close

News WrapGet Handpicked Stories from our editors directly to your mailbox

150 ಕೋಟಿ ಕ್ಲಬ್ ಸೇರಿದ ಕನ್ನಡದ ಮೊದಲ ಚಿತ್ರ KGF!

ಮತ್ತೊಂದು ಇತಿಹಾಸ ಬರೆದ 'ಕೆಜಿಎಫ್'

Yashaswini V Yashaswini V | Updated: Jan 2, 2019 , 01:03 PM IST
150 ಕೋಟಿ ಕ್ಲಬ್ ಸೇರಿದ ಕನ್ನಡದ ಮೊದಲ ಚಿತ್ರ KGF!

ಬೆಂಗಳೂರು: ಬಾಲಿವುಡ್‌ನಲ್ಲೂ ಇತಿಹಾಸ ನಿರ್ಮಿಸಿದ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಚಿತ್ರ ಬಾಕ್ಸ್ ಆಫೀಸ್ ನಲ್ಲೂ ಇತಿಹಾಸ ನಿರ್ಮಿಸಿದೆ. ಕೆಜಿಎಫ್ ಚಿತ್ರ ಭಾರತದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು  10ನೇ ದಿನಕ್ಕೆ 150 ಕೋಟಿ ಕ್ಲಬ್ ಸೇರುವ ಮೂಲಕ ಮತ್ತೊಂದು ಹೊಸ ಇತಿಹಾಸ ನಿರ್ಮಿಸಿದೆ.

ಐದೂ ಭಾಷೆಗಳಲ್ಲಿ ಗೆಲುವಿನ ನಗೆ ಬೀರಿರುವ ‘ಕೆಜಿಎಫ್​’ ಚಿತ್ರ ಬಾಲಿವುಡ್‌ನಲ್ಲೂ ಧೂಳೆಬ್ಬಿಸಿದೆ. ಭರ್ಜರಿ ಓಪನಿಂಗ್​ ಪಡೆದುಕೊಂಡಿದ್ದ ಈ ಸಿನಿಮಾ ಮೊದಲ ದಿನವೇ 25 ಕೋಟಿ ರೂ. ಗಳಿಕೆ ಮಾಡಿತ್ತು. ಇಲ್ಲಿಯವರೆಗೂ ಹಿಂದಿ ಆವೃತ್ತಿಯಲ್ಲಿ ಕೆಜಿಎಫ್ ಚಿತ್ರ ಒಟ್ಟಾರೆ 30.45 ಕೋಟಿ ರೂಪಾಯಿ ಗಳಿಸಿರುವ ಕೆಜಿಎಫ್ ಹೊಸ ದಾಖಲೆ ನಿರ್ಮಿಸಿದೆ. 

ಕನ್ನಡದ ಚಿತ್ರವೊಂದು ಈ ಮಟ್ಟಿಗೆ ಸದ್ದು ಮಾಡುತ್ತಿರುವುದು ಇದೇ ಮೊದಲು. ಅಷ್ಟೇ ಅಲ್ಲದೆ 150 ಕೋಟಿ ಕ್ಲಬ್ ಸೇರಿದ ಕನ್ನಡದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.