ಬಾಹುಬಲಿ-2' ಮಾಡಿದ್ದ ದಾಖಲೆ ಸರಿಗಟ್ಟಿದ 'ಕೆಜಿಎಫ್-2'..! ಏನದು ಹೊಸ ಇತಿಹಾಸ ಗೊತ್ತಾ..?

Written by - Malathesha M | Edited by - Manjunath N | Last Updated : May 15, 2022, 09:20 PM IST
  • ಅದರಲ್ಲೂ ಬಾಲಿವುಡ್‌ನ ಹಲವು ಹಳೆಯ ಸಿನಿಮಾಗಳು ರಾಕಿಭಾಯ್‌ ಆರ್ಭಟದ ಎದುರು ಧೂಳ್‌ ಆಗಿವೆ.
  • ಕೆಜಿಎಫ್-2' ರಿಲೀಸ್‌ ಆದ ದಿನದಿಂದ ಇಲ್ಲಿಯವರೆಗೂ ನೂರಾರು ದಾಖಲೆಗಳನ್ನ ಪುಡಿ ಪುಡಿ ಮಾಡಿದೆ.
 ಬಾಹುಬಲಿ-2' ಮಾಡಿದ್ದ ದಾಖಲೆ ಸರಿಗಟ್ಟಿದ 'ಕೆಜಿಎಫ್-2'..! ಏನದು ಹೊಸ ಇತಿಹಾಸ ಗೊತ್ತಾ..? title=

'ಕೆಜಿಎಫ್-2' ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಯಾಕಂದ್ರೆ ಬಾಕ್ಸ್‌ ಆಫಿಸ್‌ನಲ್ಲಿ 'ಕೆಜಿಎಫ್' ಚಾಪ್ಟರ್‌ 2 ಮಾಡಿರುವ ಸಾಧನೆಯೇ ಅಂತಹದ್ದು.'ಕೆಜಿಎಫ್-2' ರಿಲೀಸ್‌ ಆದ ದಿನದಿಂದ ಇಲ್ಲಿಯವರೆಗೂ ನೂರಾರು ದಾಖಲೆಗಳನ್ನ ಪುಡಿ ಪುಡಿ ಮಾಡಿದೆ. ಅದರಲ್ಲೂ ಬಾಲಿವುಡ್‌ನ ಹಲವು ಹಳೆಯ ಸಿನಿಮಾಗಳು ರಾಕಿಭಾಯ್‌ ಆರ್ಭಟದ ಎದುರು ಧೂಳ್‌ ಆಗಿವೆ.ಇದೇ ಸಂದರ್ಭದಲ್ಲಿ 'ಕೆಜಿಎಫ್-2' ಮತ್ತೊಂದು ರೆಕಾರ್ಡ್‌ ಕ್ರಿಯೇಟ್‌ ಮಾಡಿದೆ.

ಅಂದ ಹಾಗೆ ವರ್ಲ್ಡ್‌ ವೈಡ್‌ ಬಾಕ್ಸ್‌ ಆಫಿಸ್‌ನಲ್ಲಿ 'ಕೆಜಿಎಫ್-2' ಸಾವಿರ ಕೋಟಿ ರೂಪಾಯಿ ಗಡಿ ದಾಟಿರೋದು ಈಗಾಗಲೇ ಗೊತ್ತಿರುವ ಸಂಗತಿ.ಆದರೆ ಈಗ ಮತ್ತೊಂದು ಇತಿಹಾಸವನ್ನ ಸೃಷ್ಟಿಸಿದೆ ಕೆಜಿಎಫ್‌ ಚಾಪ್ಟರ್‌ 2. ಆ ಇತಿಹಾಸ ಏನಂದ್ರೆ, ಭಾರತದ ಬಾಕ್ಸ್‌ ಆಫಿಸ್‌ನಲ್ಲೇ ಸಾವಿರ ಕೋಟಿ ಬಾರ್ಡರ್‌ ದಾಟಿದೆ ರಾಕಿಂಗ್‌ ಸ್ಟಾರ್‌ ಯಶ್‌ ಅವರ ಸಿನಿಮಾ.

ದಾಖಲೆ ಧೂಳ್..!
ಹಿಂದೆ 'ಬಾಹುಬಲಿ-2' ಮಾಡಿದ್ದ ದಾಖಲೆಯನ್ನು 'ಕೆಜಿಎಫ್' ಚಾಪ್ಟರ್‌ 2 ನಿರ್ಮಿಸಿದೆ. ಈ ಮೂಲಕ ಬಾಲಿವುಡ್‌ ಸಿನಿಮಾಗಳ ದಾಖಲೆ‌ ಧೂಳ್‌ ಧೂಳ್ ಆಗಿದೆ. 'ಕೆಜಿಎಫ್-2' ನಿರ್ಮಿಸುತ್ತಿರುವ ಇತಿಹಾಸ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಎಂದೆಂದಿಗೂ ಅಜರಾಮರ ಎಂಬಂತಾಗಿದೆ. ಹೀಗಾಗಿಯೇ 'ಕೆಜಿಎಫ್' ಚಾಪ್ಟರ್‌ 3 ಕುರಿತು ಕುತೂಹಲ ದಿನದಿಂದ ದಿನಕ್ಕೆ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

ಒಟ್ಟಾರೆ ಹೇಳುವುದಾದರೆ 'ಕೆಜಿಎಫ್' ಚಾಪ್ಟರ್‌ 2 ಕಣ್ತುಂಬಿಕೊಂಡಿರುವ ಪ್ರೇಕ್ಷಕ ಪ್ರಭು,'ಕೆಜಿಎಫ್' ಚಾಪ್ಟರ್‌ 3 ಯಾವಾಗ ಬರುತ್ತೆ ಅಂತಾ ಉಸಿರನ್ನ ಬಿಗಿ ಹಿಡಿದು ಕಾಯುತ್ತಿದ್ದಾರೆ. ಇನ್ನೇನು ಸಧ್ಯದಲ್ಲಿಯೇ ಅಭಿಮಾನಿಗಳಿಗೆ ಈ ಕುರಿತು ಬಿಗ್‌ ಅಪ್‌ಡೇಟ್‌ ಸಿಗುವ ನಿರೀಕ್ಷೆ ಇದ್ದು, ಕುತೂಹಲ ದುಪ್ಪಟ್ಟಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News