ಮೋದಿ ತವರಲ್ಲಿ ಜಸ್ಟ್ ಪಾಸ್ ಹಾಡಿನ ಮೋಡಿ.. “ನೋಡಿದ ಕೂಡಲೇ” ಇಷ್ಟ ಪಡೋ ಸೂಪರ್ ಸಾಂಗ್!

Just Pass Movie Song: ಗುಜರಾತ್, ಸದ್ಯ ಇಡೀ ದೇಶದ ಗಮನ ಸೆಳೆದಿರೋ ಪ್ರಧಾನ ರಾಜ್ಯವಲ್ಲದೇ ಇಡೀ ಭಾರತದ ಆಡಳಿತ ಚುಕ್ಕಾಣಿ ಹಿಡಿದಿರೋ ಶ್ರೀ ನರೇಂದ್ರ ಮೋದಿಯವರ ತವರಿನ ಸಿರಿ. ಅಂಥ ಅದ್ಭುತ ನಾಡಲ್ಲಿ ಕನ್ನಡ ನಾಡಿನ ಹಾಡೊಂದರ ಚಿತ್ರೀಕರಣ ನಡೆದಿದೆ ಎಂದರೆ ನೀವು ನಂಬುತ್ತೀರಾ?!  

Written by - YASHODHA POOJARI | Edited by - Savita M B | Last Updated : Jan 13, 2024, 11:48 AM IST
  • ಸದ್ಯ ಯುವ ಜೀವಗಳ ಹೆಗಲು ಕುಣಿಸಲು ರೆಡಿ ಆಗಿರೋ ಕೆ.ಎಂ. ರಘು
  • ಕೆ.ಎಂ. ರಘು ನಿರ್ದೇಶನದ ಜಸ್ಟ್ ಪಾಸ್ ಚಿತ್ರದ ‘ನೋಡಿದ ಕೂಡಲೇ’ ಎನ್ನೋ ಹಾಡು
  • ಈ ಸುಮಧುರ ಹಾಡಿಗೆ ಯುವ ಸಂಗೀತ ನಿರ್ದೇಶಕ ಹರ್ಷವರ್ಧನ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ
ಮೋದಿ ತವರಲ್ಲಿ ಜಸ್ಟ್ ಪಾಸ್ ಹಾಡಿನ ಮೋಡಿ.. “ನೋಡಿದ ಕೂಡಲೇ” ಇಷ್ಟ ಪಡೋ ಸೂಪರ್ ಸಾಂಗ್! title=

Just Pass Movie: ಸದ್ಯ ಯುವ ಜೀವಗಳ ಹೆಗಲು ಕುಣಿಸಲು ರೆಡಿ ಆಗಿರೋ ಕೆ.ಎಂ. ರಘು ನಿರ್ದೇಶನದ ಜಸ್ಟ್ ಪಾಸ್ ಚಿತ್ರದ ‘ನೋಡಿದ ಕೂಡಲೇ’ ಎನ್ನೋ ಹಾಡನ್ನು ಅದೇ ಗುಜರಾತ್‌ನಲ್ಲಿ ಶೂಟ್ ಮಾಡಲಾಗಿದೆ. ಅಲ್ಲಿನ ರನ್ ಆಫ್ ಕಚ್, ಕಾಡಿಯಾದ್ರಿಯೋ, ಮಾಂಡ್ವಿ ಬೀಚ್ ಸೇರಿದಂತೇ ಸಾಕಷ್ಟು ರಮ್ಯ ರಮಣೀಯ ನ್ಯಾಚುರಲ್ ಜಾಗಗಳಲ್ಲಿ ಚಿತ್ರೀಕರಣ ನಡೆಸಲಾಗುತ್ತಿದೆ.. 

