Vikrant Rona Trailer Launch: ವಿಕ್ರಾಂತ್ ರೋಣ’ ಟ್ರೈಲರ್‌ ರಿಲೀಸ್‌..! ಎಲ್ಲೆಲ್ಲೂ ಕಿಚ್ಚ ಸುದೀಪ್ ಹವಾ..!

‘ವಿಕ್ರಾಂತ್ ರೋಣ’ ಟ್ರೈಲರ್‌ ಇಂದು ಸಂಜೆ 5 ಗಂಟೆಗೆ ಅಧಿಕೃತವಾಗಿ ರಿಲೀಸ್‌ ಆಗಿದ್ದು ಸೋಷಿಯಲ್‌ ಮೀಡಿಯಾದಲ್ಲಿ ‘ವಿಕ್ರಾಂತ್ ರೋಣ’ ಅಭಿಮಾನಿಗಳ ಅಬ್ಬರ ಜೋರಾಗಿದೆ. ಟ್ರೈಲರ್‌ ನೋಡಿ ಫಿದಾ ಆಗಿರುವ ನಟ ಕಿಚ್ಚ ಸುದೀಪ್‌ ಫ್ಯಾನ್ಸ್, ಸಿನಿಮಾ ಯಾವಾಗ ಕಣ್ತುಂಬಿಕೊಳ್ತಿವೋ ಅಂತಾ ಕಾಯ್ತಿದ್ದಾರೆ.

Written by - Malathesha M | Edited by - Manjunath N | Last Updated : Jun 23, 2022, 05:22 PM IST
  • ‘ವಿಕ್ರಾಂತ್ ರೋಣ’ ಟ್ರೈಲರ್‌ ಇಂದು ಸಂಜೆ 5 ಗಂಟೆಗೆ ಅಧಿಕೃತವಾಗಿ ರಿಲೀಸ್‌ ಆಗಿದ್ದು ಸೋಷಿಯಲ್‌ ಮೀಡಿಯಾದಲ್ಲಿ ‘ವಿಕ್ರಾಂತ್ ರೋಣ’ ಅಭಿಮಾನಿಗಳ ಅಬ್ಬರ ಜೋರಾಗಿದೆ.
  • ಇಂದು ಯುಟ್ಯೂಬ್‌ನಲ್ಲಿ ಅಧಿಕೃತವಾಗಿ ಸಿನಿಮಾ ರಿಲೀಸ್‌ ಆಗಿದ್ದು, ಕಿಚ್ಚ ಸುದೀಪ್‌ ಅಭಿಮಾನಿಗಳಿಗೆ ಹಬ್ಬದ ವಾತಾವರಣ ಕ್ರಿಯೇಟ್‌ ಆದಂತಾಗಿದೆ.
Vikrant Rona Trailer Launch: ವಿಕ್ರಾಂತ್ ರೋಣ’ ಟ್ರೈಲರ್‌ ರಿಲೀಸ್‌..! ಎಲ್ಲೆಲ್ಲೂ ಕಿಚ್ಚ ಸುದೀಪ್ ಹವಾ..! title=

ಬೆಂಗಳೂರು: ‘ವಿಕ್ರಾಂತ್ ರೋಣ’ ಟ್ರೈಲರ್‌ ಇಂದು ಸಂಜೆ 5 ಗಂಟೆಗೆ ಅಧಿಕೃತವಾಗಿ ರಿಲೀಸ್‌ ಆಗಿದ್ದು ಸೋಷಿಯಲ್‌ ಮೀಡಿಯಾದಲ್ಲಿ ‘ವಿಕ್ರಾಂತ್ ರೋಣ’ ಅಭಿಮಾನಿಗಳ ಅಬ್ಬರ ಜೋರಾಗಿದೆ. ಟ್ರೈಲರ್‌ ನೋಡಿ ಫಿದಾ ಆಗಿರುವ ನಟ ಕಿಚ್ಚ ಸುದೀಪ್‌ ಫ್ಯಾನ್ಸ್, ಸಿನಿಮಾ ಯಾವಾಗ ಕಣ್ತುಂಬಿಕೊಳ್ತಿವೋ ಅಂತಾ ಕಾಯ್ತಿದ್ದಾರೆ.

