ಪಂಕಜ್‌ ತ್ರಿಪಾಠಿ ಜೊತೆ ಅಭಿನಯಿಸಲಿದ್ದಾರೆ ಬಾಂಗ್ಲದೇಶದ ನಟಿ: ಬಾಲಿವುಡ್‌ಗೆ ಎಂಟ್ರೀಯಾಗುತ್ತಿರುವ ಆ ನಟಿ ಯಾರು?

Kadak Singh: ಕಡಕ್‌ ಸಿಂಗ್‌ ಸಿನಿಮಾದಲ್ಲಿ ಪಂಕಜ್‌ ತ್ರಿಪಾಠಿ ಜೊತೆಗೆ ಬಾಂಗ್ಲಾದ ನಟಿ ಜಯಾ ಅಹ್ಸನ್‌ ಚಿತ್ರದಲ್ಲ್‌ ಅಭಿನಯಿಸುವ ಮೂಲಕ ಬಾಲಿವುಡ್‌ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.  

Written by - Zee Kannada News Desk | Last Updated : Dec 2, 2023, 01:09 PM IST
  • ನಟಿ ಜಯಾ ಅಹ್ಸನ್ ಪಂಕಜ್ ತ್ರಿಪಾಠಿಯೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ರೆಡಿಯಾಗಿದ್ದು, ಈಕೆ ಈಗಾಗಲೇ 110 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
  • ನಟಿ ಜಯಾ ಅಹ್ಸನ್ ನಂತರ ಚಿತ್ರರಂಗ ಪ್ರವೇಶಿಸಿ ಮತ್ತು ಅಭಿನಯದಿಂದ ಅಭಿಮಾನಿ ಬಳಗವನ್ನೇ ಹೊಂದಿದರು.
  • ಬಾಂಗ್ಲಾ ದೇಶದ ನಟಿ ಜಯಾ ಅಹ್ಸನ್, ಇದೀಗ ಪಂಕಜ್ ತ್ರಿಪಾಠಿಯೊಂದಿಗೆ ‘ಕಡಕ್ ಸಿಂಗ್’ ಚಿತ್ರದಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ.
ಪಂಕಜ್‌ ತ್ರಿಪಾಠಿ ಜೊತೆ ಅಭಿನಯಿಸಲಿದ್ದಾರೆ ಬಾಂಗ್ಲದೇಶದ ನಟಿ: ಬಾಲಿವುಡ್‌ಗೆ ಎಂಟ್ರೀಯಾಗುತ್ತಿರುವ ಆ ನಟಿ ಯಾರು? title=

Jaya Ahsan In Kadak Singh: ಇತ್ತೀಚೆಗೆ ಬಾಲಿವುಡ್‌ಗೆ ಅನೇಕ ಹೊಸ ನಟ-ನಟಿಯರು ಎಂಟ್ರಿ ಕೊಡಿತ್ತಿದ್ದು, ಕೆಲವರು ಬೇರೆ ಭಾಷೆಗಳಿಂದ ಸಹ ಬಂದು ಬಾಲಿವುಡ್‌ಗೆ ಹೆಜ್ಜೆಯಿಡುತ್ತಿದ್ದಾರೆ. ಈಗ ಮತ್ತೊಬ್ಬ ನಟಿ ಸಹ ‌ಬಾಲಿವುಡ್‌ಗೆ ಎಂಟ್ರಿ ಕೊಡಲು ಸಿದ್ದವಾಗಿದ್ದಾರೆ. ಈ ನಟಿ ಪಂಕಜ್ ತ್ರಿಪಾಠಿಯೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ರೆಡಿಯಾಗಿದ್ದು, ಈಕೆ ಈಗಾಗಲೇ 110 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇವರು ಬಾಂಗ್ಲಾದೇಶದ ನಟಿಯಾಗಿದ್ದು, ಹಲವಾರು ಭಾರತದ ಬಂಗಾಳಿ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.

ಬಾಂಗ್ಲಾದೇಶದ ಢಾಕಾದಲ್ಲಿ ಜನಿಸಿದ ಜಯಾ ಅಹ್ಸನ್, ರವೀಂದ್ರ ಸಂಗೀತದಲ್ಲಿ ಡಿಪ್ಲೊಮಾ ಹೊಂದಿರುವ ತರಬೇತಿ ಪಡೆದ ಶಾಸ್ತ್ರೀಯ ಗಾಯಕಿ ಸಹ ಆಗಿದ್ದಾರಂತೆ. ಜಯಾ ತಮ್ಮ ವೃತ್ತಿಜೀವನವನ್ನು ಮಾಡೆಲ್ ಆಗಿ ಪ್ರಾರಂಭಿಸಿದರಂತೆ ಮತ್ತು ನಂತರ ಶಾಹಿದುಲ್ ಹಕ್ ಖಾನ್ ಬರೆದ ಪಂಚೋಮಿ ಎಂಬ ತನ್ನ ಮೊದಲ ದೂರದರ್ಶನ ಕಾರ್ಯಕ್ರಮದೊಂದಿಗೆ ನಟನೆಗೆ ಕಾಲಿಟ್ಟರಂತೆ. ಈ ನಟಿ ಹಲವಾರು ಟಿವಿ ಸೀರಿಯಲ್‌ಗಳಲ್ಲಿಯೂ ಸಹ ಕೆಲಸ ಮಾಡಿದರು ಮತ್ತು ಅಭಿನಯದಿಂದ ತಮ್ಮ ಛಾಪು ಮೂಡಿಸಿದರು. ಈಕೆ ಕೆಲವು ಟಿವಿ ಕಾರ್ಯಕ್ರಮಗಳಲ್ಲಿ ಲ್ಯಾಬೊನಿಯೋ ಪ್ರೋಭಾ, ಶೋಂಖೋಬಾಶ್, ಹತ್ಕುರಾ ಮತ್ತು ಚೋಟಾ ಪಾಗೊ ಸೇರಿವೆ. 

