Meghana Raj : ಬಹುದಿನಗಳ ಪ್ರಶ್ನೆಗೆ ಮೇಘನಾ ಕೊಟ್ಟೆ ಬಿಟ್ರು ಉತ್ತರ.! ಇದೇ ಚಿರು ಪತ್ನಿಯ ಮುಂದಿನ ನಿರ್ಧಾರ?

Meghana Raj Sarja : ನಟಿ ಮೇಘನಾ ರಾಜ್ ಅವರು ನಿನ್ನೆ ಕುತೂಹಲಕಾರಿ ಪೋಸ್ಟ್‌ ಒಂದನ್ನು ಶೇರ್‌ ಮಾಡಿದ್ದರು. ಎಲ್ಲರೂ ಬಹಳ ದಿನಗಳಿಂದ ಕೇಳುವ ಆ ಪ್ರಶ್ನೆಗೆ ಉತ್ತರ ಕೊಡುವುದಾಗಿ ಹೇಳಿದ್ದರು. ಇದೀಗ ಮೇಘನಾ ರಾಜ್‌ ತಮ್ಮ ಜೀವನದ ದೊಡ್ಡ ಪ್ರಶ್ನೆಗೆ ಉತ್ತರ ನೀಡಿದ್ದಾರೆ. 

Written by - Chetana Devarmani | Last Updated : Feb 19, 2023, 11:04 AM IST
  • ಬಹುದಿನಗಳ ಪ್ರಶ್ನೆಗೆ ಮೇಘನಾ ಕೊಟ್ಟೆ ಬಿಟ್ರು ಉತ್ತರ.!
  • ಇದೇ ಚಿರು ಪತ್ನಿಯ ಮುಂದಿನ ನಿರ್ಧಾರ?
  • ನಟಿ ಮೇಘನಾ ರಾಜ್ ಪೋಸ್ಟ್‌ ಸಿಕ್ಕಾಪಟ್ಟೆ ವೈರಲ್‌
Meghana Raj : ಬಹುದಿನಗಳ ಪ್ರಶ್ನೆಗೆ ಮೇಘನಾ ಕೊಟ್ಟೆ ಬಿಟ್ರು ಉತ್ತರ.! ಇದೇ ಚಿರು ಪತ್ನಿಯ ಮುಂದಿನ ನಿರ್ಧಾರ? title=
Meghana Raj Sarja

Meghana Raj Sarja New Movie : ಪತಿ ಚಿರು ಅಗಲಿಕೆಯ ನೋವಿನಿಂದ ಚೇತರಿಸಿಕೊಂಡ ನಟಿ ಮೇಘನಾ ರಾಜ್ ಅವರು ನಿನ್ನೆ ಕುತೂಹಲಕಾರಿ ಪೋಸ್ಟ್‌ ಒಂದನ್ನು ಶೇರ್‌ ಮಾಡಿದ್ದರು. ಎಲ್ಲರೂ ಬಹಳ ದಿನಗಳಿಂದ ಕೇಳುವ ಆ ಪ್ರಶ್ನೆಗೆ ಉತ್ತರ ಕೊಡುವುದಾಗಿ ಹೇಳಿದ್ದರು. ಇದೀಗ ಮೇಘನಾ ರಾಜ್‌ ತಮ್ಮ ಜೀವನದ ದೊಡ್ಡ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಮೇಘನಾ ರಾಜ್ ಏನು ಹೇಳ್ತಾರೆ ಎಂದು ಎಲ್ಲರೂ ಕಾಯುತ್ತಿದ್ದರು., ಇಂದು ಬೆಳಗ್ಗೆ 10.35 ಕ್ಕೆ ಮೇಘನಾ ಇದಕ್ಕೆ ಉತ್ತರ ನೀಡಿದ್ದಾರೆ. 

 

 
 
 
 

 
 
 
 
 
 
 
 
 
 
 

A post shared by Meghana Raj Sarja (@megsraj)

 

ಮತ್ತೆ ಯಾವಾಗಾ ಸಿನಿಮಾ ಮಾಡ್ತೀರಿ? ಎಂಬುದೇ ಮೇಘನಾ ಜೀವನದ ಅತೀ ದೊಡ್ಡ ಪ್ರಶ್ನೆಯಾಗಿತ್ತು. ಇದೀಗ ಮತ್ತೆ ಮೇಘನಾ ಬೆಳ್ಳಿತೆರೆ ಮೇಲೆ ಮಿಂಚಲಿದ್ದಾರೆ. ಮಗನ ಲಾಲನೆ ಪಾಲನೆ ಜೊತೆಗೆ ಸಿನಿಮಾಗಳಲ್ಲಿ ನಟಿಸಲು ನಿರ್ಧರಿಸಿದ್ದಾರೆ. ಮೇಘನಾ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಮೇಘನಾ ರಾಜ್‌ ಸರ್ಜಾ ಅವರು 'ತತ್ಸಮ ತದ್ಭವ' ಎಂಬ ಸಿನಿಮಾ ಮೂಲಕ ಮತ್ತೆ ಬಿಗ್‌ಸ್ಕ್ರೀನ್‌ ಮೇಲೆ ಬರಲಿದ್ದಾರೆ. ಇದು ಅವರ ಅಭಿಮಾನಿಗಳ ಸಂತಸ ತಂದಿದೆ. 

ಇದನ್ನೂ ಓದಿ :  Taraka Ratna Death: ಜೂ.ಎನ್ ಟಿ ಆರ್ ಅಣ್ಣ ನಂದಮೂರಿ ತಾರಕ ರತ್ನ ಇನ್ನಿಲ್ಲ!

ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ 'ಆಟಗಾರ' ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು. ಬಹಳ ವರ್ಷಗಳ ಕಾಲ ಪ್ರೀತಿಸಿ, ಕುಟುಂಬದವರನ್ನು ಒಪ್ಪಿಗೆ  ಮದುವೆ ಆಗಿದ್ದರು ಈ ಜೋಡಿ. ಆದರೆ ದುರ್ವಿಧಿ ಎಂಬಂತೆ 2020 ರ ಜೂನ್ 7ರಂದು ಚಿರು ಹೃದಯಾಘಾತದಿಂದ ಅಗಲಿದರು. ಆಗ ಮೇಘನಾ ಗರ್ಭಿಣಿಯಾಗಿದ್ದರು. ಕೆಲವೇ ತಿಂಗಳಲ್ಲಿ ಮೇಘನಾ ಬಾಳಲ್ಲಿ ಪುತ್ರ ರಾಯನ್ ಸರ್ಜಾ ಬೆಳಕಾಗಿ ಬಂದರು. ಮಗನನ್ನು ನೋಡುತ್ತಾ ನೋವನ್ನು ಮರೆಯುತ್ತಿರುವ ಮೇಘನಾ ಈಗ ಮತ್ತೆ ಸಿನಿಮಾ ಮಾಡಲು ಸಜ್ಜಾಗಿರುವುದು ಸಂತಸದ ವಿಚಾರವಾಗಿದೆ. 

ಇದನ್ನೂ ಓದಿ :  Darshan fans : ಮಾಧ್ಯಮದವರ ಮೇಲೆ ನಟ ದರ್ಶನ್ ಅಭಿಮಾನಿಗಳಿಂದ ಹಲ್ಲೆ ಆರೋಪ.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News