ಬಹುನಿರೀಕ್ಷಿತ ಕನ್ನಡಿಗರ ಸಿನಿಮಾ, ಪ್ಯಾನ್‌ ವರ್ಲ್ಡ್‌ ಮೂವಿ ‘ವಿಕ್ರಾಂತ್ ರೋಣ’ ಟ್ರೈಲರ್‌ ಇಂದು ಅದ್ಧೂರಿಯಾಗಿ 6 ಭಾಷೆಗಳಲ್ಲಿ ರಿಲೀಸ್‌ ಆಗಿದೆ. ವಿವಿಧ ಭಾಷೆಗಳಲ್ಲಿ ‘ವಿಕ್ರಾಂತ್ ರೋಣ’ ಟ್ರೈಲರ್‌ ಅನ್ನ ಸೆಲೆಬ್ರಿಟಿಗಳು ರಿಲೀಸ್‌ ಮಾಡಿದ್ದು, ಎಲ್ಲೆಲ್ಲೂ ‘ವಿಕ್ರಾಂತ್ ರೋಣ’ ಟ್ರೈಲರ್‌‌ ದೊಡ್ಡ ಹವಾ ಎಬ್ಬಿಸಿದೆ. ಅದರಲ್ಲೂ ಯುಟ್ಯೂಬ್‌ನಲ್ಲಿ ಹೊಸ ಟ್ರೆಂಡ್‌ ಹುಟ್ಟುಹಾಕುವಲ್ಲಿ ಕನ್ನಡ ಸಿನಿಮಾ ‘ವಿಕ್ರಾಂತ್ ರೋಣ’ ಯಶಸ್ವಿಯಾಗಿದೆ.

ಇದನ್ನೂ ಓದಿ: ರಕ್ಷಿತ್‌ ಶೆಟ್ಟಿಯನ್ನ ನಟ ಕಿಚ್ಚ ಸುದೀಪ್ ಅಪ್ಪಿಕೊಂಡಿದ್ದು ಯಾಕೆ..?

ಹಾಲಿವುಡ್‌ನಲ್ಲೂ ಹವಾ..!
ಅಂದಹಾಗೆ ಕನ್ನಡಿಗರ ಚಿತ್ರವೊಂದು ಇದೇ ಮೊದಲ ಬಾರಿಗೆ ಅಧಿಕೃತವಾಗಿ ಹಾಲಿವುಡ್‌ ಬಾಗಿಲು ಬಡಿಯುತ್ತಿದೆ. ‘ಪ್ಯಾನ್‌ ಇಂಡಿಯಾ’ ಅಲ್ಲ ‘ಪ್ಯಾನ್‌ ವರ್ಲ್ಡ್‌’ ಅನ್ನೋದನ್ನ ಅಭಿಮಾನಿಗಳ ಪಾಲಿನ ಪ್ರೀತಿಯ ನಟ ಅಭಿನಯ ಚಕ್ರವರ್ತಿ ಸುದೀಪ್‌ ಅವರು ತೋರಿಸಿಕೊಟ್ಟಿದ್ದಾರೆ. ಇನ್ನು ಈ ಹೊತ್ತಲ್ಲೇ ವಿಕ್ರಾಂತ್ ರೋಣ ಟ್ರೈಲರ್‌ ರಿಲೀಸ್‌ ಆಗಿದ್ದು ದೇಶಾದ್ಯಂತ ಹವಾ ಕ್ರಿಯೇಟ್‌ ಮಾಡಿದೆ. ನಟ ಕಿಚ್ಚ ಸುದೀಪ್‌ ಅಭಿಮಾನಿ ಬಳಗಕ್ಕೆ ಇದು ‘ಡಬಲ್‌ ಸರ್ಪ್ರೈಸ್‌’ ಎನ್ನಬಹುದು.

