Avatar: The Way of Water: ‘ಅವತಾರ್ - ದಿ ವೇ ಆಫ್ ವಾಟರ್’ ಸಿನಿಮಾ ಶುಕ್ರವಾರ(ಡಿ.16) ದೇಶ-ವಿದೇಶಗಳಲ್ಲಿ ರಿಲೀಸ್ ಆಗಿದೆ. ಬಿಡುಗಡೆಯ ದಿನವೇ ಬೆಂಗಳೂರಿನಲ್ಲಿ 1014 ಪ್ರದರ್ಶನಗಳನ್ನು ಕಂಡಿದೆ.
ಕೆಜಿಎಫ್ 2 ಚಿತ್ರವು ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ ಸಾರ್ವಕಾಲಿಕ ಹಿಟ್ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ, ಇಂದಿಗೂ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರವು ಇನ್ನು ಕೆಲವೇ ದಿನಗಳಲ್ಲಿ 50 ದಿನಗಳ ಬಾಕ್ಸ್ ಆಫೀಸ್ ಯಾನವನ್ನು ಪೂರೈಸಲಿದೆ.ಇದೆ ಸಂದರ್ಭದಲ್ಲಿ ಈಗ ಅಭಿಮಾನಿಗಳು ತಮ್ಮ ಮನೆಯಲ್ಲಿಯೇ ಕುಳಿತು ಕುಟುಂಬ ಸಮೇತವಾಗಿ ಕೆಜಿಎಫ್ 2 ಚಿತ್ರವನ್ನು ವೀಕ್ಷಿಸಬಹುದಾಗಿದೆ.
ಏಪ್ರಿಲ್ 14 ರಂದು ಕೆಜಿಎಫ್ 2 ಚಿತ್ರದ ಜಗತ್ತಿನಾದ್ಯಂತ ಬಿಡುಗಡೆಯಾದಾಗಿನಿಂದ ಸಿನಿ ಪ್ರಿಯರನ್ನು ಹಾಗೂ ಭಾರತೀಯ ಸಿನಿಮಾ ರಂಗದ ನಟರನ್ನು ಹುಬ್ಬೇರಿಸುವಂತೆ ಮಾಡಿದೆ.ಈ ಚಿತ್ರದ ಮೇಕಿಂಗ್ ಹಾಗೂ ರಾಕಿಂಗ್ ಸ್ಟಾರ್ ಯಶ್ ನಟನೆಗೆ ಅವರು ಮಾರು ಹೋಗಿದ್ದಾರೆ.ಇತ್ತೀಚಿಗೆ ಅಂತವರ ಸಾಲಿಗೆ ಸೇರಿದ ಮತ್ತೊಬ್ಬ ವ್ಯಕ್ತಿ ಎಂದರೆ ಬಾಲಿವುಡ್ ನಟ ರಣವೀರ್ ಸಿಂಗ್..!
ಕೆಜಿಎಫ್ ಫ್ರಾಂಚೈಸಿನ ಮೊದಲ ಎರಡು ಅಧ್ಯಾಯಗಳು ಯಶಸ್ವಿಯಾಗಿರುವ ಹಿನ್ನಲೆಯಲ್ಲಿ ಈಗ ಮೂರನೇ ಚಾಪ್ಟರ್ ನಲ್ಲಿ ರಾಣಾ ದಗ್ಗುಬಟಿ ನಟಿಸಲಿದ್ದಾರೆ ಎನ್ನುವ ಸುದ್ದಿ ಈಗ ಹರಿದಾಡುತ್ತಿದೆ.ಈಗಾಗಲೇ ಕೆಜಿಎಫ್ 2 ಚಿತ್ರದಲ್ಲಿ ಅಧೀರಾ ಪಾತ್ರ ಸತ್ತಿರುವುದರಿಂದ ಮುಂಬರುವ ಕೆಜಿಎಫ್ 3 ನಲ್ಲಿ ರಾಣಾ ದಗ್ಗುಬಟಿ ಪ್ರಮುಖ ಖಳನಾಯಕನ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ.
ಎಪ್ರಿಲ್ 14 ರಂದು ವಿಶ್ವದಾದ್ಯಂತ ಕೆಜಿಎಫ್ 2 ಚಿತ್ರವು ಬಿಡುಗಡೆಯಾದಾಗಿನಿಂದ ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆಗಳನ್ನೇ ನಿರ್ಮಿಸುತ್ತಿದೆ. ಈಗಾಗಲೇ 1000 ಕೋಟಿ ಕ್ಲಬ್ ನ್ನು ತಲುಪುವ ಮೂಲಕ ಈ ಸಾಧನೆ ಮಾಡಿದ ನಾಲ್ಕನೇ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಕಿಚ್ಚ ಸುದೀಪ್ ಹೇಳಿಕೆ ನೀಡಿದ್ದ ಬೆನ್ನಲ್ಲೇ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದ ಹಿಂದಿ ನಟ ಅಜಯ್ ದೇವಗನ್ ಹೇಳಿಕೆಗೆ ಈಗ ಬಾಲಿವುಡ್ ನಲ್ಲಿಯೇ ವಿರೋಧ ವ್ಯಕ್ತವಾಗಿದೆ.
