Pentagon Movie : 'ಪೆಂಟಗನ್ ' ಸಿನಿಮಾಗೆ ಸಿಕ್ತು ಕನ್ನಡ-ತೆಲುಗು ಸ್ಟಾರ್ ನಿರ್ದೇಶಕರ  ಮೆಚ್ಚುಗೆ..!

Pentagon: ಈಗ ಕನ್ನಡ ಸ್ಟಾರ್ ಡೈರೆಕ್ಟರ್ ಗಳು ಕೂಡ ಪೆಂಟಗನ್ ಸಿನಿಮಾ ಟ್ರೀಲರ್ ನೋಡಿ ಫುಲ್ ಖುಷ್ ಆಗಿದ್ದಾರೆ. ಯೆಸ್ ತರುಣ್ ಸುಧೀರ್ ಜೇಮ್ಸ್ ಚೇತನ್ ಡೈರೆಕ್ಟರ್ ಎಪಿ ಅರ್ಜುನ್ ಪೆಂಟಗನ್  ಟ್ರೀಲರ್ ನ ಶೇರ್ ಮಾಡೋ ಮೂಲಕ ತಮ್ಮ ಮೆಚ್ಚುಗೆಯನ್ನ ಸೂಚಿಸಿದ್ದಾರೆ.

Written by - YASHODHA POOJARI | Last Updated : Mar 25, 2023, 05:23 PM IST
  • ಪೆಂಟಗನ್ ಸಿನಿಮಾದ ಟ್ರೀಲರ್ ಮೆಚ್ಚಿಕೊಂಡ ಆಲ್ ಡೈರೆಕ್ಟರ್ಸ್
  • ಪೆಂಟಗನ್ ಸಿನಿಮಾ ಟ್ರೀಲರ್ ನೋಡಿ ಫುಲ್ ಖುಷ್
  • ಏಪ್ರಿಲ್ 7ಕ್ಕೆ ಸಿನಿಮಾ ಭರ್ಜರಿಯಾಗಿ ರಿಲೀಸ್
Pentagon Movie : 'ಪೆಂಟಗನ್ ' ಸಿನಿಮಾಗೆ ಸಿಕ್ತು ಕನ್ನಡ-ತೆಲುಗು ಸ್ಟಾರ್ ನಿರ್ದೇಶಕರ  ಮೆಚ್ಚುಗೆ..! title=

Pentagon Movie: ಪೆಂಟಗನ್ ಸಿನಿಮಾದ ಟ್ರೀಲರ್ ಮೆಚ್ಚಿಕೊಂಡ ಆಲ್ ಡೈರೆಕ್ಟರ್ಸ್.. ಯೆಸ್ ರಿಷಬ್ ಶೆಟ್ಟಿ ಪೆಂಟಗನ್ ಸಿನಿಮಾ ಟ್ರೀಲರ್ ನ ಮೆಚ್ಚಿ ಬರೆದಿದ್ದರು. ಇದೀಗ ತೆಲುಗಿನ ಡೈರೆಕ್ಟರ್ ಗಳು ಕೂಡ ಟ್ರೀಲರ್ ಗೆ ಫಿದಾ ಆಗಿದ್ದಾರೆ. ಈಗ ಕನ್ನಡ ಸ್ಟಾರ್ ಡೈರೆಕ್ಟರ್ ಗಳು ಕೂಡ ಪೆಂಟಗನ್ ಸಿನಿಮಾ ಟ್ರೀಲರ್ ನೋಡಿ ಫುಲ್ ಖುಷ್ ಆಗಿದ್ದಾರೆ. ಯೆಸ್ ತರುಣ್ ಸುಧೀರ್ ಜೇಮ್ಸ್ ಚೇತನ್ ಡೈರೆಕ್ಟರ್ ಎಪಿ ಅರ್ಜುನ್ ಪೆಂಟಗನ್  ಟ್ರೀಲರ್ ನ ಶೇರ್ ಮಾಡೋ ಮೂಲಕ ತಮ್ಮ ಮೆಚ್ಚುಗೆಯನ್ನ ಸೂಚಿಸಿದ್ದಾರೆ.

