಆಗಿಲ್ಲ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News