ಈ ಸುಮಧುರ ಹಾಡಿಗೆ ಯುವ ಸಂಗೀತ ನಿರ್ದೇಶಕ ಹರ್ಷವರ್ಧನ್ ರಾಜ್ ಸಂಗೀತ  ಸಂಯೋಜನೆ ಮಾಡಿದ್ದು, ಕಲರ್‌ಫುಲ್ ಗಾಯಕ ಕಾರ್ತಿಕ್ ದನಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ತನ್ನದೇ ಆದ ವಿಭಿನ್ನ ಶೈಲಿಯ ಮೂಲಕ ಹೆಸರು ಮಾಡಿರುವ ಡ್ಯಾನ್ಸ್ ಮಾಸ್ಟರ್ ಭೂಷಣ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಸುಜಯ್ ಕುಮಾರ್ ಕ್ಯಾಮೆರಾ ಕೈಚಳಕದಲ್ಲಿ ಅದ್ಭುತ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಕಾಂತಾರ ಖ್ಯಾತಿಯ ಗೀತ ರಚನೆಕಾರ ಪ್ರಮೋದ್ ಮರವಂತೆ ತುಂಬಾ ಚೆನ್ನಾಗಿ ಸಾಹಿತ್ಯ ಬರೆದಿದ್ದಾರೆ.. 

ಇದನ್ನೂ ಓದಿ-ಸಿಲಿಕಾನ್ ಸಿಟಿಯಲ್ಲಿ ಅದ್ದೂರಿಯಾಗಿ ಸಾಗಿದೆ ಮಲ್ಟಿಸ್ಟಾರರ್ ಸಿನಿಮಾ "45" ಚಿತ್ರೀಕರಣ!

ಜಸ್ಟ್ ಪಾಸ್ ಚಿತ್ರವನ್ನ ರಾಯ್ಸ್ ಎಂಟರ್‌ಟೈನ್‌ಮೆಂಟ್‌ ಬ್ಯಾನರ್ ಅಡಿಯಲ್ಲಿ ಕೆ.ವಿ.ಶಶಿಧರ್ ನಿರ್ಮಾಣ ಮಾಡಿದ್ದು, ಕಾಂತಾರ, ಕಾಟೇರ ಮೊದಲಾದ ಯಶಸ್ವೀ ಚಿತ್ರಗಳ ಸಂಕಲನಕಾರ ಕೆ.ಎಂ. ಪ್ರಕಾಶ್ ಈ ಚಿತ್ರಕ್ಕೆ ಕತ್ತರಿ ಆಡಿಸಿದ್ದಾರೆ. 

ಕಲಾವಿದರಾದ ಶ್ರೀ ಹಾಗೂ ಪ್ರಣತಿ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ರಂಗಾಯಣ ರಘು, ಸಾಧುಕೋಕಿಲಾ, ಸುಚೇಂದ್ರ ಪ್ರಸಾದ್, ಪ್ರಕಾಶ್ ತುಮಿನಾಡು, ದೀಪಕ್ ರೈ, ಗೋವಿಂದೇಗೌಡ, ದಾನಪ್ಪ ಸೇರಿದಂತೇ ಸಾಕಷ್ಟು ಪೋಷಕ ನಟರು ಜಸ್ಟ್ ಪಾಸ್ ಚಿತ್ರದ ಫಸ್ಟ್ ಕ್ಲಾಸ್ ತಾರಬಳಗದಲ್ಲಿದ್ದಾರೆ. ಫೆಬ್ರವರಿ ಮೊದಲ ವಾರದಲ್ಲಿ ಜಸ್ಟ್ ಪಾಸ್ ಚಿತ್ರ ರಾಜ್ಯಾದ್ಯಂತ ತೆರೆ ಕಾಣಲಿದ್ದು, ಈಗಾಗಲೇ ಚಿತ್ರದ ಟೀಸರ್ ಸಾಕಷ್ಟು ಸದ್ದು ಮಾಡಿ, ಯುವಕರಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದೆ.

ಇದನ್ನೂ ಓದಿ-ಮೈಕೆಲ್ ಜಾಕ್ಸನ್ ಒಂದು ಕೈಯಲ್ಲಿ ಗ್ಲೌಸ್ ಧರಿಸಿದ್ದು ಯಾಕೆ ಗೊತ್ತಾ..?? ಇದು ಸ್ಟೈಲ್ ಅಲ್ಲವೇ ಅಲ್ಲ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News