ಕೈವ ಅಸಲಿ‌ ಲುಕ್ಕಿಗೂ ಮುನ್ನ, ಫಸ್ಟ್ ಲುಕ್ಕಿಗೊಂದು 'ಗೆಸ್' ಲುಕ್ ಪೋಸ್ಟರ್

ಕೈವ 1983 ಅನ್ನೋ ಟ್ಯಾಗ್ ಕೊಟ್ಟಿರೋ ಈ ಚಿತ್ರದ ಟೈಟಲ್ ಹಾಗೂ ಪೋಸ್ಟರ್ ಥೀಮ್ ಇಂಟ್ರೆಸ್ಟಿಂಗ್ ಆಗಿ ಕಾಣ್ತಿದೆ. ಕೊಕ್ಕೆ ಹಿಡಿದಿರೋ ಕೈಗಳು ರಕ್ತಸಿಕ್ತವಾಗಿ ಕಾಣ್ತಿರೋ ಈ ಪೋಸ್ಟರ್ ನಾನಾ ಕಥೆಗಳನ್ನ ಹೇಳ್ತಿದೆ. 

Written by - YASHODHA POOJARI | Edited by - Ranjitha R K | Last Updated : Sep 1, 2022, 11:51 AM IST
  • ಹಲವು ಪ್ರಶ್ನೆಗಳನ್ನ ಹುಟ್ಟಿಸಿದ ಕೈವ ಗೆಸ್ ಲುಕ್
  • ಸೆ.8 ಧನ್ವೀರ್ ಹುಟ್ಟುಹಬ್ಬಕ್ಕೆ ಫಸ್ಟ್ ಲುಕ್ ಪೋಸ್ಟರ್
  • ಕೈವ ಜಯತೀರ್ಥ ನಿರ್ದೇಶನದ ಸಿನಿಮಾ.
ಕೈವ ಅಸಲಿ‌ ಲುಕ್ಕಿಗೂ ಮುನ್ನ, ಫಸ್ಟ್ ಲುಕ್ಕಿಗೊಂದು 'ಗೆಸ್' ಲುಕ್ ಪೋಸ್ಟರ್  title=
Kiava poster release

ಬೆಂಗಳೂರು : ಕೈವ.. ಜಯತೀರ್ಥ ನಿರ್ದೇಶನದ ಸಿನಿಮಾ. ಧನ್ವೀರ್ ನಾಯಕ ನಟನಾಗಿ ಅಭಿನಯಿಸ್ತಿರೋ ಚಿತ್ರ. ಅಭುವನಸ ಕ್ರಿಯೇಷನ್ಸ್ ಬ್ಯಾನರ್ ನಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗ್ತಿದೆ. ಗಣೇಶ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಿರೋ  ಗೆಸ್ ಲುಕ್, ಚಿತ್ರದ‌ ಮೇಲೆ‌ ವಿಶೇಷ ಕುತೂಹಲ‌ ಹುಟ್ಟಿಸ್ತಿದೆ.

ಹಲವು ಪ್ರಶ್ನೆಗಳನ್ನ ಹುಟ್ಟಿಸಿದ ಕೈವ ಗೆಸ್ ಲುಕ್ :
ಕೈವ 1983 ಅನ್ನೋ ಟ್ಯಾಗ್ ಕೊಟ್ಟಿರೋ ಈ ಚಿತ್ರದ ಟೈಟಲ್ ಹಾಗೂ ಪೋಸ್ಟರ್ ಥೀಮ್ ಇಂಟ್ರೆಸ್ಟಿಂಗ್ ಆಗಿ ಕಾಣ್ತಿದೆ. ಕೊಕ್ಕೆ ಹಿಡಿದಿರೋ ಕೈಗಳು ರಕ್ತಸಿಕ್ತವಾಗಿ ಕಾಣ್ತಿರೋ ಈ ಪೋಸ್ಟರ್ ನಾನಾ ಕಥೆಗಳನ್ನ ಹೇಳ್ತಿದೆ. ಈ ಚಿತ್ರ ನೈಜ ಘಟನೆಗಳನ್ನಾಧಿರಿಸಿದ ಸಿನಿಮಾ ಎಂದು ಕೈವ ಟೀಮ್‌ ಹೇಳ್ತಿದೆ. ಫಸ್ಟ್ ಲುಕ್ ಪೋಸ್ಟರ್ ಗಿದು  ಗೆಸ್‌ಲುಕ್ ಅಂತ ಬಿಟ್ಟು ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ. 

ಇದನ್ನೂ ಓದಿ : ಶಶಿಕುಮಾರ್ ಪುತ್ರ ಅಕ್ಷಿತ್ ಸಿನಿಮಾಗೆ ಡಾಲಿ ಧನಂಜಯ್ ಸಾಥ್...!

ಸೆ.8 ಧನ್ವೀರ್ ಹುಟ್ಟುಹಬ್ಬಕ್ಕೆ ಫಸ್ಟ್ ಲುಕ್ ಪೋಸ್ಟರ್  :
ಸೆಪ್ಟೆಂಬರ್ 8ನೇ ತಾರೀಕು  ನಾಯಕ ಧನ್ವೀರ್ ಹುಟ್ಟುಹಬ್ಬದ ಪ್ರಯುಕ್ತ ಕೈವನ ಅಸಲಿ ಲುಕ್ ರಿವೀಲ್ ಆಗಲಿದೆ. ಅಂದ್ರೆ ಕೈವ ಚಿತ್ರದ ಅಫೀಶಿಯಲ್ ಫಸ್ಟ್ ಲುಕ್ ಪೋಸ್ಟರ್ ನ ರಿಲೀಸ್ ಮಾಡಲಾಗ್ತಿದೆ. ಅವತ್ತೇ ಈ ಗೆಸ್ ಪೋಸ್ಟರ್ ಹುಟ್ಟಿಸಿರೋ ಎಲ್ಲಾ ಕುತೂಹಲಕ್ಕೂ ಉತ್ತರ ಸಿಗಲಿದೆ.

ಇದನ್ನೂ ಓದಿ ಪ್ರೇಮ ಪುರಾಣದಲ್ಲಿ ಬಿದ್ದ ರಕ್ಕಮ್ಮ...! ಗಳಿಸಿದ್ದೆನೇನು ಗೊತ್ತೇ?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News