Sanvi Sudeep: ʻಜಿಮ್ಮಿʼ ಚಿತ್ರದ ಮೂಲಕ ಸುದೀಪ್ ಪುತ್ರಿ ಸಾನ್ವಿ ಸಿನಿರಂಗಕ್ಕೆ ಎಂಟ್ರಿ!

Kiccha Sudeep Daughter Sanvi : ಕಂಠಸಿರಿಯ ಮೂಲಕ ಮೋಡಿ ಮಾಡುತ್ತಾರೆ. ಇದೀಗ ಸಾನ್ವಿ ಸಹ ತಂದೆಯ ಹಾದಿಯನ್ನು ಅನುಸರಿಸಲು ರೆಡಿಯಾಗಿದ್ದಾರೆ. ಸಿನಿರಂಗದಲ್ಲಿ ದೊಡ್ಡ ಹೆಸರು ಮಾಡಲು ಸಜ್ಜಾಗಿದ್ದಾರೆ.   

Written by - Chetana Devarmani | Last Updated : Jun 30, 2023, 11:21 AM IST
  • ಸುದೀಪ್ ಪುತ್ರಿ ಸಾನ್ವಿ ಸಿನಿರಂಗಕ್ಕೆ ಎಂಟ್ರಿ
  • ʻಜಿಮ್ಮಿʼ ಚಿತ್ರದ ಮೂಲಕ ಸಿನಿರಂಗಕ್ಕೆ ಪದಾರ್ಪಣೆ
  • ದೊಡ್ಡ ಹೆಸರು ಮಾಡಲು ಸಜ್ಜಾದ ಸಾನ್ವಿ ಸುದೀಪ್‌
Sanvi Sudeep: ʻಜಿಮ್ಮಿʼ ಚಿತ್ರದ ಮೂಲಕ ಸುದೀಪ್ ಪುತ್ರಿ ಸಾನ್ವಿ ಸಿನಿರಂಗಕ್ಕೆ ಎಂಟ್ರಿ!  title=
Sanvi Sudeep

 Sanvi Sudeep: ಕಿಚ್ಚ ಸುದೀಪ್‌ ಕನ್ನಡ ಚಿತ್ರರಂಗದ ಬಹುಬೇಡಿಕೆಯ ಮತ್ತು ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು. ತೆಲುಗು ಮತ್ತು ತಮಿಳು ಚಿತ್ರರಂಗಕ್ಕೂ ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಮಗಳು ಸಾನ್ವಿ ಸುದೀಪ್. ಕಂಠಸಿರಿಯ ಮೂಲಕ ಮೋಡಿ ಮಾಡುತ್ತಾರೆ. ಇದೀಗ ಸಾನ್ವಿ ಸಹ ತಂದೆಯ ಹಾದಿಯನ್ನು ಅನುಸರಿಸಲು ರೆಡಿಯಾಗಿದ್ದಾರೆ. ಸಿನಿರಂಗದಲ್ಲಿ ದೊಡ್ಡ ಹೆಸರು ಮಾಡಲು ಸಜ್ಜಾಗಿದ್ದಾರೆ. ಸ್ಟಾರ್ ಕಿಡ್ ಸಾನ್ವಿ ಸುದೀಪ್‌ ಇತ್ತೀಚೆಗೆ ಜಿಮ್ಮಿ ಚಿತ್ರದಲ್ಲಿ ಒಂದು ಹಾಡನ್ನು ಹಾಡಿದ್ದು, ಕೇಳುತ್ತಿದ್ದರೆ ಸಂಗೀತದ ಕಡಲಲ್ಲಿ ತೇಲುವ ಅನುಭವ ನೀಡುವಂತಿದೆ. ಜಿಮ್ಮಿ ಚಿತ್ರದ ಮೂಲಕ ಗಾಯಕಿಯಾಗಿ ಸಾನ್ವಿ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಇದರಲ್ಲಿ ಸುದೀಪ್ ಅವರ ಸೋದರಳಿಯ ಅಂದರೆ ಅಕ್ಕನ ಮಗ ಸಂಚಿತ್ ಸಂಜೀವ್ ನಟಿಸಿದ್ದಾರೆ.

