ಸಿನಿಪ್ರಿಯರನ್ನು ಮೋಡಿಮಾಡಿದ ರ್‍ಯಾಂಬೋ-2 ಚಿತ್ರದ 'ಏ ಹುಡುಗಿ ಯಾಕಿಂಗಾಡ್ತಿ' ಸಾಂಗ್

 ಶರಣ್ ಅಭಿನಯದ 'ರ‍್ಯಾಂಬೋ-2' ಚಿತ್ರದ ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಫೇಮಸ್ ಆಗಿವೆ. 

Last Updated : Mar 30, 2018, 01:47 PM IST
ಸಿನಿಪ್ರಿಯರನ್ನು ಮೋಡಿಮಾಡಿದ ರ್‍ಯಾಂಬೋ-2 ಚಿತ್ರದ 'ಏ ಹುಡುಗಿ ಯಾಕಿಂಗಾಡ್ತಿ' ಸಾಂಗ್ title=

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ನಟನೆಯೊಂದಿಗೆ ಗುರುತಿಸಿಕೊಂಡಿರುವ ಶರಣ್ ಅಭಿನಯದ 'ರ‍್ಯಾಂಬೋ' ಚಿತ್ರ ಸಾಕಷ್ಟು ಹೆಸರುಮಾಡಿದ್ದು ಎಲ್ಲರಿಗೂ ಗೊತ್ತಿರೋ ವಿಚಾರ. ಆದರೆ ಈಗ ಅದೇ ಚಿತ್ರದ ಮುಂದುವರಿದ ಭಾಗವಾಗಿ ಶರಣ್ ಅಭಿನಯಿಸುತ್ತಿರುವ 'ರ‍್ಯಾಂಬೋ-2' ಚಿತ್ರದ ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಫೇಮಸ್ ಆಗಿವೆ. 

ತರುಣ್‌ ಸುಧೀರ್‌ ಚಿತ್ರಕಥೆ, ಅನಿಲ್ ಕುಮಾರ್ ನಿರ್ದೆಶನದ ಈ ಸಿನಿಮಾದಲ್ಲಿ ಶರಣ್ ಮತ್ತು ಆಶಿಕಾ ರಂಗನಾಥ್ ಮುಖ್ಯಭೂಮಿಕೆಯ 'ಚುಟು ಚುಟು ಎನ್ನುತೈತಿ...' ಎಂಬ ಹಾಡನ್ನು ಯೂ ಟ್ಯೂಬ್'ನಲ್ಲಿ 11ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. 

ಈ ಹಾಡಿನಲ್ಲಿ 'ಏ ಹುಡುಗಿ ಯಾಕಿಂಗಾಡ್ತಿ...ಮಾತಲ್ಲೇ ಮಳ್ಳು ಮಾಡ್ತಿ' ಅಂತ ಶರಣ್, ಆಶಿಕಾ ಜೊತೆ ಸೂಪರ್ ಆಗಿ ಸ್ಟಫ್ ಹಾಕಿದ್ದಾರೆ. ಅಷ್ಟೇ ಅಲ್ಲ, ಇದೊಂದು ಸೂಪರ್ ಕಲರ್ ಫುಲ್ ಸಾಂಗ್ ಕೂಡ ಹೌದು. ಯಾವ ಬಾಲಿವುಡ್, ಟಾಲಿವುಡ್'ಗೂ ಕಡಿಮೆ ಇಲ್ಲ ಅನ್ನೂ ರೀತಿಯಲ್ಲಿ ಸೆಟ್ ಹಾಕಿ, ಸ್ಟೆಪ್ ಹಾಕಿ, ಕಾಸ್ಟ್ಯೂಮ್ ಹಾಕಿ ಕೊರಿಯೋಗ್ರಫಿ ಮಾಡಿರೋ ಈ ಸಾಂಗ್ ಎಷ್ಟು ಸಾರಿ ನೋಡಿದರೂ ಮತ್ತೊಮ್ಮೆ ನೋಡಬೇಕು ಅನ್ನೂ ಹಾಗೆ ಮಾಡುತ್ತೆ. ಒಂದು ರೀತಿಯಲ್ಲಿ ಈ ಹಾಡು ವೀಕ್ಷಕರ ಕಣ್ಣಿಗೆ ಹಬ್ಬ ಇದ್ದಂತೆ ಅಂತಾನೇ ಹೇಳಬಹುದು. 

ಕೊರಿಯೋಗ್ರಾಫರ್​​ ಭೂಷಣ್​ ಈ ಹಾಡಿಗೆ ಕೊರಿಯೋಗ್ರಾಫ್​ ಮಾಡಿದ್ದಾರೆ. ಅರ್ಜುನ್​ ಜನ್ಯಾ ಮ್ಯೂಸಿಕ್​ ಕಂಪೋಸ್​ ಮಾಡಿರೋ ಈ ಹಾಡಿಗೆ ಶಿವು ಬೆರ್ಗಿ ಲಿರಿಕ್ಸ್​ ಬರೆದಿದ್ದಾರೆ. ಶಮಿತಾ ಮಲ್ನಾಡ್ ಮತ್ತು ರವೀಂದ್ರ ಸೊರ್ಗವಿ ಧ್ವನಿ ಈ ಹಾಡಿನ ಮೋಡಿಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಚಿತ್ರಕ್ಕೆ ಅನಿಲ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಸುಧಾಕರ್​ ಛಾಯಾಗ್ರಹಣ ಮಾಡಿದ್ದಾರೆ.

ಚಿತ್ರದ ನಾಯಕನನ್ನು ಪರಿಚಯಿಸುವ ಹಾಡಿನಲ್ಲಿ ಈ ಹಿಂದೆ ಶರಣ್ ಜೊತೆ ಅಭಿನಯಿಸಿದ್ದ ಶ್ರುತಿ ಹರಿಹರನ್, ಶುಭಾ ಪೂಂಜ, ಭಾವನಾ ರಾವ್, ಸಂಚಿತಾ ಪಡುಕೋಣೆ ಮತ್ತು ಮಯೂರಿ ಅತಿಥಿ ಕಲಾವಿದರಾಗಿ ಕಾಣಿಸಿಕೊಂಡಿದ್ದು, ಶರಣ್ ಜೊತೆ ಹೆಜ್ಜೆ ಹಾಕಿದ್ದಾರೆ. ಅಷ್ಟೇ ಅಲ್ಲ, ಈ ಚಿತ್ರದ ಪೋಸ್ಟರ್ಗಳೂ ಸಖತ್ ಫೇಮಸ್ ಆಗಿವೆ. ಶರಣ್ ಅಭಿನಯದ ಈ ಚಿತ್ರ ತುಂಬಾನೇ ಡಿಫರೆಂಟ್ ಆಗಿದ್ದು, ಮುಂದಿನ ತಿಂಗಳಿನಲ್ಲಿ ತೆರೆ ಕಾಣಲಿದೆ. 

Trending News