ಸೆಲೆಬ್ರಿಟಿಗಳ ಸಾಥ್
ಅಂದಹಾಗೆ ಇಂದು ‘ವಿಕ್ರಾಂತ್ ರೋಣ’ ಟ್ರೈಲರ್‌ ಅಧಿಕೃತವಾಗಿ ರಿಲೀಸ್‌ ಆಗಿದ್ದರೂ, ನಿನ್ನೆ ಬೆಂಗಳೂರಿನ ಖಾಸಗಿ ಮಾಲ್‌ನಲ್ಲಿ ದೊಡ್ಡ ಕಾರ್ಯಕ್ರಮ ಆಯೋಜಿಸಿ ‘ವಿಕ್ರಾಂತ್ ರೋಣ’ ಟ್ರೈಲರ್‌ ಅನ್ನ ಮಾಧ್ಯಮ ಪ್ರತಿನಿಧಿಗಳು ಹಾಗೂ ಸೆಲೆಬ್ರಿಟಿಗಳಿಗೆ ತೋರಿಸಲಾಗಿತ್ತು. ನಿನ್ನೆಯಿಂದಲೇ ‘ವಿಕ್ರಾಂತ್ ರೋಣ’ ಟ್ರೈಲರ್ ಮೇಲಿನ ಕುತೂಹಲ ಹತ್ತುಪಟ್ಟು ಹೆಚ್ಚಾಗಿತ್ತು. ಇಂದು ಯುಟ್ಯೂಬ್‌ನಲ್ಲಿ ಅಧಿಕೃತವಾಗಿ ಸಿನಿಮಾ ರಿಲೀಸ್‌ ಆಗಿದ್ದು, ಕಿಚ್ಚ ಸುದೀಪ್‌ ಅಭಿಮಾನಿಗಳಿಗೆ ಹಬ್ಬದ ವಾತಾವರಣ ಕ್ರಿಯೇಟ್‌ ಆದಂತಾಗಿದೆ.

ಅಷ್ಟಕ್ಕೂ ನಿನ್ನೆ ನಡೆದಿದ್ದ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ ಸೆಂಚ್ಯುರಿ ಸ್ಟಾರ್‌ ಶಿವಣ್ಣ, ಕ್ರೆಜಿಸ್ಟಾರ್‌ ವಿ.ರವಿಚಂದ್ರನ್, ಸೇರಿದಂತೆ ರಕ್ಷಿತ್‌ ಶೆಟ್ಟಿ, ರಿಷಬ್‌ ಹಾಗೂ ರಾಜ್‌ ಬಿ. ಶೆಟ್ಟಿ ಟ್ರೈಲರ್‌ ರಿಲೀಸ್‌ ಮಾಡಿದ್ದರು. 3ಡಿ ಎಫೆಕ್ಟ್ ಮೂಲಕ ‘ವಿಕ್ರಾಂತ್ ರೋಣ’ ಟ್ರೈಲರ್‌ ನೋಡಿದ ಪ್ರತಿಯೊಬ್ಬರೂ ಇದು ‘ನೆಕ್ಸ್ಟ್ ಲೆವೆಲ್‌’ ಅಂತಾ ಹುಬ್ಬೇರಿಸಿದ್ದರು. ಇದೀಗ ಯುಟ್ಯೂಬ್‌ನಲ್ಲಿ ‘ವಿಕ್ರಾಂತ್ ರೋಣ’ ಟ್ರೈಲರ್‌ 6 ಭಾಷೆಗಳಲ್ಲಿ ರಿಲೀಸ್‌ ಆಗಿದ್ದು, ಹೊಸ ಟ್ರೆಂಡ್‌ ಕ್ರಿಯೇಟ್‌ ಮಾಡಿದೆ.

ಇದನ್ನೂ ಓದಿ: ಹೇಗಿದೆ ಗೊತ್ತಾ ‘ವಿಕ್ರಾಂತ್ ರೋಣ’ ಟ್ರೈಲರ್‌..? ಹಾಲಿವುಡ್‌ ಲೆವೆಲ್‌ ಅಂದ್ರು ಫ್ಯಾನ್ಸ್..!

ಇನ್ನೂ ಇದು ಶುರು ಮಾತ್ರ, ಕೆಲವೇ ದಿನಗಳಲ್ಲಿ ‘ವಿಕ್ರಾಂತ್ ರೋಣ’ ಜಗತ್ತಿನ ಸಾವಿರಾರು ಥಿಯೇಟರ್‌ಗಳಲ್ಲಿ, ಹಲವಾರು ಭಾಷೆಗಳಲ್ಲಿ ಗ್ರ್ಯಾಂಡ್‌ ರಿಲೀಸ್‌ ಕಾಣುತ್ತಿದೆ. ಈ ಮೂಲಕ ಕನ್ನಡಿಗರ ಸಿನಿಮಾ ವರ್ಲ್ಡ್‌ ಬಾಕ್ಸ್‌ ಆಫಿಸ್‌ನ ಅಲ್ಲಾಡಿಸಲಿದೆ. ಇದೆಲ್ಲವನ್ನೂ ಕಣ್ತುಂಬಿಕೊಳ್ಳಲು ಜುಲೈ 28ರವರೆಗೂ ಕಾಯಬೇಕಿದ್ದು, ಅಭಿಮಾನಿಗಳಿಗೆ ಹಬ್ಬದೂಟ ಗ್ಯಾರಂಟಿ.

Trending News