ದಿ.ಜಯಲಲಿತಾ ರೀತಿ ಕಾಣಿಸಿಕೊಳ್ಳಲು ಕಂಗನಾ ಮಾಡಿದ್ದಾಳೆ ಈ ಕೆಲಸ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜೆ.ಜಯಲಲಿತಾ ಅವರ 72ನೇ ಜಯಂತಿಯ ಅಂಗವಾಗಿ ತಮ್ಮ ಮುಂಬರುವ ಚಿತ್ರ 'ಥಲೈವಿ'ಯ ಲುಕ್ ಅನ್ನು ಕಂಗನಾ ರಣಾವತ್ ಹಂಚಿಕೊಂಡಿದ್ದಾರೆ. ಅವರ ಈ ಅವತಾರಕ್ಕೆ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Updated: Feb 24, 2020 , 04:34 PM IST
ದಿ.ಜಯಲಲಿತಾ ರೀತಿ ಕಾಣಿಸಿಕೊಳ್ಳಲು ಕಂಗನಾ ಮಾಡಿದ್ದಾಳೆ ಈ ಕೆಲಸ

ನವದೆಹಲಿ: ಖ್ಯಾತ ರಾಜಕೀಯ ಮುಖಂಡೆಯಾಗಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ 72ನೇ ಜಯಂತಿಯ ಅಂಗವಾಗಿ ತಮ್ಮ ಮುಂಬರುವ ಚಿತ್ರ 'ಥಲೈವಿ'ಯ ಲುಕ್ ಅನ್ನು ಕಂಗನಾ ರಣಾವತ್ ಹಂಚಿಕೊಂಡಿದ್ದಾರೆ. ಅವರ ಈ ಅವತಾರಕ್ಕೆ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಚಿತ್ರ ಜಯಲಲಿತಾ ಅವರ ಜೀವನಾಧಾರಿತ ಕಥಾಹಂದರ ಹೊಂದಿದ್ದು, ಇದರಲ್ಲಿ ಕಂಗನಾ ಜಯಲಲಿತಾ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೋಮವಾರ ಬೆಳಗ್ಗೆ ಚಿತ್ರದ ನಿರ್ಮಾಪಕರು ಚಿತ್ರದ ಮೊದಲ ನೋಟವನ್ನು ಬಿಡುಗಡೆಗೊಳಿಸಿದ್ದಾರೆ. ಈ ಮೊದಲ ನೋಟದಲ್ಲಿ ಚಿತ್ರದಲ್ಲಿ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಕಂಗನಾ, ಜಯಲಲಿತಾ ಅವರ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೊದಲ ನೋಟದಲ್ಲಿ ಕಂಗನಾ ಬಿಳಿ ಬಣ್ಣದ ಸೇರಿ ತೊಟ್ಟಿದ್ದು, ಕೆಂಪು ಬಣ್ಣದ ಬಿಂದಿ ಹಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಅವರ ಮುಖದ ಮೇಲೆ ಒಂದು ಸುಂದರ ಮುಗುಳುನಗೆ ಕೂಡ ಇದೆ. ಈ ಭಾವಚಿತ್ರದಲ್ಲಿ ಕಂಗನಾ ಡಿಟ್ಟೋ ಜಯಲಲಿತಾ ರೀತಿಯೇ ಕಂಡುಬಂದಿದ್ದಾರೆ. ಕಂಗನಾ ರಣಾವತ್ ತಂಡ ಕೂಡ ಈ ಭಾವಚಿತ್ರವನ್ನು ಹಂಚಿಕೊಂಡಿದೆ.

ಈ ಚಿತ್ರದ ಕಥೆ ಜೆ.ಜಯಲಲಿತಾ ಅವರ ಜೀವನವನ್ನು ಆಧರಿಸಿದ್ದು, ಜಯಲಲಿತಾ ಅವರ ಜೀವನದ ಹಲವು ಪ್ರಮುಖ ಘಟ್ಟಗಳ ಮೇಲೆ ಈ ಚಿತ್ರ ಬೆಳಕು ಚೆಲ್ಲಲಿದೆ ಎನ್ನಲಾಗಿದೆ. ಈ ಪ್ರಮುಖ ಘಟ್ಟಗಳ ಕುರಿತು ಜನರಿಗೆ ತುಂಬಾ ಕಡಿಮೆ ತಿಳಿದಿದೆ ಎನ್ನಲಾಗಿದೆ.

