ಅವರು ಮನೆಗೆ ಬಂದು ನೀವು ನನ್ನನ್ನು ಮದುವೆಯಾಗುತ್ತೀರಾ ಎಂದು ಕೇಳಿದರು: ಕೀರ್ತಿ ಸುರೇಶ್

Keerthy Suresh Marriage: ಸೌತ್‌ ನಟಿ ಕೀರ್ತಿ ಸುರೇಶ್ ಅವರ ಮದುವೆ ಬಗ್ಗೆ ಇತ್ತೀಚೆಗೆ ಅನೇಕ ಸುದ್ದಿಗಳು ಹರಿದಾಡುತ್ತಿವೆ.. ಈ ಹಿಂದೆ ನಿರ್ಮಾಪಕರನ್ನು ಮದುವೆಯಾಗಲಿದ್ದಾರೆ ಎನ್ನುವ ವದಂತಿ ಹಬ್ಬಿತ್ತು..  

Written by - Savita M B | Last Updated : Aug 6, 2024, 01:30 PM IST
  • ಸೌತ್‌ ಸಿನಿರಂಗದ ಚೆಂದುಳ್ಳ ಚೆಲುವೆ ಕೀರ್ತಿ ಸುರೇಶ್‌
  • ಇದಕ್ಕಾಗಿ ಎಷ್ಟೇ ಶ್ರಮಿಸಿದರೂ ಪರವಾಗಿಲ್ಲ ಎನ್ನುತ್ತಾರೆ ಕೀರ್ತಿ ಸುರೇಶ್..
ಅವರು ಮನೆಗೆ ಬಂದು ನೀವು ನನ್ನನ್ನು ಮದುವೆಯಾಗುತ್ತೀರಾ ಎಂದು ಕೇಳಿದರು: ಕೀರ್ತಿ ಸುರೇಶ್ title=

Keerthy Suresh: ಸೌತ್‌ ಸಿನಿರಂಗದ ಚೆಂದುಳ್ಳ ಚೆಲುವೆ ಕೀರ್ತಿ ಸುರೇಶ್‌ ಇತ್ತೀಚೆಗೆ ತಮ್ಮ ಮದುವೆ ಬಗ್ಗೆ ಮಾತನಾಡಿ ನಾನು ಸಿನಿಮಾಗಳತ್ತ ಗಮನ ಹರಿಸಿದ್ದೇನೆ.. ಮದುವೆಯಾಗುವುದಾದರೇ ಎಲ್ಲರಿಗೂ ಮೊದಲೇ ಹೇಳುತ್ತೆನೆ ಎಂದು ಹೇಳುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದರು.. 

ಸೋಷಿಯಲ್ ಮೀಡಿಯಾದಲ್ಲಿ ಬರುವ ಸುದ್ದಿಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಕೀರ್ತಿ ಸುರೇಶ್ ಅಭಿಪ್ರಾಯಪಟ್ಟಿದ್ದರು.. ಇದೆಲ್ಲರ ಮಧ್ಯೆ ಕೀರ್ತಿ ಸುರೇಶ್ ಇತ್ತೀಚೆಗೆ ತಮ್ಮ ಪ್ರೀತಿಯ ಪ್ರಸ್ತಾಪದ ಬಗ್ಗೆ ಮಾತನಾಡಿದ್ದು, ನನ್ನನ್ನು ಮೆಚ್ಚುವ ವ್ಯಕ್ತಿಯೊಬ್ಬರು ನನ್ನ ಮನೆಗೆ ಬಂದು ನನ್ನನ್ನು ಮದುವೆಯಾಗುವುದಾಗಿ ಹೇಳಿದರು. ಮೊದಲು ಅವನನ್ನು ಕಂಡರೆ ಭಯವಾಯಿತು, ಆದರೆ ನಂತರ ಅವನು ನನ್ನ ಮೇಲೆ ತೋರಿದ ಪ್ರೀತಿ ನನಗೆ ಇಷ್ಟವಾಯಿತು ಎಂದಿದ್ದರು.. ಸಿನಿಮಾ ತಾರೆಯಾಗಿ ನಾನು ಪಡುತ್ತಿರುವ ಶ್ರಮಕ್ಕೆ ಅಭಿಮಾನಿಗಳಿಂದ ಹೇಳಲಾಗದ ಪ್ರೀತಿ ಸಿಗುತ್ತಿದೆ.. ಇದಕ್ಕಾಗಿ ಎಷ್ಟೇ ಶ್ರಮಿಸಿದರೂ ಪರವಾಗಿಲ್ಲ ಎನ್ನುತ್ತಾರೆ ಕೀರ್ತಿ ಸುರೇಶ್...

