Jawan: ಆಕ್ಷನ್ ಸೀನ್‌ನಲ್ಲಿ ಹಿಂದೆ ನಿಂತಿದ್ದ ಪ್ರಿಯಾಮಣಿ...ಈ ಕುರಿತು ಅಟ್ಲೀಗೆ ಶಾರುಖ್ ಮಾಡಿದ್ದ ತಾಕೀತು ಏನು ಗೊತ್ತಾ?

Priyamani Role in Jawan : ಕಾಲಿವುಡ್‌ನ ಖ್ಯಾತ ನಿರ್ದೇಶಕ ಅಟ್ಲೀ ಹಾಗೂ ಬಾಲಿವುಡ್‌ ನಟ ಶಾರುಖ್‌ ಖಾನ್‌ ಕಾಂಬಿನೇಷನ್‌ನಲ್ಲಿ ಮೂಡಿಬಂದ ಜವಾನ್‌ ಸಿನಿಮಾ ಸದ್ಯ ಭಾಕ್ಸಾಫಿಸ್‌ನಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ. ಚಿತ್ರದಲ್ಲಿ ಪ್ರತಿಯೊಂದು ಪಾತ್ರಕ್ಕೂ ಹೆಚ್ಚು ಮಹತ್ವ ನೀಡಲಾಗಿದ್ದು, ಇದೀಗ ಪ್ರಿಯಾಮಣಿ ಪಾತ್ರದ ಬಗ್ಗೆ ಚರ್ಚೆಯಾಗುತ್ತಿದೆ.   

Written by - Savita M B | Last Updated : Sep 12, 2023, 11:40 AM IST
  • ಅಟ್ಲೀ ಶಾರುಖ್‌ ಕಾಂಬಿನೇಷನ್‌ ಸಿನಿಮಾ
  • ಬಿಡುಗಡೆ ನಂತರವೂ ಹಾಟ್‌ ಟಾಪಿಕ್‌ ಆಗಿರುವ ಜವಾನ್‌ ಸಿನಿಮಾ
  • ಜವಾನ್‌ ಚಿತ್ರದಲ್ಲಿ ಪ್ರತಿಯೊಂದು ಪಾತ್ರಕ್ಕೂ ಹೆಚ್ಚು ಮಹತ್ವ ನೀಡಲಾಗಿದೆ.
Jawan: ಆಕ್ಷನ್ ಸೀನ್‌ನಲ್ಲಿ ಹಿಂದೆ ನಿಂತಿದ್ದ ಪ್ರಿಯಾಮಣಿ...ಈ ಕುರಿತು ಅಟ್ಲೀಗೆ ಶಾರುಖ್ ಮಾಡಿದ್ದ ತಾಕೀತು ಏನು ಗೊತ್ತಾ?  title=

Jawan : ಅಟ್ಲೀ ಕಾಲಿವುಡ್‌ನಲ್ಲಿ ಸಾಕಷ್ಟು ಹಿಟ್‌ ಸಿನಿಮಾಗಳನ್ನು ನೀದ್ದಾರೆ. ಅದೇ ರೀತಿ ಬಾಲಿವುಡ್‌ನಲ್ಲಿ ಶಾರುಖ್‌ ಸಾಕಷ್ಟು ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ಈ ಹಿಟ್‌ ಕಾಂಬಿನೇಷನ್‌ನಲ್ಲಿ ತಯಾರಾದ ಸಿನಿಮಾ ಸಹಜವಾಗಿಯೇ ಕುತೂಹಲ ಹೆಚ್ಚಿಸಿತ್ತು. ಸದ್ಯ ಸಿನಿಮಾ ರಿಲೀಸ್‌ ಆಗಿ ಭರ್ಜರಿಯಾಗಿ ಕಲೆಕ್ಷನ್‌ ಮಾಡುತ್ತಿದೆ. 

