Kantara : ದೇಶದಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸಿದ ಕಾಂತಾರ, ಈ ದಾಖಲೆಯನ್ನು ಯಾರಿಂದಲೂ ಮುರಿಯಲು ಸಾಧ್ಯವಿಲ್ಲ..!

Kantara Record : ಕನ್ನಡದ ಹೆಮ್ಮೆಯ ಸಿನಿಮಾ ಕಾಂತಾರಾ ಬಿಡುಗಡೆಯಾಗಿ ಹೆಚ್ಚು ಜನಪ್ರಿಯತೆ ಪಡೆದಿದೆ. ಈ ಸಿನಿಮಾದಿಂದ ರಿಷಬ್ ಶೆಟ್ಟಿ ಡಿವೈನ್ ಸ್ಟಾರ್ ಎಂದು ಗುರುತಿಸಿಕೊಂಡಿದ್ದಾರೆ. ಅನೇಕ ದಾಖಲೆಗಳನ್ನು ಉಡೀಸ್‌ ಮಾಡಿರುವ ಕಾಂತಾರಾ ಸಿನಿಮಾ ಇದೀಗ ದೇಶದಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸಿದೆ.  

Written by - Savita M B | Last Updated : Jul 29, 2023, 11:57 AM IST
  • ಕಾಂತಾರಾ ಸಿನಿಮಾ ಎಲ್ಲ ಭಾಷೆಯಲ್ಲಿಯೂ ತೆರೆ ಕಂಡು ಅಪಾರ ಮೆಚ್ಚುಗೆ ಪಡೆದುಕೊಂಡಿತು.
  • ಮೊದಲನೇ ಭಾಗ ವೀಕ್ಷಿಸಿದ ಸಿನಿಪ್ರಿಯರು ಎರಡನೇ ಭಾಗದ ಬಿಡುಗಡೆಯಗಾಗಿ ಕಾತುರದಿಂದ ಕಾಯುತ್ತಿದ್ದಾರೆ
  • ಇದೀಗ ಕಾಂತಾರ ಸಿನಿಮಾ ಮತ್ತೊಂದು ಇತಿಹಾಸ ಸೃಷ್ಟಿಸಿದೆ
Kantara : ದೇಶದಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸಿದ ಕಾಂತಾರ, ಈ ದಾಖಲೆಯನ್ನು ಯಾರಿಂದಲೂ ಮುರಿಯಲು ಸಾಧ್ಯವಿಲ್ಲ..!   title=

Kantara Budget ಕಾಂತಾರಾ ಸಿನಿಮಾ ಎಲ್ಲ ಭಾಷೆಯಲ್ಲಿಯೂ ತೆರೆ ಕಂಡು ಅಪಾರ ಮೆಚ್ಚುಗೆ ಪಡೆದುಕೊಂಡಿತು. ಮೊದಲನೇ ಭಾಗ ವೀಕ್ಷಿಸಿದ ಸಿನಿಪ್ರಿಯರು ಎರಡನೇ ಭಾಗದ ಬಿಡುಗಡೆಯಗಾಗಿ ಕಾತುರದಿಂದ ಕಾಯುತ್ತಿದ್ದಾರೆ. 

ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಬಿಡುಗಡೆಯಾದ ಕಾಂತಾರ ಸಿನಿಮಾ ಹಲವು ದಾಖಲೆಗಳನ್ನು ಬರೆಯುವುದರ ಜೊತೆಗೆ ಅಭಿಮಾನಿಗಳ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇನ್ನು ಇದೀಗ ಕಾಂತಾರ ಸಿನಿಮಾ ಮತ್ತೊಂದು ಇತಿಹಾಸ ಸೃಷ್ಟಿಸಿದೆ. ಏನದು ಅಂತೀರಾ.. ಮುಂದೆ ಓದಿ..

ಇದನ್ನೂ ಓದಿ-ಅರ್ಜೇಂಟಿನಾದಲ್ಲಿ ಗರ್ಲ್‌ಫ್ರೆಂಡ್ ಜೊತೆ ಕಾಣಿಸಿಕೊಂಡ ಹೃತಿಕ್ ರೋಷನ್..ಪೋಟೋ ವೈರಲ್‌..!

ಕಾಂತಾರ ಸಿನಿಮಾದಲ್ಲಿ ಚಿತ್ರದ ಎಲ್ಲ ದೃಶ್ಯಗಳನ್ನು ಕಾಡಿನಲ್ಲಿಯೇ ಚಿತ್ರೀಕರಿಸಲಾಗಿದ್ದು, ಈ ಸಿನಿಮಾ ಕೇವಲ 16 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿ ಸುಮಾರು 300 ಕೋಟಿ ಕಲೆಕ್ಷನ್ ಮಾಡಿತ್ತು. ಇನ್ನು ಇದೀಗ ಕಾಂತಾರ ಸಿನಿಮಾದ ಹೆಸರು ಕೂಡ ಕಡಿಮೆ ಬಜೆಟ್ ಬ್ಲಾಕ್ ಬಸ್ಟರ್ ಗಳ ಪಟ್ಟಿಯಲ್ಲಿ ಸೇರಿದ್ದು,  ಸಿನಿಮಾ ಮತ್ತೊಂದು ದಾಖಲೆಯನ್ನು ಸೃಷ್ಟಿಸಿದೆ. 

ಕಾಂತಾರ ಸಿನಿಮಾ ಶೂಟಿಂಗ್ ನಡೆದಿದ್ದು ದಟ್ಟ ಕಾಡಿನಲ್ಲಿ. ಕಾಡಿನಲ್ಲಿ ಶಾಂತಿಯನ್ನು ಹುಡುಕುತ್ತ ಅಲೆದಾಡುವ ರಾಜನಿಗೆ ಸಂಬಂಧಿಸಿದ ಕಥಾಹಂದರವನ್ನು ಚಿತ್ರಒಳಗೊಂಡಿದೆ. ಈ ಚಿತ್ರದ ಬಜೆಟ್ ತುಂಬಾ ಕಡಿಮೆಯಾಗಿದ್ದರೂ ಸಹ ಕಥೆಯು ತುಂಬಾ ವಿಶೇಷವಾಗಿರುವುದರಿಂದ ಈ ಚಿತ್ರವು ಅನೇಕ ಚಿತ್ರಗಳನ್ನು ಸೋಲಿಸಿದೆ. 

ಇದನ್ನೂ ಓದಿ-ಅಭಿಷೇಕ್ ಬಚ್ಚನ್ ಪತ್ನಿಯಾಗಬೇಕಿತ್ತು ಕರಿಷ್ಮಾ, ನಿಶ್ಚಿತಾರ್ಥ ಮುರಿದುಬಿದ್ದಿದ್ದು ಯಾಕೆ ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News