ತೆರೆಗೆ ಬರಲು ಸಜ್ಜಾದ "ಕಪ್ಪು ಬಿಳುಪಿನ ನಡುವೆ".. ಶುಭ ಹಾರೈಸಿದ ಖ್ಯಾತ ನಟ ವಿಜಯ್ ಸೇತುಪತಿ!

Kappu bilupina naduve movie: ವೃತ್ತಿಯಲ್ಲಿ ಪಾರಂಪರಿಕ ಆಯುರ್ವೇದ ವೈದ್ಯರಾಗಿರುವ ಧರ್ಮೇಂದ್ರ ಅವರು ನಿರ್ಮಿಸಿರುವ, ವಿಭಿನ್ನ ಕಥೆಯ ಹಾರಾರ್ ಚಿತ್ರ "ಕಪ್ಪು ಬಿಳುಪಿನ ನಡುವೆ" ಚಿತ್ರ ಇದೇ ಫೆಬ್ರವರಿ 23 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.  

Written by - YASHODHA POOJARI | Last Updated : Feb 19, 2024, 09:47 PM IST
  • ವಸಂತ್ ವಿಷ್ಣು ಈ ಚಿತ್ರವನ್ನು ನಿರ್ದೇಶಿಸುವುದರೊಂದಿಗೆ, ನಾಯಕನಾಗೂ ಅಭಿನಯಿಸಿರುವ ಈ ಚಿತ್ರ
  • ಈ ಚಿತ್ರದ ಟ್ರೇಲರ್ ವೀಕ್ಷಿಸಿದ ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ
  • ಕನ್ನಡ ಹಾಗೂ ತಮಿಳಿನಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ.
 ತೆರೆಗೆ ಬರಲು ಸಜ್ಜಾದ "ಕಪ್ಪು ಬಿಳುಪಿನ ನಡುವೆ".. ಶುಭ ಹಾರೈಸಿದ ಖ್ಯಾತ ನಟ ವಿಜಯ್ ಸೇತುಪತಿ! title=

ವಸಂತ್ ವಿಷ್ಣು ಈ ಚಿತ್ರವನ್ನು ನಿರ್ದೇಶಿಸುವುದರೊಂದಿಗೆ, ನಾಯಕನಾಗೂ ಅಭಿನಯಿಸಿರುವ ಈ ಚಿತ್ರದ ಟ್ರೇಲರ್ ವೀಕ್ಷಿಸಿದ ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ. ಕನ್ನಡ ಹಾಗೂ ತಮಿಳಿನಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ. 

 "ಕಪ್ಪು ಬಿಳುಪಿನ ನಡುವೆ" ಹಾರಾರ್ ಚಿತ್ರವಾಗಿದ್ದು, "ಕಪ್ಪು ಬಿಳುಪನ್ನು" ಕತ್ತಲು, ಬೆಳುಕಿಗೆ ಹೋಲಿಸಬಹುದು. ಪಾಸಿಟಿವ್ ಹಾಗೂ ನೆಗಟಿವ್ ಎನರ್ಜಿ ಅಂತಲೂ ಎನ್ನಬಹುದು.ಯೂಟ್ಯೂಬರ್ ಗಳ ಸುತ್ತ ಈ ಚಿತ್ರದ ಕಥೆ ಸುತ್ತುತ್ತದೆ ಎಂದು ವಸಂತ್ ವಿಷ್ಣು ತಿಳಿಸಿದ್ದಾರೆ. 

ಇದನ್ನೂ ಓದಿ-Mehabooba: ಜಾತಿ-ಮತ-ಧರ್ಮ ಮೀರಿದ ಮೆಹಬೂಬಕ್ಕೆ ಮುಹೂರ್ತ‌ ಫಿಕ್ಸ್!

ವಸಂತ್ ವಿಷ್ಣು ಅವರಿಗೆ ನಾಯಕಿಯಾಗಿ ವಿದ್ಯಾಶ್ರೀ ಗೌಡ ನಟಿಸಿದ್ದಾರೆ.  ಬಿರಾದಾರ್, ಶರತ್ ಲೋಹಿತಾಶ್ವ, ಹಾಸ್ಯ ನಟ ಹರೀಶ್, ನವೀನ್ ರಘು, ಮಾಹೀನ್ ಭಾರದ್ವಾಜ್,  ತೇಜಸ್ವಿನಿ ಮುಂತಾದವರು ತಾರಾಬಳಗದಲ್ಲಿದ್ದಾರೆ.  

 ಚಿತ್ರದಲ್ಲಿ ಮೂರು ಹಾಡುಗಳಿದ್ದು ಡಾ||ವಿ.ನಾಗೇಂದ್ರ ಪ್ರಸಾದ್ ಹಾಡುಗಳನ್ನು ಬರೆದಿದ್ದಾರೆ.  ರಿಶಾಲ್ ಸಾಯಿ ಸಂಗೀತ ನೀಡಿದ್ದಾರೆ. ಕೆ.ಜಿ.ಎಫ್ ಖ್ಯಾತಿಯ ಸಂತೋಷ್ ವೆಂಕಿ, ಶ್ರೀಧರ್ ಕಶ್ಯಪ್ ಹಾಡುಗಳನ್ನು ಹಾಡಿದ್ದಾರೆ. ಪ್ರವೀಣ್ ಶೆಟ್ಟಿ ಛಾಯಾಗ್ರಹಣ ಹಾಗೂ ಅಮಿತ್ ಜಾವಲ್ಕರ್ ಸಂಕಲನ ಈ ಚಿತ್ರಕ್ಕಿದೆ.

ಇದನ್ನೂ ಓದಿ-​ವಿಭಿನ್ನ ಉಡುಗೆಯಲ್ಲಿ ಜಾಹ್ನವಿ ಕಪೂರ್ : ಫೋಟೋಸ್ ವೈರಲ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News