Kalki cienma digital rights: ಕಲ್ಕಿ ಚಿತ್ರದ ಒಟಿಟಿ ಹಕ್ಕುಗಳನ್ನು ಅಮೇಜಾನ್ ಪ್ರೈಮ್ ವಿಡೀಯೋ ಸ್ವಾಧೀನಪಡಿಸಿಕೊಂಡಿದೆ. ಎಂಟು ವಾರಗಳ ನಂತರ ಈ ಚಿತ್ರ ಒಟಿಟಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ವರದಿಯಾಗಿದೆ. ಕಲ್ಕಿ 2898 ಎಡಿ(Kalki 2898 AD) ಚಿತ್ರ ಅಮೆಜಾನ್ ಪ್ರೈಮ್(Amazon Prime) ನಲ್ಲಿ ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.
ಪ್ರಭಾಸ್ ಕಲ್ಕಿ ಚಿತ್ರ ಗುರವಾರ, ಜೂನ್ 27 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ನಿರ್ದೇಶಕ ನಾಗ್ ಅಶ್ವಿನ್(Nag Ashwin) ಪುರಾಣ ಆಧರಿತ ಕಥೆಗೆ ಆಕ್ಷನ್ ಕಟ್ ಹೇಳಿದ್ದಾರೆ. ಪ್ರಭಾಸ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಕಮಲ್ ಹಾಸನ್(Kamal Hassan) ಖಳನಾಯಕನಾಗಿ ಕಾಣಿಸಿಕೊಂಡರೆ. ದಿಶಾ ಪಟಾನಿ(Disha Patani), ಅಮಿತಾಭ್ ಬಚ್ಚನ್(Amithab Bacchan), ದೀಪಿಕಾ ಪಡುಕೋಣೇ(Deepika Padukone) ಸೇರಿ ದೊಡ್ಡ ಸ್ಟಾರ್ ತಾರಾ ಬಣವೇ ಇದೆ.
ಸುಮಾರು 600 ಕೋಟಿ ವೆಚ್ಚದಲ್ಲಿ ಈ ಸಿನಿಮಾ ಮೂಡಿಬಂದಿದೆ. ಇಂದು ರಿಲೀಸ್ ಆಗಿರುವ ಕಲ್ಕಿ ಚಿತ್ರ ಮೊದಲ ದಿನವೇ 100 ಕೋಟಿಗೂ ಹೆಚ್ಚು ಗಳಿಕೆ ಮಾಡುವ ಸಾಧ್ಯತೆ ಇದೆ ಎಂದು ಟಾಲಿವುಡ್ ವಲಯಗಳಲ್ಲಿ ಅಂದಾಜಿಸಲಾಗಿದೆ.
ಇದೀಗ ಕೇಳಿ ಬರುತ್ತಿರುವ ಸುದ್ದಿಗಳ ಪ್ರಕಾರ ಅಮೆಜಾನ್ ಪ್ರೈಮ್ ವಿಡಿಯೋ ಕಲ್ಕಿ ಚಿತ್ರದ ಓಟಿಟಿ ಹಕ್ಕುಗಳನ್ನು ಪಡೆದುಕೊಂಡಿದೆ. ಕಲ್ಕಿಯ ಡಿಜಿಟಲ್ ಸ್ಟ್ರೀಮಿಂಗ್ ಅಮೆಜಾನ್‌ನಲ್ಲಿ ನಡೆಯಲಿದೆ ಎಂದು ಚಿತ್ರತಂಡವು ಟೈಟಲ್ ಕಾರ್ಡ್‌ನಲ್ಲಿ ಪ್ರಕಟಿಸಿದೆ. ಭಾರೀ ಪೈಪೋಟಿಯ ನಡುವೆಯೇ ಅಮೆಜಾನ್ ಪ್ರೈಮ್ ಸುಮಾರು 150 ಕೋಟಿಗೆ ಈ ಚಿತ್ರದ ಓಟಿಟಿ(OTT) ಹಕ್ಕುಗಳನ್ನು ಪಡೆದುಕೊಂಡಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಕಲ್ಕಿ 2898 ಎಡಿ ಸಿನಿಮಾದಲ್ಲಿ ಈ 5 ಸ್ಟಾರ್‌ಗಳ ಗೆಸ್ಟ್ ರೋಲ್.. ರಾಮ್‌ಗೋಪಾಲ್ ವರ್ಮಾ ಪಾತ್ರವಂತೂ ಅದ್ಭುತ ಎಂದ ಫ್ಯಾನ್ಸ್!!
ಕಲ್ಕಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಎಂಟು ವಾರಗಳ ನಂತರ ಓಟಿಟಿ(OTT)ಯಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಆಗಸ್ಟ್ ಅಂತ್ಯಕ್ಕೆ ಒಟಿಟಿಯಲ್ಲಿ ಕಲ್ಕಿ ಸಿನಿಮಾ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆದೆ. ಈ ಚಿತ್ರದ ಓಟಿಟಿ( OTT) ಬಿಡುಗಡೆ ದಿನಾಂಕವನ್ನು ಆಗಸ್ಟ್‌ನಲ್ಲಿಯೇ ಬಹಿರಂಗ ಪಡಿಸಲಾಗುವುದು ಎಂದು ವರದಿಗಳ ಮೂಲಕ ತಿಳಿದು ಬಂದಿದೆ.
ಮಹಾಭಾರತಕ್ಕೆ ವೈಜ್ಞಾನಿಕ ಕಾಲ್ಪನಿಕ ಅಂಶಗಳನ್ನು ಸೇರಿಸಿ ನಿರ್ದೇಶಕ ನಾಗ್ ಅಶ್ವಿನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕಮಲ್ ಹಾಸನ್ ಈ ಚಿತ್ರದಲ್ಲಿ ಸುಪ್ರೀಂ ಯಶ್ಕಿನ್ ಪಾತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ . ಅಶ್ವತ್ಥಾಮನಾಗಿ ಅಮಿತಾಭ್ ಬ್ಬಚ್ಚನ್ ನಟಿಸಿದ್ದಾರೆ. ಯುವ ನಾಯಕರಾದ ದುಲ್ಕರ್ ಸಲ್ಮಾನ್(Dulquar Salman) ಮತ್ತು ವಿಜಯ್ ದೇವರಕೊಂಡ(Vijay Devarakonda), ಟಾಲಿವುಡ್ ನಿರ್ದೇಶಕರಾದ ಆರ್‌ಜಿವಿ(RGV) ಮತ್ತು ರಾಜಮೌಳಿ(Rajamouli) ಕಲ್ಕಿ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೃಣಾಲ್ ಠಾಕೂರ್, ಅನ್ನಾಬೆನ್, ಶೋಭನಾ, ರಾಜೇಂದ್ರಪ್ರಸಾದ್, ಪಶುಪತಿ ಮತ್ತು ಅನೇಕ ತೆಲುಗು ಮತ್ತು ತಮಿಳು ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನೂ ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ ಸುಮಾರು 600 ಕೋಟಿ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಿಸಿಲಾಗಿದ್ದು, ಈ ಚಿತ್ರಕ್ಕೆ ಸಂತೋಷ್ ನಾರಾಯಣನ್ ಸಂಗೀತ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.