 
 
 
 

 
 
 
 
 
 
 
 
 
 
 

A post shared by Jaya Ahsan (@jaya.ahsan)

ಇದನ್ನೂ ಓದಿ: Dunki Movie : ಶಾರುಖ್ ಖಾನ್ ಹಾಗೂ ಸ್ನೇಹಿತರ ಎಮೋಷನಲ್ ಪಯಣದ ಹಾಡು ನೋಡಿ

ನಟಿ ಜಯಾ ಅಹ್ಸನ್ ನಂತರ ಚಿತ್ರರಂಗ ಪ್ರವೇಶಿಸಿ ಮತ್ತು ಅಭಿನಯದಿಂದ ಅಭಿಮಾನಿ ಬಳಗವನ್ನೇ ಹೊಂದಿದರು. ಗೆರಿಲ್ಲಾ ಸಿನಿಮಾದ ಈ ನಟಿಯು ನಾಯಕಿಯಾಗಿ ನಟಿಸಿದ ಮೊದಲ ಚಲನಚಿತ್ರವಾಗಿತ್ತಂತೆ, ಇದಕ್ಕೆ ನಟಿ ಅತ್ಯುತ್ತಮ ನಟನೆಗಾಗಿ ಮೊದಲ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು. ಈ ನಟಿಗೆ ತಮ್ಮ ಎರಡನೇ ಚಿತ್ರ ಚೋರಬಲಿಗಾಗಿ ಅತ್ಯುತ್ತಮ ನಟನೆಗೆ ತಮ್ಮ ಎರಡನೇ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದರು, ಇದು ರೆಡೋನ್ ರೋನಿ ನಿರ್ದೇಶಿಸಿದ ಆಕ್ಷನ್ ಥ್ರಿಲ್ಲರ್ ಆಗಿತ್ತು. ಜಯಾ ನಟಿಸಿರುವ ಝೀರೋ ಡಿಗ್ರಿ, ಡೆಬಿ ಮತ್ತು ಬ್ಯೂಟಿ ಸರ್ಕಸ್ ಸೇರಿದಂತೆ ಕೆಲ ಚಿತ್ರಗಳು ರಾಷ್ಟ್ರೀಯ ಪ್ರಶಸ್ತಿಯನ್ನು ಸಹ ಗೆದ್ದಿವೆ.

 
 
 
 

 
 
 
 
 
 
 
 
 
 
 

A post shared by Jaya Ahsan (@jaya.ahsan)

ಬಾಂಗ್ಲಾ ದೇಶದ ನಟಿ ಜಯಾ ಅಹ್ಸನ್, ಇದೀಗ ಪಂಕಜ್ ತ್ರಿಪಾಠಿಯೊಂದಿಗೆ ‘ಕಡಕ್ ಸಿಂಗ್’ ಚಿತ್ರದಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದು, ಇದು ಈಕೆಯ ಮೊದಲ ಹಿಂದಿ ಚಿತ್ರ ಮತ್ತು ಅದರ ಬಗ್ಗೆ ಮಾತನಾಡುತ್ತಾ ನಟಿ "ಇದೊಂದು ವಿಶೇಷವಾದ ಕ್ಷಣವಾಗಿದೆ, ನಾನು ಇದನ್ನು ಎಂದಿಗೂ ಮರೆಯುವುದಿಲ್ಲ. ಈ ಹೊಸ ಪ್ರಯಾಣವನ್ನು ಪ್ರಾರಂಭಿಸಲು ನನಗೆ ತುಂಬಾನೇ ಸಂತೋಷವಾಗುತ್ತಿದೆ” ಎಂದು ಹೇಳಿದರು.ಕಡಕ್ ಸಿಂಗ್ ಒಂದು ಥ್ರಿಲ್ಲರ್ ಸಿನೆಮಾ ಆಗಿದ್ದು, ಅನಿರುದ್ಧ ರಾಯ್ ಚೌಧರಿ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರ ಡಿಸೆಂಬರ್ 8 ರಂದು ಝೀ 5 ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆಯಂತೆ.ಇತ್ತೀಚೆಗೆ ಚಿತ್ರತಂಡ ಈ ಸಿನಿಮಾದ ಕುತೂಹಲಕಾರಿ ಟ್ರೇಲರ್ ಬಿಡುಗಡೆ ಮಾಡಿದ್ದು, ಸದ್ಯ ಅಭಿಮಾನಿಗಳು ಈ ಚಿತ್ರವನ್ನು ದೊಡ್ಡ ಪರದೆಯ ಮೇಲೆ ನೋಡಲು ತುಂಬಾನೇ ಉತ್ಸುಕರಾಗಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News