Tatsama Tadbhava: 100ಕ್ಕೂ ಅಧಿಕ ನಟ-ನಟಿಯರಿಂದ "ತತ್ಸಮ ತದ್ಭವ" ಚಿತ್ರದ ಪೋಸ್ಟರ್ ಬಿಡುಗಡೆ

Tatsama Tadbhava Frist Look Poster: ಫೆಬ್ರವರಿ 19ರಂದು "ತತ್ಸಮ ತದ್ಭವ" ಚಿತ್ರದ ಫಸ್ಟ್ ಲುಕ್ ಪೋಸ್ಟರನ್ನು 100ಕ್ಕೂ ಹೆಚ್ಚು ನಟ-ನಟಿಯರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಿದ್ದಾರೆ.

Written by - Puttaraj K Alur | Last Updated : Feb 19, 2023, 12:28 PM IST
  • ಮೇಘನಾ ರಾಜ್ ಸರ್ಜಾರ "ತತ್ಸಮ ತದ್ಭವ"ದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ
  • ನಿರ್ದೇಶಕ ಪನ್ನಗ ಭರಣ ಹಾಗೂ ಸ್ಫೂರ್ತಿ ಅನಿಲ್ ಜಂಟಿಯಾಗಿ ಚಿತ್ರ ನಿರ್ಮಾಣ
  • 100ಕ್ಕೂ ಹೆಚ್ಚು ನಟ-ನಟಿಯರಿಂದ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ಬಿಡುಗಡೆ
Tatsama Tadbhava: 100ಕ್ಕೂ ಅಧಿಕ ನಟ-ನಟಿಯರಿಂದ "ತತ್ಸಮ ತದ್ಭವ" ಚಿತ್ರದ ಪೋಸ್ಟರ್ ಬಿಡುಗಡೆ  title=
"ತತ್ಸಮ ತದ್ಭವ"ದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

ಬೆಂಗಳೂರು: ನಟಿ ಮೇಘನಾ ರಾಜ್ ಸರ್ಜಾ ಬಹಳ ದಿನಗಳ ನಂತರ ಮತ್ತೆ ನಟನೆಗೆ ಮರಳಿರುವ ಚಿತ್ರ "ತತ್ಸಮ ತದ್ಭವ"ದ ಫಸ್ಟ್ ಲುಕ್ ಪೋಸ್ಟರ್ ಹೊರಬಂದಿದೆ.

ನಿರ್ದೇಶಕ ಪನ್ನಗ ಭರಣ ಹಾಗೂ ಸ್ಫೂರ್ತಿ ಅನಿಲ್ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನೂತನ ಪ್ರತಿಭೆ ವಿಶಾಲ್ ಆತ್ರೇಯ ನಿರ್ದೇಶಿಸಿರುವ ಈ ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿದೆ.

ಇದನ್ನೂ ಓದಿ: Meghana Raj : ಬಹುದಿನಗಳ ಪ್ರಶ್ನೆಗೆ ಮೇಘನಾ ಕೊಟ್ಟೆ ಬಿಟ್ರು ಉತ್ತರ.! ಇದೇ ಚಿರು ಪತ್ನಿಯ ಮುಂದಿನ ನಿರ್ಧಾರ?

ವಿಶೇಷವೆಂದರೆ ಫೆಬ್ರವರಿ 19ರಂದು "ತತ್ಸಮ ತದ್ಭವ" ಚಿತ್ರದ ಫಸ್ಟ್ ಲುಕ್ ಪೋಸ್ಟರನ್ನು 100ಕ್ಕೂ ಹೆಚ್ಚು ನಟ-ನಟಿಯರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲ ಪ್ರಪಂಚದಾದ್ಯಂತ 30ಕ್ಕೂ ಹೆಚ್ಚಿನ ದೇಶಗಳಲ್ಲಿರುವ ಕನ್ನಡ ಹಾಗೂ ಇತರ ಸಂಘಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಪ್ರೋತ್ಸಾಹ ನೀಡಿರುವುದು ಹೆಮ್ಮೆಯ ವಿಷಯ..

ಚಿತ್ರದ ಸುಮಧುರ ಹಾಡುಗಳಿಗೆ ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ಶ್ರೀನಿವಾಸ್ ರಾಮಯ್ಯ ಛಾಯಾಗ್ರಹಣ, ರವಿ ಆರಾಧ್ಯ ಸಂಕಲನ, ನಿಖಿತ ಪ್ರಿಯ ವಸ್ತ್ರವಿನ್ಯಾಸ ಹಾಗೂ ಸಂತೋಷ್ ಪಂಚಾಲ್ ಕಲಾ ನಿರ್ದೇಶನ "ತತ್ಸಮ ತದ್ಭವ" ಚಿತ್ರಕ್ಕಿದೆ.

ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ ಹೊಸ ಸಿನಿಮಾದ ಟ್ರೈಲರ್ ರೀಲಿಸ್‌..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News