'ತಾಯಂದಿರ ದಿನ'ಕ್ಕೆ ಅಮ್ಮನಿಗೆ ವಿಶ್ ಮಾಡಿದ ಕಿಚ್ಚ ಸುದೀಪ್

ನಟ ಕಿಚ್ಚ ಸುದೀಪ್, ತಾಯಂದಿರ ದಿನದ ಸಂದರ್ಭದಲ್ಲಿ ಅಮ್ಮನೊಂದಿಗೆ ಇರುವ ಫೋಟೋವನ್ನು ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ. 

Updated: May 12, 2019 , 02:30 PM IST
'ತಾಯಂದಿರ ದಿನ'ಕ್ಕೆ ಅಮ್ಮನಿಗೆ ವಿಶ್ ಮಾಡಿದ ಕಿಚ್ಚ ಸುದೀಪ್
Pic Courtesy: Twitter/@KicchaSudeep

ಬೆಂಗಳೂರು: ಇಂದು ಮೇ 12. ಎಲ್ಲೆಡೆ ವಿಶ್ವ ತಾಯಂದಿರ ದಿನದ ಸಂಭ್ರಮ. ಅಮ್ಮ ಎಂದರೆ ಏನೋ ಹರುಷವು....ನಮ್ಮ ಬಾಳಿಗೆ ಅವಳೇ ದೈವವು....' ಎನ್ನುತ್ತಾ ಒಂಬತ್ತು ತಿಂಗಳು ಹೊತ್ತು-ಹೆತ್ತು, ಸಾಕಿ-ಸಲಹಿದ ತಾಯಿಗೆ ಎಲ್ಲರೂ ಶುಭಹಾರೈಸುತ್ತಿದ್ದಾರೆ. ಇದಕ್ಕೆ ಕನ್ನಡ ಚಿತ್ರರಂಗದ ನಟ ಸುದೀಪ್ ಸಹ ಹೊರತಾಗಿಲ್ಲ.

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ನಟ ಕಿಚ್ಚ ಸುದೀಪ್, ತಾಯಂದಿರ ದಿನದ ಸಂದರ್ಭದಲ್ಲಿ ಅಮ್ಮನೊಂದಿಗೆ ಇರುವ ಫೋಟೋವನ್ನು ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ. "ದೇಶದ ಪ್ರತಿಯೊಬ್ಬ ತಾಯಿಗೂ ತಾಯಂದಿರ ದಿನದ ಶುಭಾಶಯಗಳು. ಯಾವುದೇ ಪ್ರತಿಫಲವನ್ನು ನಿರೀಕ್ಷಿಸದೆ, ಮಕ್ಕಳಿಗಾಗಿ ಪ್ರೀತಿಯನ್ನು ಹಂಚುವ ತ್ಯಾಗಮಯಿ ಅವಳು. ಅಮ್ಮ, ನಿಮಗೆ ತಾಯಂದಿರ ದಿನದ ಶುಭಾಶಯಗಳು" ಎಂದು ಸುದೀಪ್ ವಿಶ್ ಮಾಡಿದ್ದಾರೆ.