ವಿಶ್ವದಾದ್ಯಂತ ಕೆಜಿಎಫ್ 2 ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ನಾಗಲೋಟದಲ್ಲಿ ಮುನ್ನುಗುತ್ತಿದೆ, ಆ ಮೂಲಕ ಭಾರತೀಯ ಸಿನಿ ಜಗತ್ತಿನ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕುತ್ತಿದೆ.ಇಂತಹ ಸಂದರ್ಭದಲ್ಲಿ ಚಿತ್ರದ ಯಶಸ್ಸಿನ ಬಗ್ಗೆ ಸಂತಸಗೊಂಡಿರುವ ಬಾಲಿವುಡ್ ನ ಹಿರಿಯ ನಟ ಸಂಜಯ್ ದತ್ ಈಗ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಕೆಜಿಎಫ್ 2 ಎಂಬ ಬಾಕ್ಸ್ ಆಫೀಸ್ ಸುನಾಮಿಗೆ ಭಾರತೀಯ ಸಿನಿಮಾದ ಎಲ್ಲಾ ದಾಖಲೆಗಳು ದಿನದಿಂದ ದಿನಕ್ಕೆ ಧೂಳಿಪಟವಾಗುತ್ತಿವೆ, ಹೌದು ಈಗ ಕೆಜಿಎಫ್ ಅಂದರೆ ಹಾಗೆ, ಇದು ಭಾರತೀಯ ಚಿತ್ರರಂಗದಲ್ಲಿ ಸೃಷ್ಟಿಸಿರುವ ಹವಾ ಮಾತ್ರ ಅಂತಿಂತದ್ದಲ್ಲ, ಇದರ ಅಬ್ಬರಕ್ಕೆ ಈಗ ಹಿಂದಿ ಸಿನಿಮಾಗಳೇ ತನ್ನ ರಿಲೀಸ್ ದಿನಾಂಕವನ್ನು ಮುಂದೂಡಿ ಬಿಟ್ಟಿವೆ ಅಷ್ಟರ ಮಟ್ಟಿಗೆ ಇದು ಬಾಕ್ಸ್ ಆಫೀಸ್ ನಲ್ಲಿ ತನ್ನ ಮೇನಿಯಾವನ್ನು ಸೃಷ್ಟಿಸಿದೆ.
ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿ ನಟಿಸಿರುವ ಕೆಜಿಎಫ್ ಚಾಪ್ಟರ್ 2 ಎರಡು ದಿನಗಳಲ್ಲಿ ಅಭೂತ ಪೂರ್ವ ₹300 ಕೋಟಿ ಗಳಿಸಿದೆ.ಗುರುವಾರದಂದು ಬಿಡುಗಡೆಯಾದ ಈ ಚಿತ್ರ ಹಿಂದಿಯಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ.
ಯಶ್ ಅಭಿನಯದ KGF Chapter 2 ಚಿತ್ರ ಬಿಡುಗಡೆ ದಿನಾಂಕ ಇಂದು ಘೋಷಣೆಯಾಗಲಿದೆ ಎಂದು ಚಿತ್ರದ ತಂಡ ಘೋಷಿಸಿದೆ.ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಘೋಷಿಸಿರುವ ಪ್ರಕಾರ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಇಂದು ಸಂಜೆ 6.32 ಕ್ಕೆ ಪ್ರಕಟಿಸಲಾಗುತ್ತದೆ ಎನ್ನಲಾಗಿದೆ.
ಬಹುನಿರೀಕ್ಷಿತ ಕೆಜಿಎಫ್ 2 ಚಿತ್ರದ ಟೀಸರ್ ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇ ದಿನದಂದು ಬಿಡುಗಡೆಯಾಗಬೇಕಾಗಿತ್ತು ಆದರೆ,ಆನ್ ಲೈನ್ ನಲ್ಲಿ ಸೋರಿಕೆ ಆದ ಹಿನ್ನಲೆಯಲ್ಲಿ ನಾಳೆ ರಿಲಿಸ್ ಆಗಬೇಕಿದ್ದ ಟ್ರಿಸರ್ ನ್ನು ಇಂದೇ ಬಿಡುಗಡೆ ಮಾಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.