KGF ಮ್ಯೂಸಿಕ್ ಡೈರೆಕ್ಟರ್ ನಿಜವಾದ ಹೆಸರು ಹೀಗೆ… ರವಿ ಬಸ್ರೂರು ಅಂತ ಅಲ್ಲ! ಸ್ವತಃ ಅವರೇ ಹೇಳಿದ ಶಾಕಿಂಗ್ ಸತ್ಯ

Ravi Basrur Real Name: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಸಂಗೀತ ರಿಯಾಲಿಟಿ ಶೋನಲ್ಲಿ ರವಿ ಬಸ್ರೂರ್ ಇತ್ತೀಚೆಗೆ ತಮ್ಮ ವೃತ್ತಿಜೀವನದ ಬಗ್ಗೆ ಮಾತನಾಡಿದ್ದರು.

Written by - Bhavishya Shetty | Last Updated : Jan 6, 2024, 08:46 PM IST
    • ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸಿನಿಮಾದಿಂದ ರವಿ ಹೆಸರು ಎಲ್ಲೆಡೆ ಸುದ್ದಿಯಾಗಿತ್ತು.
    • ಈ ಸಿನಿಮಾದ ಅದ್ಧೂರಿ ಯಶಸ್ಸಿಗೆ ರವಿ ಅವರ ಸಂಗೀತವೂ ಒಂದು ಕಾರಣ
    • ರವಿ ಬಸ್ರೂರ್ ಇತ್ತೀಚೆಗೆ ತಮ್ಮ ವೃತ್ತಿಜೀವನದ ಬಗ್ಗೆ ಮಾತನಾಡಿದ್ದರು
KGF ಮ್ಯೂಸಿಕ್ ಡೈರೆಕ್ಟರ್ ನಿಜವಾದ ಹೆಸರು ಹೀಗೆ… ರವಿ ಬಸ್ರೂರು ಅಂತ ಅಲ್ಲ! ಸ್ವತಃ ಅವರೇ ಹೇಳಿದ ಶಾಕಿಂಗ್ ಸತ್ಯ title=
Ravi Basrur

Ravi Basrur Real Name: ಇತ್ತೀಚಿನ ದಿನಗಳಲ್ಲಿ ಈ ಒಬ್ಬ ಸಂಗೀತ ನಿರ್ದೇಶಕರ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಅವರು ಬೇರಾರೂ ಅಲ್ಲ, ರವಿ ಬಸ್ರೂರು. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸಿನಿಮಾದಿಂದ ರವಿ ಹೆಸರು ಎಲ್ಲೆಡೆ ಸುದ್ದಿಯಾಗಿತ್ತು. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಸಿನಿಮಾದ ಅದ್ಧೂರಿ ಯಶಸ್ಸಿಗೆ ರವಿ ಅವರ ಸಂಗೀತವೂ ಒಂದು ಕಾರಣ. ಅದರಲ್ಲೂ ಹೀರೋ ಎಲಿವೇಶನ್ಸ್’ನಲ್ಲಿ ಅವರ ಬಿಜಿಎಂ ಸಿನಿಮಾದ ಹೈಲೈಟ್. ಇದಷ್ಟೇ ಅಲ್ಲದೆ, ಇತ್ತೀಚೆಗಷ್ಟೇ ಸಲಾರ್ ಸಿನಿಮಾಗೂ ಕೂಡ ರವಿ ಬಸ್ರೂರ್ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ: ಸ್ಯಾಂಡಲ್ವುಡ್’ಗೆ 'ಕ' ಅಕ್ಷರವೇ ಬಹಳ ಲಕ್ಕಿ..! 2023ರ ದಾಖಲೆಯನ್ನೊಮ್ಮೆ ನೋಡಿ!

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಸಂಗೀತ ರಿಯಾಲಿಟಿ ಶೋನಲ್ಲಿ ರವಿ ಬಸ್ರೂರ್ ಇತ್ತೀಚೆಗೆ ತಮ್ಮ ವೃತ್ತಿಜೀವನದ ಬಗ್ಗೆ ಮಾತನಾಡಿದ್ದರು. ಒಂದು ಕಾಲದಲ್ಲಿ ರವಿ ಬಸ್ರೂರು ಕುಲುಮೆ ಕೆಲಸ ಮಾಡುತ್ತಿದ್ದರು. ಆದರೂ ಅವರಿಗೆ ಆಸಕ್ತಿ ಇದ್ದದ್ದು, ಸಂಗೀತ ನಿರ್ದೇಶನದ ಮೇಲೆ.