ಬಿಡುಗಡೆ ನಂತರವೂ ಹಾಟ್‌ ಟಾಪಿಕ್‌ ಆಗಿರುವ ಜವಾನ್‌ ಸಿನಿಮಾ ಬಗ್ಗೆ ಮತ್ತೊಂದು ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಹೌದು ಜವಾನ್‌ ಚಿತ್ರದಲ್ಲಿ ಪ್ರತಿಯೊಂದು ಪಾತ್ರಕ್ಕೂ ಹೆಚ್ಚು ಮಹತ್ವ ನೀಡಲಾಗಿದೆ. ಅಲ್ಲದೇ ಈ ಚಿತ್ರ ಎರಡು ಕಾಲಘಟ್ಟದಲ್ಲಿ ನಡೆಯುವುರಿಂದ ಶಾರುಖ್‌ ಡಬಲ್‌ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರವರ್ಗದಿಂದ ಗಮನ ಸೆಳೆದ ಈ ಸಿನಿಮಾದಲ್ಲಿ ಪ್ರಿಯಾಮಣಿ ಸಹ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ-Kaatera : ಇವರು ಸಿನಿಮಾ ಮಾಡುವಾಗ ನಾನು ಲೈಟ್ ಬಾಯ್ ಆಗಿದ್ದೆ - ನಟ ದರ್ಶನ್‌

ಜವಾನ್‌ ಚಿತ್ರದಲ್ಲಿ ಪ್ರಿಯಾಮಣಿ ಪಾತ್ರ ಏನು? 
ಬಹುಭಾಷಾ ನಟಿ ಪ್ರಿಯಾಮಣಿ ಶಾರುಖ್ ಖಾನ್ ಜೊತೆ ಆಕ್ಷನ್ ಸೀನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಇದು ಪ್ರೇಕ್ಷಕರ ಗಮನಸೆಳೆದಿದ್ದು, ಅದು ಅಷ್ಟಾಗಿ ಮುಖ್ಯ ಪಾತ್ರವಲ್ಲವಾದರೂ ಹಲವು ಸನ್ನಿವೇಶಗಳಲ್ಲಿ ಪ್ರಿಯಾಮಣಿ ಶಾರುಖ್‌ ಜೊತೆ ಕಾಣಿಸಿಕೊಂಡಿದ್ದಾರೆ. 

ಇನ್ನು ಈ ಚಿತ್ರದ ಒಂದು ಸಾಂಗ್‌ ಶೂಟಿಂಗ್‌ ವೇಳೆ ನಡೆದ ಸನ್ನಿವೇಶವೊಂದನ್ನು ಪ್ರಿಯಾಮಣಿ ಇತ್ತೀಚೆಗೆ ತಾವು ಭಾಗವಹಿಸಿದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಸರತಿ ಸಾಲಿನಲ್ಲಿ ಹಿಂದೆ ನಿಂತಿದ್ದ ಪ್ರಿಯಾಮಣಿ ಅವರನ್ನು ಶಾರುಖ್‌ ನೋಡಿ  "ಹಿಂದೆ ನಿಂತು ಏನು ಮಾಡುತ್ತಿದ್ದೀರಾ?" ಎಂದು ಪ್ರಶ್ನಿಸಿದ್ದರಂತೆ.. ಆಗ ಪ್ರಿಯಾಮಣಿ "ನನಗೆ ಗೊತ್ತಿಲ್ಲ ಸರ್" ಎನ್ನುತ್ತಾರೆ. ನಂತರ ಶಾರುಖ್‌ "ಯಾವುದೇ ಸ್ಟೆಪ್ಸ್‌ ಇರಲಿ ಪ್ರಿಯಾಮಣಿ ನನ್ನ ಪಕ್ಕದಲ್ಲೇ ನಿಲ್ಲಬೇಕು" ಎಂದು ನಿರ್ದೇಶಕ ಅಟ್ಲೀಗೆ ತಾಕೀತು ಮಾಡಿದ್ದನ್ನು ಪ್ರಿಯಾಮಣಿ ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ-Dhruva Sarja: ಅಣ್ಣನ ಸಮಾಧಿ ಬಳಿ ಪತ್ನಿಗೆ ಸೀಮಂತ ಶಾಸ್ತ್ರ ಮಾಡಿದ ಆಕ್ಷನ್‌ ಪ್ರಿನ್ಸ್...ಪೋಟೋಸ್‌ ನೋಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
  

 

Trending News