'ಬಿಗ್‌ಬಾಸ್ ಓಟಿಟಿ ಸೀಸನ್-1‌'ನಲ್ಲಿ ಮೊದಲ ವಾರ ಎಲಿಮಿನೇಟ್‌ ಆಗಿದ್ದು ಯಾರು..?

Written by - Malathesha M | Edited by - Manjunath N | Last Updated : Aug 13, 2022, 11:19 PM IST
  • ಅಷ್ಟಕ್ಕೂ ಎಲಿಮಿನೇಷನ್‌ ರೌಂಡ್‌ನಲ್ಲಿ ತುಂಬಾ ಸ್ಪೆಷಲ್‌ ಸ್ಪರ್ಧಿಗಳನ್ನೇ ಬಿಗ್‌ಬಾಸ್‌ ಆಯೋಜಕರು ಆಯ್ಕೆ ಮಾಡಿಕೊಂಡಿದ್ದರು.
  • ಈ ಪೈಕಿ ಹಲವರ ಹೆಸರು ಓಡಾಡಿದರೂ, ಕಡೆಯದಾಗಿ ಬಹುತೇಕರು ಸೇಫ್‌ ಆದರು.
'ಬಿಗ್‌ಬಾಸ್ ಓಟಿಟಿ ಸೀಸನ್-1‌'ನಲ್ಲಿ ಮೊದಲ ವಾರ ಎಲಿಮಿನೇಟ್‌ ಆಗಿದ್ದು ಯಾರು..? title=

ಭಾರಿ ಕುತೂಹಲ ಕೆರಳಿಸುತ್ತಿರುವ & ಓಟಿಟಿ ಬಳಕೆದಾರರಿಗಾಗಿ ಆರಂಭವಾದ 'ಬಿಗ್‌ಬಾಸ್ ಓಟಿಟಿ ಸೀಸನ್-1‌'ನಿಂದ ಮೊದಲ ವಾರ ಒಬ್ಬರು ಸ್ಪರ್ಧಿ ಎಲಿಮಿನೇಟ್‌ ಆಗಿದ್ದಾರೆ. ಈ ವಾರ ಯಾರು ಎಲಿಮಿನೇಟ್‌ ಆಗಬಹುದು ಎಂಬ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಜೊತೆಗೆ ಸೋನು ಶ್ರೀನಿವಾಸ್‌ ಗೌಡ ಹಾಗೂ ಆರ್ಯವರ್ಧನ್‌ ಗುರೂಜಿ ಹೊರಗೆ ಹೋಗ್ತಾರೆ ಎಂಬ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಆಗುತ್ತಿತ್ತು. ಆದರೆ ಎಲ್ಲವೂ ಈಗ ಉಲ್ಟಾ ಆಗಿದೆ. ಮೊದಲ ವಾರ ಸೋನು ಶ್ರೀನಿವಾಸ್‌ ಗೌಡ ಹಾಗೂ ಆರ್ಯವರ್ಧನ್‌ ಗುರೂಜಿ ಸೇಫ್‌ ಆಗಿದ್ದಾರೆ.

ಅಷ್ಟಕ್ಕೂ ಇಂದು ನಡೆದ ವಾರಾಂತ್ಯದ ವಿಶೇಷ ಕಾರ್ಯಕ್ರಮದಲ್ಲಿ ನಟ ಕಿಚ್ಚ ಸುದೀಪ್‌ ಎಲಿಮಿನೇಟ್‌ ಆಗುವವರ ಹೆಸರನ್ನ ಘೋಷಿಸಲು ಬಂದರು. ಈ ವೇಳೆ ಸೇಫ್‌ ಆದ ಸ್ಪರ್ಧಿಗಳ ಹೆಸರು ಮಾತ್ರ ಹೇಳುತ್ತಿದ್ದರು. ಕಡೆಯದಾಗಿ ಈ ವಾರ 'ಬಿಗ್‌ಬಾಸ್ ಓಟಿಟಿ ಸೀಸನ್-1‌'ನಿಂದ ಹೊರಗೆ ಹೋಗುವವರು ಯಾರು ಅನ್ನೋದನ್ನ ಬಿಗ್‌ಬಾಸ್‌ ವಾಯ್ಸ್‌ ಮೂಲಕ ತಿಳಿಸಲಾಯಿತು. ಹಾಗಾದ್ರೆ ಈ ವಾರ ಎಲಿಮಿನೇಟ್‌ ಆಗಿದ್ದು ಯಾರು ಅನ್ನೋದನ್ನ ತಿಳಿಯಲು ಮುಂದೆ ಓದಿ.