ಸಿನಿಮಾ ಆಸಕ್ತಿಯಿಂದ ಮನೆಬಿಟ್ಟು ಹೊರಬಂದರು ರವಿ ಬಸ್ರೂರ್. ಆಗ ಕೈಯಲ್ಲಿ ಒಂದು ರೂಪಾಯಿಯೂ ಇರಲಿಲ್ಲ. ಮೂರು ದಿನದಿಂದ ಊಟ ಕೂಡ ಮಾಡಿರಲಿಲ್ಲ.. ನೀರು ಕುಡಿಯುತ್ತಾ ಜೀವನ ನಡೆಸಿದ್ದರು. ಆ ಟೈಂನಲ್ಲಿ ದೇವಸ್ಥಾನದಲ್ಲಿ ಯಾವ ದಿನ ಪ್ರಸಾದ ಸಿಗುತ್ತೆ ಅನ್ನೋ ಪಟ್ಟಿ ಕೂಡ ಮಾಡಿಟ್ಟುಕೊಂಡಿದ್ದರಂತೆ. ಆದರೆ ಒಂದು ದಿನ ಪ್ರಸಾದ ಸಿಕ್ಕಿರಲಿಲ್ಲ. ಬೇಸರದಿಂದಿದ್ದ ರವಿಯವರನ್ನು, ಒಬ್ಬ ವೃದ್ಧ ನೋಡಿ ಚಿನ್ನದ ಕೆಲಸ ಮಾಡುವ ವ್ಯಕ್ತಿಯ ಬಳಿಗೆ ಕರೆದುಕೊಂಡು ಹೋದರಂತೆ, ಅಲ್ಲಿ ಈ ಹುಡುಗನಿಗೆ ಕೆಲಸ ಕೊಡಿ ಎಂದು ಆ ವೃದ್ಧ ವ್ಯಕ್ತಿ ಕೇಳಿಕೊಂಡಾಗ, ರವಿಯವರೇ ಸ್ವತಃ ನನಗೆ ಕೆಲಸ ಬೇಡ ಎಂದರಂತೆ. ಅದಕ್ಕೆ ಇನ್ನೇನು ಬೇಕು ಎಂದು ಕೇಳಿದಾಗ, ನನಗೆ ಕೀಬೋರ್ಡ್ ಬೇಕೆಂದು ಹೇಳಿದರಂತೆ. ಎಷ್ಟು ದುಡ್ಡಾಗುತ್ತೆ ಎಂದು ಕೇಳಿದಾಗ, 35 ಸಾವಿರ ಎಂದರಂತೆ ರವಿ. ಒಂದು ಕ್ಷಣವೂ ಯೋಚಿಸದೆ ಆ ವ್ಯಕ್ತಿ ಹಣವನ್ನು ಕೊಟ್ಟು, ದುಡಿದ ನಂತರ ಹಣ ಸಂದಾಯ ಮಾಡು ಎಂದು ಹೇಳಿದರಂತೆ.

ಇದನ್ನೂ ಓದಿ: ಪ್ರತಿಸ್ಪರ್ಧಿಗೆ ಹೊಡೆದು ಬಿಗ್ ಬಾಸ್’ನಿಂದ ಹೊರ ಹೋಗಿದ್ದ ಖ್ಯಾತ ನಟ ರಿ-ಎಂಟ್ರಿ! ದೊಡ್ಮನೆ ಇತಿಹಾಸದಲ್ಲಿ ಇದೇ ಮೊದಲು…

ಅಂದು ತನಗೆ ಪರಿಚಯವೇ ಇಲ್ಲದ ವ್ಯಕ್ತಿಯೊಬ್ಬರು ಹಣ ನೀಡಿ ಪ್ರೋತ್ಸಾಹಿಸಿದರು. ಅದೇ ಕಾರಣಕ್ಕೆ ಅವರ ಹೆಸರನ್ನು ನಾನು ಇಟ್ಟುಕೊಂಡಿದ್ದೇನೆ. ನನ್ನ ನಿಜವಾದ ಹೆಸರು ಕಿರಣ್, ಆದರೆ ರವಿ ಬಸ್ರೂರ್ ಎಂದು ಕರೆದರೆ ನನಗೆ ಸಂತೋಷವಾಗುತ್ತದೆ ಎಂದು ರವಿ ಬಸ್ರೂರ್ ಸ್ವತಃ ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

Trending News