ಸಾನ್ವಿ ಸುದೀಪ್ ತಮ್ಮ ತಾಯಿ ಪ್ರಿಯಾ ರಾಧಾಕೃಷ್ಣನ್ ಸೇರಿದಂತೆ ತಮ್ಮ ಪ್ರೀತಿಪಾತ್ರರ ಜೊತೆ ಸೆಲಿಬ್ರೆಷನ್‌ ಮಾಡುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಯುವ ತಾರೆ ಸಂತೋಷದಿಂದ ಕಾಣಿಸಿಕೊಂಡಿದ್ದಾರೆ. ಮತ್ತೊಂದು ಫೋಟೋದಲ್ಲಿ, ಅವರು ತನ್ನ ಸೋದರಸಂಬಂಧಿ ಸಂಚಿತ್ ಸಂಜೀವ್ ಜೊತೆಗೆ ಪೋಸ್‌ ನೀಡಿದ್ದಾರೆ. ಜಿಮ್ಮಿ (#Jimmy) ಎಂಬ ಹ್ಯಾಶ್‌ಟ್ಯಾಗ್ ಅನ್ನು ಇದಕ್ಕೆ ನೀಡಿದ್ದಾರೆ.

ಇದನ್ನೂ ಓದಿ: ಜೋಶ್ ನಿಂದ ‘ಜವಾನ್’ ನೋಡಿ. ಅಭಿಮಾನಿಗಳಿಗೆ ಕಿಂಗ್ ಖಾನ್ ಕರೆ 

ಹಲವಾರು ಅಭಿಮಾನಿಗಳು ಫೋಟೋ ಮತ್ತು ಅವರ ಗಾಯನದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ಅವರು ಜಿಮ್ಮಿ ಎಂಬ ಶೀರ್ಷಿಕೆಯ ಚಲನಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಈ ಸಿನಿಮಾವನ್ನು ಸಂಚಿತ್‌ ಅವರೇ ನಿರ್ದೇಶಿಸಿದ್ದಾರೆ. ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಅವರ ಒಡೆತನದ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಈ ಚಿತ್ರವನ್ನು ಲಹಿರಿ ಫಿಲ್ಮ್ಸ್ ಮತ್ತು ವೀನಸ್ ಎಂಟರ್‌ಟೈನರ್ಸ್ ಸಹಯೋಗದೊಂದಿಗೆ ನಿರ್ಮಿಸುತ್ತಿದೆ. 

 

 
 
 
 
 

 

ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ರಾಜಕುಮಾರಿ ಹಾಡನ್ನು ಹಾಡಿ ಆನ್‌ಲೈನ್‌ನಲ್ಲಿ ಅಭಿಮಾನಿಗಳ ಮನ ಗೆದ್ದಿದ್ದ ಸಾನ್ವಿ ಸುದೀಪ್ ಈಗ ಹಿನ್ನೆಲೆ ಗಾಯಕಿಯಾಗಿ ಸಿನಿರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಅವರು ತಮ್ಮ ಬ್ಯಾಂಡ್ ದಿ ಸಾನ್ವಿ ಕಲೆಕ್ಟಿವ್‌ನ ಭಾಗವಾಗಿ ಲೈವ್‌ ಕಾನ್ಸರ್ಟ್‌ಗಳನ್ನು ನೀಡುತ್ತಿರುತ್ತಾರೆ. ಈಗ, ಅವರು ಮುಂಬರುವ ಚಿತ್ರ ಜಿಮ್ಮಿಯಲ್ಲಿ ಗಾಯಕಿ ಮತ್ತು ಗೀತರಚನೆಕಾರರಾಗಿ ಪದಾರ್ಪಣೆ ಮಾಡಿದ್ದಾರೆ.

ಇದನ್ನೂ ಓದಿ: ಊಟ, ನೀರಿನಂತೆ ʻಆ ಸುಖʼ ಸಹ ಮಹಿಳೆಯರಿಗೆ ಮುಖ್ಯ: ಕಾಜೊಲ್ ದಿಟ್ಟ ಮಾತು ವೈರಲ್‌ !

ಜೂನ್ 25 ರಂದು ಜಿಮ್ಮಿಯ ಮೊದಲ ಟೀಸರ್‌ ಬಿಡುಗಡೆಯಾಯಿತು. ಈ ಟೀಸರ್‌ ಮೂಲಕ ಸಂಚಿತ್‌ ಸಂಜೀವ್‌ ಅವರನ್ನು ಇಂಟ್ರಡ್ಯೂಸ್‌ ಮಾಡಲಾಯಿತು. ಈ ಕ್ಲಿಪ್‌ನಲ್ಲಿ ಗಮನ ಸೆಳೆಯುವುದು ಹಿನ್ನೆಲೆ ಸಂಗೀತ ಮತ್ತು ಸಾನ್ವಿ ಸುದೀಪ್ ಹಾಡಿರುವ ಇಂಗ್ಲಿಷ್ ಟ್ರ್ಯಾಕ್.

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

  

Trending News