ಹೇಗಿದೆ ಗೊತ್ತಾ ‘ವಿಕ್ರಾಂತ್ ರೋಣ’ ಟ್ರೈಲರ್‌..? ಹಾಲಿವುಡ್‌ ಲೆವೆಲ್‌ ಅಂದ್ರು ಫ್ಯಾನ್ಸ್..!

ವಿಕ್ರಾಂತ್ ರೋಣ’ ಟ್ರೈಲರ್‌ ಅಧಿಕೃತವಾಗಿ ರಿಲೀಸ್‌ ಆಗಲು ಕೌಂಟ್‌ಡೌನ್‌ ಶುರುವಾಗಿದೆ. ಆದರೆ ಇದಕ್ಕೂ ಮೊದಲು ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಮಾಲ್‌ನಲ್ಲಿ ಇಂದು ದೊಡ್ಡ ಕಾರ್ಯಕ್ರಮದ ಮೂಲಕ ಮಾಧ್ಯಮದವರಿಗೆ ಹಾಗೂ ಸಿನಿಮಾ ತಂಡದ ಸದಸ್ಯರಿಗೆ ‘ವಿಕ್ರಾಂತ್ ರೋಣ’ನ ದರ್ಶವನ್ನ ಮಾಡಿಸಲಾಯಿತು. ಇನ್ನು ಟ್ರೈಲರ್‌ ಬಗ್ಗೆ ಒಂದೇ ಮಾತಲ್ಲಿ ಹೇಳಬೇಕೆಂದರೆ, ‘ಹಾಲಿವುಡ್‌ ಲೆವೆಲ್‌’ ಅಷ್ಟೇ ಅಂತಾ ಹುಬ್ಬೇರಿಸಿದ್ರು ಅಭಿಮಾನಿಗಳು.

Written by - Malathesha M | Edited by - Manjunath N | Last Updated : Jun 22, 2022, 08:34 PM IST
  • ಬೆಂಗಳೂರಿನ ಖಾಸಗಿ ಮಾಲ್‌ನಲ್ಲಿ ದೊಡ್ಡ ಕಾರ್ಯಕ್ರಮವನ್ನ ಆಯೋಜಿಸಿ ಇಂದು ‘ವಿಕ್ರಾಂತ್ ರೋಣ’ ಟ್ರೈಲರ್‌ ರಿಲೀಸ್‌ ಮಾಡಲಾಯಿತು.
  • ಇನ್ನೂ ಇದು ಶುರು ಮಾತ್ರ, ಕೆಲವೇ ದಿನಗಳಲ್ಲಿ ‘ವಿಕ್ರಾಂತ್ ರೋಣ’ ಜಗತ್ತಿನ ಸಾವಿರಾರು ಥಿಯೇಟರ್‌ಗಳಲ್ಲಿ, ಹಲವಾರು ಭಾಷೆಗಳಲ್ಲಿ ಗ್ರ್ಯಾಂಡ್‌ ರಿಲೀಸ್‌ ಕಾಣುತ್ತಿದೆ.
ಹೇಗಿದೆ ಗೊತ್ತಾ ‘ವಿಕ್ರಾಂತ್ ರೋಣ’  ಟ್ರೈಲರ್‌..? ಹಾಲಿವುಡ್‌ ಲೆವೆಲ್‌ ಅಂದ್ರು ಫ್ಯಾನ್ಸ್..! title=

ಬೆಂಗಳೂರು: ವಿಕ್ರಾಂತ್ ರೋಣ’ ಟ್ರೈಲರ್‌ ಅಧಿಕೃತವಾಗಿ ರಿಲೀಸ್‌ ಆಗಲು ಕೌಂಟ್‌ಡೌನ್‌ ಶುರುವಾಗಿದೆ. ಆದರೆ ಇದಕ್ಕೂ ಮೊದಲು ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಮಾಲ್‌ನಲ್ಲಿ ಇಂದು ದೊಡ್ಡ ಕಾರ್ಯಕ್ರಮದ ಮೂಲಕ ಮಾಧ್ಯಮದವರಿಗೆ ಹಾಗೂ ಸಿನಿಮಾ ತಂಡದ ಸದಸ್ಯರಿಗೆ ‘ವಿಕ್ರಾಂತ್ ರೋಣ’ನ ದರ್ಶವನ್ನ ಮಾಡಿಸಲಾಯಿತು. ಇನ್ನು ಟ್ರೈಲರ್‌ ಬಗ್ಗೆ ಒಂದೇ ಮಾತಲ್ಲಿ ಹೇಳಬೇಕೆಂದರೆ, ‘ಹಾಲಿವುಡ್‌ ಲೆವೆಲ್‌’ ಅಷ್ಟೇ ಅಂತಾ ಹುಬ್ಬೇರಿಸಿದ್ರು ಅಭಿಮಾನಿಗಳು.