ಚಿತ್ರ ತಯಾರಕರು ಜಯಲಲಿತಾ ಅವರ 72ನೇ ಜಯಂತಿಯ ಅಂಗವಾಗಿ ಈ ಜಯಲಲಿತಾ ಅವರ ಭಾವಚಿತ್ರ ಕೂಡ ಹಂಚಿಕೊಂಡಿದೆ. ಜೊತೆಗೆ 72 ಜಯಂತಿಯ ಅಂಗವಾಗಿ ಸೂಪರ್ ಲೇಡಿ ಜೆ.ಜಯಲಲಿತಾ ಅವರ ನೆನಪಿನಲ್ಲಿ ಎಂಬ ಕ್ಯಾಪ್ಶನ್ ಕೂಡ ಬರೆದುಕೊಂಡಿದ್ದಾರೆ. ಜಯಲಲಿತಾ ಅವರಲ್ಲಿ ಮುಂದಾಳತ್ವ ವಹಿಸುವ ಅಪಾರ ಕ್ಷಮತೆ ಇತ್ತು. ಜಯಲಲಿತಾ ಅವರ ಅಭಿಮಾನಿಗಳಲಿ ಕಂಗನಾ ಕೂಡಾ ಒಬ್ಬರಾಗಿದ್ದು, ಜಯಲಲಿತಾ ಅವರ ಮಾರ್ಗದರ್ಶನ ಅನುಸರಿಸುತ್ತಾರೆ. ಎಲ್ಲರೂ ಅವರನ್ನು ಪ್ರೀತಿಯಿಂದ ಜಯಾ ಅಮ್ಮಾ ಎಂದು ಕರೆಯುತ್ತಾರೆ.

'ಥಲೈವಿ' ಚಿತ್ರದ ಮೊದಲ ನೋಟ ಕಳೆದ ವರ್ಷ ನವೆಂಬರ್ ನಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈ ವರ್ಷದ ಜನವರಿಯಲ್ಲಿಯೂ ಕೂಡ ಈ ಚಿತ್ರದ ಇನ್ನೊಂದು ಪೋಸ್ಟರ್ ಬಿಡುಗಡೆಗೊಂಡಿತ್ತು. ಕಳೆದ ವರ್ಷ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕಂಗನಾ, ಚಿತ್ರದಲ್ಲಿ ಜಯಲಲಿತಾ ಅವರಂತೆ ಕಾಣಿಸಿಕೊಳ್ಳಲು ತಾವು ಹಾರ್ಮೋನ್ ಪಿಲ್ಲ್ಸ್ ಸೇವಿಸಿರುವುದಾಗಿ  ಹೇಳಿಕೊಂಡಿದ್ದರು. ಈ ಕುರಿತು ಮಾತನಾಡಿದ್ದ ಅವರು ನಾನು ನೋಡಲು ತುಂಬಾ ತೆಳ್ಳಗಾಗಿದ್ದು, ಗೋಲಾಕಾರದ ಮುಖ ಹೊಂದಿರದ ಕಾರಣ ಪಿಲ್ಸ್ ಸೇವಿಸಿ, ತೂಕ ಹೆಚ್ಚಳಕ್ಕೆ ತೂಕ ಹೆಚ್ಚಿಸುವ ಆಹಾರ ಕೂಡ ಸೇವಿಸಿರುವುದಾಗಿ ಹೇಳಿದ್ದರು. ಬರುವ ಜೂನ್ 26ರಂದು ಈ ಚಿತ್ರ ಹಿಂದಿ, ತಮಿಳು ಹಾಗೂ ತೆಲಗೂ ಭಾಷೆಗಳಲ್ಲಿ ಮೂಡಿ ಬರಲಿದೆ.