ಇದನ್ನೂ ಓದಿ-ಈ ವ್ಯಕ್ತಿ ಒಪ್ಪಿಗೆ ಸೂಚಿಸಿದ ದಿನವೇ ನನ್ನ ಮದುವೆ !ಲೈವ್ ಬಂದು ಮದುವೆ ಯಾರ ಜೊತೆ ಎಂದು ಸುಳಿವು ನೀಡಿದ ಅನುಶ್ರೀ

 ಈ ಮಧ್ಯೆ, ಇತ್ತೀಚಿನ 'ದಸರಾ' ಸಿನಿಮಾದಲ್ಲಿನ ಪಾತ್ರಕ್ಕಾಗಿ ಕೀರ್ತಿ ಸುರೇಶ್‌ಗೆ ಫಿಲ್ಮ್‌ಫೇರ್ ಪ್ರಶಸ್ತಿ ಸಿಕ್ಕಿದ್ದು ಗೊತ್ತೇ ಇದೆ. ಶ್ರೀಕಾಂತ್ ನಿರ್ದೇಶಿಸಿದ ಸಿನಿಮಾದಲ್ಲಿ ಕೀರ್ತಿ ಅವರ ಅಭಿನಯ ಪ್ರೇಕ್ಷಕರಿಗೆ ಸಖತ್‌ ಇಷ್ಟವಾಗಿತ್ತು... ಅತ್ಯುತ್ತಮ ನಾಯಕನಾಗಿ ನಾನಿ ಮತ್ತು ಅತ್ಯುತ್ತಮ ನಿರ್ದೇಶಕ ಶ್ರೀಕಾಂತ್ ಓಡೆ ಫಿಲ್ಮ್‌ಫೇರ್ ಪ್ರಶಸ್ತಿಯನ್ನೂ ಪಡೆದರು. 'ದಸರಾ' ಚಿತ್ರ ಒಟ್ಟು ಆರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದೆ. 

ಇದನ್ನೂ ಓದಿ-ಒಂದು ಸಂಚಿಕೆಗೆ 1 ಲಕ್ಷ ಸಂಭಾವನೆ ಪಡೆಯುತ್ತಿದ್ದ ʻಈಕೆಗೆʼ ಇಂದು ಪ್ಲಾಸ್ಟಿಕ್‌ ಕವರ್‌ನಲ್ಲಿ ಅನ್ನ ತಿನ್ನುವ ಪರಿಸ್ಥತಿ..!

 ಇನ್ನು ಕೀರ್ತಿ ಸುರೇಶ್ ವೃತ್ತಿಜೀವನದ ವಿಚಾರಕ್ಕೆ ಬಂದರೆ.. ಸದ್ಯ ಆಕೆಯ ಕೈಯಲ್ಲಿ ಅರ್ಧ ಡಜನ್‌ಗಿಂತಲೂ ಹೆಚ್ಚು ಚಿತ್ರಗಳಿವೆ. ತಮಿಳಿನ ‘ರಘು ತಾತ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ವರ್ಷ ಬಾಲಿವುಡ್‌ಗೂ ಎಂಟ್ರಿ ಕೊಡಲು ಸಿದ್ಧವಾಗಿದ್ದಾರೆ.. 

ನಟಿ ಕೀರ್ತಿ ಸುರೇಶ್‌ ರೊಮ್ಯಾಂಟಿಕ್ ದೃಶ್ಯಗಳನ್ನು ಮಾಡಲು ಗ್ರೀನ್‌ ಸಿಗ್ನಲ್‌ ನೀಡಿದ್ದಾರಂತೆ. ಈ ಸೌತ್‌ ಬ್ಯೂಟಿ ಸದ್ಯ ಬಾಲಿವುಡ್ ಹೀರೋ ವರುಣ್ ಧವನ್ ಜೊತೆ 'ಬೇಬಿ ಜಾನ್' ಹಿಂದಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅದರಲ್ಲಿ ವರುಣ್ ಧವನ್ ನಡುವೆ ಕೆಲವು ಲಿಪ್ ಲಾಕ್ ದೃಶ್ಯಗಳಿವೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News