close

News WrapGet Handpicked Stories from our editors directly to your mailbox

ಕೆಜಿಎಫ್ ನ ಅಧೀರಾ ಪಾತ್ರ ಅವೆಂಜರ್ಸ್ ನಲ್ಲಿನ ಥಾನೋಸ್ ಇದ್ದ ಹಾಗೆ-ಸಂಜಯ್ ದತ್

ಸಂಜಯ್ ದತ್ ಸೋಮವಾರ ತಮ್ಮ 60ನೇ ಹುಟ್ಟುಹಬ್ಬದಂದು ಕೆಜಿಎಫ್ ಚಿತ್ರದಲ್ಲಿನ ಅಧೀರಾ ಪಾತ್ರದ ಮೋಷನ್ ಪೋಸ್ಟರ್ ನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಕನ್ನಡ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸುತ್ತಿರುವ ಸಂಗತಿಯನ್ನು ಬಹಿರಂಗಪಡಿಸಿದ್ದರು.

Updated: Jul 30, 2019 , 07:14 PM IST
ಕೆಜಿಎಫ್ ನ ಅಧೀರಾ ಪಾತ್ರ ಅವೆಂಜರ್ಸ್ ನಲ್ಲಿನ ಥಾನೋಸ್ ಇದ್ದ ಹಾಗೆ-ಸಂಜಯ್ ದತ್

ಮುಂಬೈ: ಸಂಜಯ್ ದತ್ ಸೋಮವಾರ ತಮ್ಮ 60ನೇ ಹುಟ್ಟುಹಬ್ಬದಂದು ಕೆಜಿಎಫ್ ಚಿತ್ರದಲ್ಲಿನ ಅಧೀರಾ ಪಾತ್ರದ ಮೋಷನ್ ಪೋಸ್ಟರ್ ನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಕನ್ನಡ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸುತ್ತಿರುವ ಸಂಗತಿಯನ್ನು ಬಹಿರಂಗಪಡಿಸಿದ್ದರು.

ಕೆಜಿಎಫ್ ಚಾಪ್ಟರ್ 2 ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಮಾತನಾಡಿದ ಅವರು ತಮ್ಮ ಪಾತ್ರವನ್ನು ಅವೆಂಜರ್ಸ್ ನಲ್ಲಿರುವ ಥಾನೋಸ್ ಪಾತ್ರಕ್ಕೆ ಹೋಲಿಕೆ ಮಾಡಿದರು.ಮಾರ್ವೆಲ್ ಸಿನೆಮ್ಯಾಟಿಕ್ ಬ್ರಹ್ಮಾಂಡದಲ್ಲಿ ಮೂಡಿ ಬಂದ ಅವೆಂಜರ್ ಸರಣಿ ಚಿತ್ರದಲ್ಲಿನ ಧೈತ್ಯ ಥಾನೋಸ್ ಪಾತ್ರ ಎಲ್ಲರನ್ನೂ ಮೋಡಿ ಮಾಡಿತ್ತು. ಈಗ ತಮ್ಮ ಪಾತ್ರವು ಕೂಡ ಅದೇ ರೀತಿ ಇದೆ ಎಂದು ಅವರು ಹೇಳಿದ್ದಾರೆ.

ತಮ್ಮ ಪಾತ್ರದ ಬಗ್ಗೆ ಪಿಟಿಐ ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿರುವ ಸಂಜಯ್ ದತ್ 'ಅಧೀರಾ ಪಾತ್ರವು ತುಂಬಾ ಶಕ್ತಿಯುತವಾಗಿದೆ. ನೀವು ಅವೆಂಜರ್ಸ್ ಅನ್ನು ನೋಡಿದ್ದರೆ, ನೀವು ಥಾನೋಸ್ ಬಗ್ಗೆ ತಿಳಿದಿರುತ್ತಿರಿ. ಆದ್ದರಿಂದ ಅಧೀರಾ ಕೂಡ ಅವರಂತೆಯೇ ಇದ್ದಾರೆ. ಅವರು ಅಪಾಯಕಾರಿ ಪಾತ್ರದೊಂದಿಗೆ ಅಪಾಯಕಾರಿ ಗೆಟ್ ಅಪ್ ನ್ನು ಹೊಂದಿದ್ದಾರೆ. ನಾನು ಕೂಡ ಅಂತಹ ಪಾತ್ರಕ್ಕಾಗಿ ಎದುರು ನೋಡುತ್ತಿದ್ದೆ' ಎಂದು ಹೇಳಿದರು.

ಸಂಜಯ್ ದತ್  ಕೆಜಿಎಫ್ ಚಾಪ್ಟರ್ 2 ರಲ್ಲಿ ಒರಟಾದ ನೋಟದಲ್ಲಿ ಕಾಣಿಸಿಕೊಂಡಿದ್ದು ಈಗ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.