ಇದನ್ನು ಓದಿ: Korea Open:ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌: ಮುನ್ನಡೆ ಸಾಧಿಸಿದ ಸಿಂಧು, ಕಿಡಂಬಿ

ಕಿರಣ್‌ ಯೋಗೇಶ್ವರ್‌ ಔಟ್..!‌
ಅಷ್ಟಕ್ಕೂ ಎಲಿಮಿನೇಷನ್‌ ರೌಂಡ್‌ನಲ್ಲಿ ತುಂಬಾ ಸ್ಪೆಷಲ್‌ ಸ್ಪರ್ಧಿಗಳನ್ನೇ ಬಿಗ್‌ಬಾಸ್‌ ಆಯೋಜಕರು ಆಯ್ಕೆ ಮಾಡಿಕೊಂಡಿದ್ದರು. ಈ ಪೈಕಿ ಹಲವರ ಹೆಸರು ಓಡಾಡಿದರೂ, ಕಡೆಯದಾಗಿ ಬಹುತೇಕರು ಸೇಫ್‌ ಆದರು. ಆದರೆ ರಾಜಸ್ಥಾನ ಮೂಲದ ಕಿರಣ್‌ ಯೋಗೇಶ್ವರ್‌ ಬಿಗ್‌ಬಾಸ್‌ ಮನೆಯಿಂದ ಹೊರ ಬಿದ್ದಿದ್ದಾರೆ. ಈ ಮೂಲಕ 'ಬಿಗ್‌ಬಾಸ್ ಓಟಿಟಿ ಸೀಸನ್-1‌'ನಿಂದ ಎಲಿಮಿನೇಟ್‌ ಆದ ಮೊದಲ ಸ್ಪರ್ಧಿ ಎಂಬ ಪಟ್ಟ ಗಿಟ್ಟಿಸಿಕೊಂಡಿದ್ದಾರೆ.

ಇದನ್ನು ಓದಿ: IPL 2022 : ಬುಮ್ರಾ ಮತ್ತು ನಿತೀಶ್ ರಾಣಾ ವಿರುದ್ಧ ಕಠಿಣ ಕ್ರಮ ಕೈಗೊಂಡ ಬಿಸಿಸಿಐ!

ಬಿಗ್‌ಬಾಸ್‌ ಶೋ ಆರಂಭಕ್ಕೂ ಮೊದಲೇ ಆರ್ಯವರ್ಧನ್‌ ಗುರೂಜಿ ಹಾಗೂ ಕಾಂಟ್ರವರ್ಷಿಯಲ್‌ ಸ್ಟಾರ್ ಸೋನು ಶ್ರೀನಿವಾಸ್‌ ಗೌಡ ಕುರಿತು ಭಾರಿ ಚರ್ಚೆ ನಡೆಯುತ್ತಿತ್ತು. ಈ ವಾರ ಇವರಲ್ಲಿ ಒಬ್ಬರು ಹೊರಗೆ ಹೋಗುತ್ತಾರೆ ಎಂಬ ಬಗ್ಗೆ ಮಾತುಕತೆ ನಡೆದಿತ್ತು. ಆದರೆ ಅಂತಿಮವಾಗಿ ರಾಜಸ್ಥಾನ ಮೂಲದ ಕಿರಣ್‌ ಯೋಗೇಶ್ವರ್‌ ಎಲಿಮಿನೇಟ್‌ ಆಗಿದ್ದಾರೆ. ಇನ್ನುಳಿದ 15 ಸ್ಪರ್ಧಿಗಳು 'ಬಿಗ್‌ಬಾಸ್ ಓಟಿಟಿ ಸೀಸನ್-1‌'ನಲ್ಲಿ ಉಳಿದುಕೊಂಡಿದ್ದು, ಯಾರು ಯಾರು ಹೊರ ಹೋಗ್ತಾರೆ ಅನ್ನೋದು ಮುಂದಿನ ವಾರಾಂತ್ಯಕ್ಕೆ ತಿಳಿಯಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News