ಇದು ಪೆಂಟಗನ್ ಸಿನಿಮಾಗೆ ದೊಡ್ಡ ಶಕ್ತಿ ಸಿಕ್ಕಂತೆ ಆಗಿದೆ.ಇದೇ ಏಪ್ರಿಲ್ 7ಕ್ಕೆ ಸಿನಿಮಾ ಭರ್ಜರಿಯಾಗಿ ರಿಲೀಸ್ ಆಗುತ್ತಿದೆ.ಸಿನಿಮಾದ ಟ್ರೀಲರ್ ಟೀಸರ್ ಮತ್ತು ಹಾಡುಗಳು ನಮ್ಮನ್ನ ಬೇರೆಯದ್ದೇ ಲೋಕಕ್ಕೆ ಕೊಂಡೋಗಿದೆ. ಇನ್ನೂ ಸಿನಿಮಾ ಯಾವ ಲೆವೆಲ್ಲಿಗೆ ಇರ್ಬೋದು ಅನ್ನೋ ಕ್ಯೂರಿಯಾಸಿಟಿ ಕ್ರಿಯೇಟ್ ಆಗಿದೆ. 

ಇದನ್ನೂ ಓದಿ:ನಾಯಕಿಯಾದ ವೀರಪ್ಪನ್​ ಮಗಳು : 'ಮಾವೀರನ್​ ಪಿಳ್ಳೈ' ಚಿತ್ರದಲ್ಲಿ ನಟನೆ..!

ಐದು ಸ್ಟೋರಿಯನ್ನ ಒಂದೇ ಸಿನಿಮಾದಲ್ಲಿ ರೋಚಕವೆನಿಸೋ ರೀತಿಯಲ್ಲಿ ನೋಡಲು ನೀವು ರೆಡಿ ತಾನೇ..?

ಪ್ರತಿಭಾವಂತ ನಿರ್ದೇಶಕರುಗಳಾದ ರಾಘು ಶಿವಮೊಗ್ಗ, ಆಕಾಶ್ ಶ್ರೀವತ್ಸ, ಚಂದ್ರ ಮೋಹನ್, ಕಿರಣ್ ಕುಮಾರ್ ಹಾಗೂ ಮತ್ತೊಂದು ಕಥೆಗೆ ಗುರು ದೇಶಪಾಂಡೆ ಅವರೇ ನಿರ್ದೇಶನ ಮಾಡಿದ್ದಾರೆ.  ಜೊತೆಗೆ ಗುರು ದೇಶಪಾಂಡೆ ಇಲ್ಲಿ ಹಣ ಹೂಡಿದ್ದಾರೆ. 

ಪ್ರಕಾಶ್ ಬೆಳವಾಡಿ, ಕಿಶೋರ್ ರವಿಶಂಕರ್ ಸೇರಿದಂತೆ ಹೆಸರಾಂತ ನಟರೇ ತಾರಾ ಬಳಗದಲ್ಲಿ ಇದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಹಾಡುಗಳು ಜನರ ಗಮನ ಸೆಳೆದಿವೆ. ಪ್ರಯೋಗಾತ್ಮಕ ಸಿನಿಮಾವಲ್ಲ, ಪಕ್ಕಾ ಕಮರ್ಷಿಯಲ್ ಚಿತ್ರ. ನೋಡುಗನಿಗೆ ಏನೆಲ್ಲ ಬೇಕಿದೆಯೋ ಎಲ್ಲವನ್ನೂ ಈ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಇಲ್ಲಿ ಮಾಡಲಾಗಿದೆ.. ಹೊಸ ಆಲೋಚನೆಯ ನಿರ್ದೇಶಕರು, ಬರಹಗಾರರು ಮತ್ತು ಹೊಸ ಕಲಾವಿದರು ಕೂಡ ಸಿನಿಮಾದ ಭಾಗವಾಗಿದ್ದಾರೆ. 

ಇದನ್ನೂ ಓದಿ:Guess Who: ಮುಖದ ಮೇಲೆ ಕೈಯಿಟ್ಟು ಕುಳಿತಿರುವ ಈ ಮಗು ಯಾರು ಗೊತ್ತಾ? ಈಕೆ ಬಾಲಿವುಡ್’ನಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಟಿ!

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News