ಬೆಂಗಳೂರಿನ ಖಾಸಗಿ ಮಾಲ್‌ನಲ್ಲಿ ದೊಡ್ಡ ಕಾರ್ಯಕ್ರಮವನ್ನ ಆಯೋಜಿಸಿ ಇಂದು ‘ವಿಕ್ರಾಂತ್ ರೋಣ’ ಟ್ರೈಲರ್‌ ರಿಲೀಸ್‌ ಮಾಡಲಾಯಿತು. ಆದರೆ ನಾಳೆ ಅಂದ್ರೆ ಜೂನ್‌ 23‌ಕ್ಕೆ ‘ವಿಕ್ರಾಂತ್ ರೋಣ’ ಟ್ರೈಲರ್‌ ಅಧಿಕೃತವಾಗಿ‌ ಗ್ರ್ಯಾಂಡ್ ರಿಲೀಸ್ ಆಗಲಿದೆ. ಆದ್ರೆ ಇದಕ್ಕೂ ಮೊದಲು ಟ್ರೈಲರ್‌ ಕಣ್ತುಂಬಿಕೊಂಡಿರುವ ಮಾಧ್ಯಮದವರು ಹಾಗೂ ಸಿನಿಮಾ ತಂಡದ ಸಿಬ್ಬಂದಿ ಹುಬ್ಬೇರಿಸಿದರು.

ಇದನ್ನೂ ಓದಿ : Janardhan Reddy : 'ನಾನು ಮನಸ್ಸು ಮಾಡಿದ್ರೆ‌ ಇವತ್ತಾದ್ರು ಒಂದು ದಿನ ಸಿಎಂ ಆಗುವೆ'

3ಡಿ ಎಫೆಕ್ಟ್..!‌

ಕನ್ನಡದ ಚಿತ್ರವೊಂದು ಇದೇ ಮೊದಲ ಬಾರಿಗೆ ಅಧಿಕೃತವಾಗಿ ಹಾಲಿವುಡ್‌ ಬಾಗಿಲು ಬಡಿಯುತ್ತಿದೆ. ‘ಪ್ಯಾನ್‌ ಇಂಡಿಯಾ’ ಅಲ್ಲ ‘ಪ್ಯಾನ್‌ ವರ್ಲ್ಡ್‌’ ಸಿನಿಮಾ ಅನ್ನೋದನ್ನ ಅಭಿಮಾನಿಗಳ ಪಾಲಿನ ಪ್ರೀತಿಯ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರು ತೋರಿಸಿಕೊಟ್ಟಿದ್ದಾರೆ. ಈ ಹೊತ್ತಲ್ಲೇ ‘ವಿಕ್ರಾಂತ್ ರೋಣ’ ಟ್ರೈಲರ್‌ ರಿಲೀಸ್‌ ಆಗಿರುವುದು ದೇಶಾದ್ಯಂತ ದೊಡ್ಡ ಹವಾ ಎಬ್ಬಿಸಿದೆ. ಕಿಚ್ಚ ಸುದೀಪ್‌ ಅಭಿಮಾನಿ ಬಳಗಕ್ಕೆ ಇದು ‘ಡಬಲ್‌ ಸರ್ಪ್ರೈಸ್‌’ ಎನ್ನಬಹುದು.

ಸ್ಯಾಂಡಲ್‌ವುಡ್‌ ಸೆಂಚ್ಯುರಿ ಸ್ಟಾರ್‌ ಶಿವಣ್ಣ, ಕ್ರೆಜಿಸ್ಟಾರ್‌ ವಿ.ರವಿಚಂದ್ರನ್, ಸೇರಿದಂತೆ ರಕ್ಷಿತ್‌ ಶೆಟ್ಟಿ, ರಿಷಬ್‌ ಹಾಗೂ ರಾಜ್‌ ಬಿ. ಶೆಟ್ಟಿ ಟ್ರೈಲರ್‌ ರಿಲೀಸ್‌ ಮಾಡಿದರು. 3ಡಿ ಎಫೆಕ್ಟ್ ಮೂಲಕ ‘ವಿಕ್ರಾಂತ್ ರೋಣ’ ಟ್ರೈಲರ್‌ ನೋಡಿದ ಪ್ರತಿಯೊಬ್ಬರೂ ಇದು ‘ನೆಕ್ಸ್ಟ್ ಲೆವೆಲ್‌’ ಅಂತಾ ಹುಬ್ಬೇರಿಸಿದರು.

ಇದನ್ನೂ ಓದಿ : MS Dhoni: ಕ್ರಿಕೆಟಿಗ ಧೋನಿ ನಿರ್ಮಾಣದ ಮೊದಲ ಚಿತ್ರಕ್ಕೆ ದಳಪತಿ ವಿಜಯ್ ಹೀರೋ!

ಇನ್ನೂ ಇದು ಶುರು ಮಾತ್ರ, ಕೆಲವೇ ದಿನಗಳಲ್ಲಿ ‘ವಿಕ್ರಾಂತ್ ರೋಣ’ ಜಗತ್ತಿನ ಸಾವಿರಾರು ಥಿಯೇಟರ್‌ಗಳಲ್ಲಿ, ಹಲವಾರು ಭಾಷೆಗಳಲ್ಲಿ ಗ್ರ್ಯಾಂಡ್‌ ರಿಲೀಸ್‌ ಕಾಣುತ್ತಿದೆ. ಈ ಮೂಲಕ ಕನ್ನಡಿಗರ ಸಿನಿಮಾ ವರ್ಲ್ಡ್‌ ಬಾಕ್ಸ್‌ ಆಫಿಸ್‌ನ ಅಲ್ಲಾಡಿಸಲಿದೆ. ಇದೆಲ್ಲವನ್ನೂ ಕಣ್ತುಂಬಿಕೊಳ್ಳಲು ಜುಲೈ 28ರವರೆಗೂ ಕಾಯಬೇಕಿದ್ದು, ಅಭಿಮಾನಿಗಳಿಗೆ ಹಬ್ಬದೂಟ ಗ್ಯಾರಂಟಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

 

Trending News